SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 16, 2024
ಶಿವಮೊಗ್ಗ| ಜನವರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬದಲಾಗುವ ಸಾಧ್ಯತೆ ಇದೆ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರಸ್ತುತ ಬಿಜೆಪಿ ರಾಷ್ಟ್ರಾಧ್ಯಕ್ಷರಾದ ಜೆಪಿ ನಡ್ಡಾರವರು ಈಗಾಗಲೇ ಪ್ರಧಾನ ಮಂತ್ರಿ ಮೋದಿರವರ ಸರ್ಕಾರದಲ್ಲಿ ಸಚಿವರಾಗಿರುವುದರಿಂದ ಬಿಜೆಪಿ ರಾಷ್ಟ್ರಾಧ್ಯಕ್ಷ ಸ್ಥಾನ ತೆರವು ಗೊಳ್ಳುವ ಸಾಧ್ಯತೆ ಇದೆ. ಇದರ ನಡುವೆ ಜನವರಿಯಲ್ಲಿ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವೂ ತೆರವುಗೊಳ್ಳಬಹುದು ಎಂದರು. ಹಾಗೆಯೇ ಕಳೆದ 30 ವರ್ಷದಿಂದ ನಾನು ರಾಜಕಾರಣದಲ್ಲಿ ಇದ್ದೇನೆ, ಒಬಿಸಿ ಸಮುದಾಯಕ್ಕೆ ರಾಜ್ಯಾಧ್ಯಕ್ಷ ಸ್ಥಾನ ನೀಡುವ ವಿಚಾರ ಬಂದರೆ ನನ್ನನ್ನು ಪರಿಗಣಿಸಿ ಎಂದಿದ್ದೇನೆ ಎಂದು ಇಂಗಿತವನ್ನು ವ್ಯಕ್ತಪಡಿಸಿದರು. ನಂತರ ಬಿಜೆಪಿಯಲ್ಲಿ ನಡೆಯುತ್ತಿರುವ ಭಿನ್ನಮತದ ವಿಚಾರದ ಬಗ್ಗೆ ಮಾತನಾಡಿ ಕೇಂದ್ರದ ವರಿಷ್ಠರು ಭಿನ್ನಮತದ ವಿಚಾರದ ಬಗ್ಗೆ ಗಮನ ಹರಿಸಿ ನಿರ್ಧಾರವನ್ನು ತೀಕ್ಷ್ಣವಾಗಿ ಶೀಘ್ರದಲ್ಲಿ ಕೈಗೊಳ್ಳುತ್ತಾರೆ ಎಂದರು.
ನನ್ನ ತಮ್ಮ ಮಧುಬಂಗಾರಪ್ಪರನ್ನು ಮಂತ್ರಿಯನ್ನಾಗಿ ಮಾಡಿರುವುದು ಸಂತೋಷ ತಂದಿದೆ | ಕುಮಾರ್ ಬಂಗಾರಪ್ಪ
ನಿನ್ನೆ ಶಿವಮೊಗದ ಈಡಿಗರ ಭವನದಲ್ಲಿ ನಡೆದ ದೀವರ ಸಾಂಸ್ಕೃತಿಕ ವೈಭವ ಕಾರ್ಯಕ್ರಮದ ಸಂದರ್ಭದಲ್ಲಿ ಸಹೋದರ ಹಾಗೂ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರನ್ನು ಕುಮಾರ್ ಬಂಗಾರಪ್ಪ ಹೊಗಳಿದರು. ಆ ವೇಳೆ ನನ್ನ ಸಹೋದರನನ್ನು ರಾಜ್ಯ ಸರ್ಕಾರ ಮಂತ್ರಿಯನ್ನಾಗಿ ಮಾಡಿರೋದು ಸಂತೋಷ ತಂದಿದೆ . ನಮ್ಮ ಸಮಾಜಕ್ಕೆ ಹಾಗೂ ಶಿವಮೊಗ್ಗ ಜಿಲ್ಲೆಗೆ ಅವರ ಸೇವೆ ಸಿಗಬೇಕು.ಅವರ ಅಧಿಕಾರದ ಅವದಿಯಲ್ಲಿ ಶಿವಮೊಗ್ಗ ಜಿಲ್ಲೆಗೆ ಹಾಗೂ ದೀವರ ಸಮಾಜಕ್ಕೆ ಅವಕಾಶಗಳು ಸಿಗಬೇಕು ಆ ನಿಟ್ಟಿನಲ್ಲಿ ಅವರು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
SUMMARY | BJP state president likely to change in January Kumar Bangarappa
KEYWORDS | BJP state president, January, Kumar Bangarappa, bjp, shivamogag,