SHIVAMOGGA | MALENADUTODAY NEWS | ಮಲೆನಾಡು ಟುಡೆ Nov 23, 2024
ಮದುವೆಯಾಗುವುದಾಗಿ ಹೇಳಿ ನಂಬಿಸಿ, ಬಳಿಕ ಜಾತಿ ಕಾರಣ ಮಾಡಿ ನಿರಾಕರಿಸಿದ್ದಕ್ಕೆ ಮನದೊಂದು ವಿಷ ಸೇವಿಸಿದ್ದ ಅಪ್ರಾಪ್ತೆಯೊಬ್ಬರು ಸಾವನ್ನಪ್ಪಿದ್ದಾರೆ. ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಒಂದರ ವ್ಯಾಪ್ತಿಯಲ್ಲಿ ಬರುವ ಸ್ಟೇಷನ್ ಒಂದರಲ್ಲಿ ಈ ಸಂಬಂಧ ಕೇಸ್ ದಾಖಲಾಗಿದೆ.
17 ವರುಷದ ಯುವತಿ ಜೊತೆ ಯುವಕ ಮೂರು ವರುಷಗಳಿಂದ ಸಲುಗೆಯಿಂದಿದ್ದ. ಆಕೆಯನ್ನ ಮದುವೆಯಾಗುವುದಾಗಿ ಹೇಳಿದ್ದ. ನಂತರ ಜಾತಿ ಕಾರಣಕ್ಕೆ ಮದುವೆ ನಿರಾಕರಿಸಿದ್ದ. ಮೇಲಾಗಿ ಯುವತಿ ಜಾತಿ ಬಗ್ಗೆ ಕೀಳಾಗಿ ಮಾತನಾಡಿ ನಿಂಧಿಸಿದ್ದಾನೆ ಎಂದು ದೂರಲಾಗಿದೆ. ಇದೇ ಕಾರಣಕ್ಕೆ ಕಳೆದ ನವೆಂಬರ್ 19 ಅಪ್ರಾಪ್ತೆ ಮನೆಯಲ್ಲಿಯೇ ವಿಷ ಸೇವಿಸಿದ್ದಳು. ಆಕೆಗೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಕೆ ಸಾವನ್ನಪ್ಪಿದ್ದಾಳೆ. ಸದ್ಯ ನಡೆದ ಘಟನೆ ಸಂಬಂಧ ದೂರು ಪಡೆದು ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
SUMMARY | young woman committed suicide after being cheated on the pretext of marrying her.
KEY WORDS | young woman committed suicide ,cheated on the pretext of marrying her.