ಜೈಲಿಗೆ ಬಂತು 6 ಪ್ಯಾಕೆಟ್‌ ಪಾರ್ಸೆಲ್‌! | MKK ರೋಡ್‌ ರೌಡಿ ಹೆಸರಲ್ಲಿ ಲೇಡಿಸ್‌ ಹಲ್ಲೆ | ವಾಕ್‌ ಮಾಡ್ತಿದ್ದಾಗ ಆಘಾತ

13

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 15, 2025 ‌‌ ‌‌

ಸುದ್ದಿ 1 | ವಾಕಿಂಗ್‌ ಹೋಗುತ್ತಿದ್ದಾಗ, ಹೊಡೆದು ಜೇಬಿನಲ್ಲಿದ್ದ ಮೊಬೈಲ್‌ ಕಿತ್ತುಕೊಂಡು ಹೋದ ಘಟನೆಯೊಂದು ಶಿವಮೊಗ್ಗದ ವಿನೋಬನಗರ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.ರಾತ್ರಿ ಊಟ ಮುಗಿಸಿ ಇಲ್ಲಿನ ಶಿಕ್ಷಕರೊಬ್ಬರು ಅರವಿಂದ ನಗರದಿಂದ ಸೂರ್ಯ ಲೇಔಟ್‌ ಕಡೆಗೆ ವಾಕಿಂಗ್‌ ಹೊರಟಿದ್ದರು. ಈ ವೇಳೆ ನಾಲ್ವರು ದುಷ್ಕರ್ಮಿಗಳು ದಾಳಿ ನಡೆಸಿ ಮೊಬೈಲ್‌ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ವಿನೋಬನಗರ ಪೊಲೀಸರು ಕೇಸ್‌ ದಾಖಲಿಸಿ ತನಿಖೆ ನಡೆಸ್ತಿದ್ದಾರೆ 

ಸುದ್ದಿ 2 | ಶಿವಮೊಗ್ಗ ಕೇಂದ್ರ ಕಾರಾಗೃಹದೊಳಗೆ ಮತ್ತೊಮ್ಮೆ ಅನುಮಾನಸ್ಪದ ವಸ್ತುಗಳನ್ನು ಸಾಗಿಸುವ ಪ್ರಯತ್ನವೊಂದು ವಿಫಲವಾಗಿದೆ. ಈ ಸಂಬಂಧ ತುಂಗಾನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ಆಗಿದೆ. ಕಾರಾಗೃಹದ ಅಧಿಕಾರಿ ನೀಡಿರುವ ದೂರಿನನ್ವಯ ದಾಖಲಾಗಿರುವ ಎಫ್‌ಐಆರ್‌ನಲ್ಲಿ , ವಿಚಾರಣಾದೀನ ಕೈದಿ ಚೇತನ್‌ ಎಂಬಾತನ ಭೇಟಿಗೆ ಬಂದಿದ್ದ ಚಂದನ್‌ , ದರ್ಶನ್‌ ತಮ್ಮೊಂದಿಗೆ  ತಂದಿದ್ದ ಅನುಮಾನಸ್ಪದ ಪ್ಯಾಕೆಟ್‌ಗಳನ್ನು ಜೈಲ್‌ ಸಮೀಪ ಕಸದ ರಾಶಿಯ ಬಳಿ ಮುಚ್ಚಿಡಲು ಮುಂದ್ದಾಗಿದ್ದಾರೆ. ಈ ವೇಳೆ ಅವರನ್ನು ಹಿಡಿಯಲು ಮುಂದಾದ  ಕೆಎಸ್‌ಐಎಸ್‌ಎಫ್‌ ಸಿಬ್ಬಂದಿಯ ಕೈಗೆ ಸಿಗದ ಆರೋಪಿಗಳು ಜೈಲಿ ಗೇಟಿಗೆ ಬೈಕ್‌ ಗುದ್ದಿ ಎಸ್ಕೇಪ್‌ ಆಗಿದ್ದಾರೆ.  

ಸುದ್ದಿ 3 | ಕೌಟುಂಬಿಕ ವಿಚಾರದಲ್ಲಿ ಯುವತಿಯೊಬ್ಬಳ ಮನೆಗೆ ರೌಡಿ ಅಶ್ಪಕ್‌ ಹೆಸರಿನಲ್ಲಿ ನುಗ್ಗಿದ ಮಹಿಳೆಯರು ಹಾಗೂ ಪುರುಷರು ಮನೆಯವರ ಮೇಲೆ ಹಲ್ಲೆ ಮಾಡಿದ ಆರೋಪ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ FIR ದಾಖಲಾಗಿದೆ. ಇಲ್ಲಿನ ವ್ಯಕ್ತಿಯೊಬ್ಬ, ಮದುವೆಯಾಗಿದ್ದರೂ ಯುವತಿಯೊಬ್ಬಳ ಹಿಂದೆ ಬಿದ್ದಿದ್ದ, ಆತನ ಪೂರ್ವಪರ ತಿಳಿದ ಬಳಿಕ ಯುವತಿ ಆತನನ್ನು ದೂರವಿಟ್ಟಿದ್ದಳು. ಈ ಕಾರಣಕ್ಕೆ ಯುವತಿಯ ಮನೆಗೆ ನುಗ್ಗಿದ ಕೆಲ ಮಹಿಳೆಯರು ಹಾಗೂ ಪುರುಷರು ಮನೆಯಲ್ಲಿದ್ದವರ ಮೇಲೆ ಹಲ್ಲೆ ನಡೆಸಿ, ಯಾಸೀನ್‌ ರೀತಿಯಲ್ಲಿ ಕೊಲೆಯಾಗುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. 

Share This Article