ಚಿನ್ನದ ದರ ಮತ್ತೆ ಬಲು ಭಾರ | ಮಾರ್ಕೆಟ್‌ನಲ್ಲಿ ದುಬಾರಿಯಾದ ಚಿನ್ನ & ಬೆಳ್ಳಿ | ಡಾಲರ್‌ ರೇಟೆ ಕಡಿಮೆ!?

13

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 6, 2025 ‌‌ ‌

ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಮತ್ತೆ ಏರಿಕೆ ಆಗಿದೆ. ಈ ಸಂಬಂಧ ದೆಹಲಿಯಲ್ಲಿ  ಅಖಿಲ ಭಾರತ ಸರಾಫ್ ಅಸೋಸಿಯೇಷನ್‌ ಮಾಹಿತಿ ನೀಡಿದೆ. 

ಪ್ರಸ್ತುತ 10 ಗ್ರಾಂ ಚಿನ್ನದ ಬೆಲೆಯು (ಶೇ 99.9 ಪರಿಶುದ್ಧತೆ) ₹300 ಏರಿಕೆಯಾಗಿದೆ, ದರ ₹89,300 ರಷ್ಟಿದೆ. ಅದೇ ರೀತಿಯಲ್ಲಿ 99.5% ಪರಿಶುದ್ಧತೆಯ ಚಿನ್ನದ ದರ 10 ಗ್ರಾಂಗೆ ₹88,900 ರಷ್ಟಿದೆ

ಇನ್ನೂ ಮಾರುಕಟ್ಟೆಯಲ್ಲಿ ಬೆಳ್ಳಿಯ ರೇಟು, ಪ್ರತಿ ಕೆಜಿಗೆ ಒಂದು ಸಾವಿರ ರೂಪಾಯಿನಷ್ಟು ಹೆಚ್ಚಳವಾಗಿದೆ. ಪ್ರಸ್ತುತ ಕೆಜಿ ಬೆಳ್ಳಿಗೆ  ₹99 ಸಾವಿರ ದರವಿದೆ.

ಕಳೆದ ಫೆಬ್ರವರಿಯಲ್ಲಿ ಚಿನ್ನದದರ 10 ಗ್ರಾಂಗೆ  ₹89,450 ನಷ್ಟಿತ್ತು. ಆನಂತರ ಇಳಿಕೆ ಕಂಡಿತ್ತು. ಇದೀಗ ಮತ್ತೆ ಗೋಲ್ಡ್‌ ರೇಟ್‌ ಏರಿಕೆ ಕಂಡಿದೆ. ಅಲ್ಲದೆ ಡಾಲರ್‌ ಮೌಲ್ಯದಲ್ಲಿ ಕೊಂಚ ಇಳಿಕೆ ಕಂಡಿದೆ. 

 

Share This Article