ಬಿಎಸ್‌ವೈ ಬಣದ ಬಿಗ್‌ ಪ್ಲ್ಯಾನ್‌ | 20 ಲಕ್ಷ ಜನರನ್ನ ಸೇರಿಸಿ ಶಕ್ತಿಪ್ರದರ್ಶನಕ್ಕೆ ಸಿದ್ದತೆ | ಏನಿದು ವಿಶೇಷ

grand celebration of former CM BS Yediyurappas birthday on February 27 in Davangere, MP Renukacharya, BY Vijayendra, Hartalu Halappa, Katta Subrahmanya Naidu

ಬಿಎಸ್‌ವೈ ಬಣದ ಬಿಗ್‌ ಪ್ಲ್ಯಾನ್‌ | 20 ಲಕ್ಷ ಜನರನ್ನ ಸೇರಿಸಿ ಶಕ್ತಿಪ್ರದರ್ಶನಕ್ಕೆ ಸಿದ್ದತೆ | ಏನಿದು ವಿಶೇಷ
grand celebration of former CM BS Yediyurappas birthday on February 27 in Davangere, MP Renukacharya, BY Vijayendra, Hartalu Halappa, Katta Subrahmanya Naidu

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 15, 2024 ‌‌

ರಾಜ್ಯ ಬಿಜೆಪಿಯಲ್ಲಿ ಬಣ ರಾಜಕಾರಣ ಜೋರಾಗಿರುವ ಬೆನ್ನಲ್ಲೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರರವರ ಬಣ ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪನವರ ಹುಟ್ಟುಹಬ್ಬದ ವಿಶೇಷ ಆಚರಣೆಗೆ ಮುಂದಾಗಿದೆ. ಈ ಸಂಬಂಧ ನಿನ್ನೆ ನಡೆದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹಾಗೂ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನೇತೃತ್ವದಲ್ಲಿ 55 ಜನ ಮಾಜಿ ಶಾಸಕರು ಹಾಗೂ ಮಾಜಿ ಸಚಿವರ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ವಿಜಯೇಂದ್ರ ಪರವಾಗಿ ಶಕ್ತಿಪ್ರದರ್ಶನಕ್ಕಾಗಿ ನಡೆದ ಸಭೆಯಲ್ಲಿ ಬಿವೈ ವಿಜಯೇಂದ್ರರವರನ್ನ ರಾಜ್ಯಾಧ್ಯಕ್ಷರಾಗಿ ಮುಂದುವರಿಸುವಂತೆ ಹೈಕಮಾಂಡ್‌ಗೆ ಒತ್ತಡ ಹೇರುವ ತೀರ್ಮಾನ ಕೈಗೊಳ್ಳಲಾಗಿದೆ. 

ಜೊತೆಯಲ್ಲಿ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯರಾಗಿರುವ ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪರವರ ಜನ್ಮ ದಿನಾಚರಣೆಯನ್ನು ಇದೇ ಫೆಬ್ರವರಿ 27ರಂದು ದಾವಣಗೆರೆಯಲ್ಲಿ ಅದ್ದೂರಿಯಾಗಿ ಆಯೋಜಿಸಲು ನಿರ್ಣಯ ಕೈಗೊಳ್ಳಲಾಗಿದೆ. ಚುನಾವಣಾ ಕಣದಿಂದ ಹಿಂದೆ ಸರಿದಿರುವ ಬಿಎಸ್‌ವೈ ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ. ಅವರ ಜನ್ಮದಿನದಂದು 20 ಲಕ್ಷ ಜನರನ್ನ ಸೇರಿಸಿ ಶಕ್ತಿಪದರ್ಶನ ನಡೆಸುವುದು ಬಿಎಸ್‌ವೈ ಬಣದ ಉದ್ದೇಶವಾಗಿದೆ. 

ಈ ಬಗ್ಗೆ ಮಾತನಾಡಿರುವ ಮಾಜಿ ಸಚಿವ ಹರತಾಳು ಹಾಲಪ್ಪ ಬಿಎಸ್‌ವೈ ಜನ್ಮದಿನದಂದು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾರವರು ಒಳಗೊಂಡಂತೆ ಎಲ್ಲಾ  ರಾಷ್ಟ್ರೀಯ ನಾಯಕರನ್ನು ಆಹ್ವಾನಿಸಲಾಗುವುದು ಅಂತಾ ತಿಳಿಸಿದ್ದಾರೆ. 

SUMMARY |  A decision has been taken to organize a grand celebration of former CM BS Yediyurappa's birthday on February 27 in Davangere, MP Renukacharya, BY Vijayendra, Hartalu Halappa, Katta Subrahmanya Naidu

KEY WORDS | grand celebration of former CM BS Yediyurappas birthday on February 27 in Davangere, MP Renukacharya, BY Vijayendra, Hartalu Halappa, Katta Subrahmanya Naidu