SHIVAMOGGA | MALENADUTODAY NEWS | ಮಲೆನಾಡು ಟುಡೆ Jan 17, 2025
ಶಿವಮೊಗ್ಗ ಕೋರ್ಟ್ ಕೊಲೆಪ್ರಕರಣವೊಂದರಲ್ಲಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಕೇಸ್ ವಿವರ ಹೀಗಿದೆ. ಜಿಕ್ರುಲ್ಲಾ ಎಂಬ ಹೆಸರಿನ 28 ವರ್ಷದ ಕಾರ್ ಮೆಕಾನಿಕ್ ಜೊತೆ ಬುದ್ದಾ ನಗರದಲ್ಲಿ ಕಾರ್ ಪಾರ್ಕಿಂಗ್ ಮಾಡುವ ವಿಚಾರವಾಗಿ ಗ್ಯಾಸ್ ಇಮ್ರಾನ್ ನೊಂದಿಗೆ ಜಗಳ ಮಾಡಿಕೊಂಡಿದ್ದ. ಅಲ್ಲದೆ ಇದಕ್ಕೂ ಹಿಂದೆ ಟ್ವಿಸ್ಟ್ ಇಮ್ರಾನ್ ನೊಂದಿಗೂ ಗಲಾಟೆ ಮಾಡಿಕೊಂಡಿದೆ.
ಈ ದ್ವೇಷದ ಹಿನ್ನೆಲೆಯಲ್ಲಿ ದಿನಾಂಕಃ 19-03-2022 ರಂದು ರಾತ್ರಿ ಎನ್ ಟಿ ರಸ್ತೆ ಫಲಕ್ ಶಾದಿ ಮಹಲ್ ಪಕ್ಕ ರಸ್ತೆಯಲ್ಲಿ ಜಿಕ್ರುಲ್ಲಾ ತನ್ನ ಸ್ನೇಹಿತರೊಂದಿಗೆ ಮಾತನಾಡಿಕೊಂಡು ನಿಂತಿದ್ದಾಗ ಶಹಬಾಜ್, ರುಮಾನ್, ವಸೀಂ, ಕಾಲಾ ವಸೀಂ, ನಬೀಲ್ @ ಗಜ ಹಾಗೂ ಇತರರು ಸೇರಿಕೊಂಡು ಜಿಕ್ರುಲ್ಲಾನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಜಿಕ್ರುಲ್ಲಾ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆ FIR ದಾಖಲಾಗಿತ್ತು. ಅಂದಿನ ತನಿಖಾಧಿಕಾರಿ ಅಂಜನ್ ಕುಮಾರ್ ಕೋರ್ಟ್‌ಗೆ ಈ ಕೇಸ್ ಕುರಿತಾಗಿ ಚಾರ್ಜ್‌ಶೀಟ್ ಸಲ್ಲಿಸಿದ್ದರು.
2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ಪರವಾಗಿ ಸರ್ಕಾರಿ ಅಭಿಯೋಜಕರಾದ ಪಿ. ಓ. ಪುಷ್ಪಾ ವಾದ ಮಂಡಿಸಿದ್ದರು. ಇದೀಗ ವಿಚಾರಣೆ ಮುಗಿದಿದ್ದು, ಆರೋಪಿಗಳಾದ 1) ಶಹಬಾಜ್ ಶರೀಫ್, 20 ವರ್ಷ, ಮಿಳ್ಳಘಟ್ಟ, ಶಿವಮೊಗ್ಗ ಟೌನ್, 2) ವಸೀಂ ಅಕ್ರಂ @ ಚೆ ಉಂಗ್ಲಿ, 20 ವರ್ಷ, ಟೆಂಪೋ ಸ್ಟಾಂಡ್, ಶಿವಮೊಗ್ಗ ಟೌನ್, 3) ವಸೀಂ ಅಕ್ರಮ @ ಕಾಲಾ ವಸೀಂ, 20 ವರ್ಷ, ಬುದ್ದಾ ನಗರ, ಶಿವಮೊಗ್ಗ ಟೌನ್ ಮತ್ತು 4) ಫಯಾಜ್ ಉಲ್ಲಾ ರೆಹಮಾನ್ @ ರುಮಾನ್, 23 ವರ್ಷ, ಮುರಾದ್ ನಗರ ಶಿವಮೊಗ್ಗ ಟೌನ್ ವಿರುದ್ಧ ಆರೋಪ ದೃಡಪಟ್ಟಿದೆ. ಈ ಹಿನ್ನೆಲೆಯಲ್ಲಿ, ನ್ಯಾಯಾಧಿಶರಾದ ಪಲ್ಲವಿ ಬಿ.ಆರ್ ರವರು ದಿನಾಂಕ:- 16-01-2025 ರಂದು ನಾಲ್ಕೂ ಜನ ಆರೋಪಿತರಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ ರೂ 30,000/- ದಂಡ ವಿಧಿಸಿದ್ದಾರೆ.


SUMMARY | Shivamogga 2nd Additional District and Sessions Court Judge Pallavi BR has given the verdict in the Zikrullah murder case that took place near Shadi Mahal on Shivamogga NT Road. The four accused have been sentenced to life imprisonment.
KEY WORDS | Shivamogga 2nd Additional District and Sessions Court Judge Pallavi BR , Zikrullah murder case , Shadi Mahal , NT Road, four accused sentenced to life imprisonment,