‌ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಹಾಲು ಉತ್ಪಾದಕರಿಗೆ ಗುಡ್‌ ನ್ಯೂಸ್‌ | ಹಾಲಿನ ಖರೀದಿ ದರ ಹೆಚ್ಚಿಸಿದ SHIMUL

13

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 31, 2025 ‌‌ 

ಶಿವಮೊಗ್ಗ ದಾವಣಗೆರೆ ಚಿತ್ರದುರ್ಗದ ಹಾಲು ಉತ್ಪಾದಕರಿಗೆ ಶಿಮುಲ್‌ ಬಿಗ್‌ ಗುಡ್‌ ನ್ಯೂಸ್‌ ಕೊಟ್ಟಿದೆ. ಹಾಲು ಉತ್ಪಾದಕರಿಗೆ ನೀಡುವ ಹಾಲಿನ ಖರೀದಿ ದರವನ್ನು ಹೆಚ್ಚಳ ಮಾಡಿದೆ. ಈ ಸಂಬಂಧ ಪ್ರಕಟಣೆಯನ್ನು ಹೊರಡಿಸಿದೆ. 

ಶಿಮುಲ್‌, ಶಿವಮೊಗ್ಗ

ರೈತರಿಗೆ ಎರಡು ರೂ ದರ ಹೆಚ್ಚಳ ಮಾಡಿ ಆದೇಶ ಶಿಮುಲ್‌ ಆದೇಶ ಮಾಡಿದೆ. ಇದರಿಂದ ಶಿವಮೊಗ್ಗ,ದಾವಣಗೆರೆ ಚಿತ್ರದುರ್ಗದ ರೈತರಿಗೆ ಅನುಕೂಲವಾಗಲಿದೆ. ನಾಳೆಯಿಂದಲೇ ರೈತರಿಗೆ ಪರಿಷ್ಕೃತ ದರದ ಲಾಭ ಸಿಗಲಿದೆ. ಈ ಪರಿಷ್ಕೃತ ದರವೂ ಮಾರ್ಚ್‌ 31 ರವರೆಗೂ ಜಾರಿಯಲ್ಲಿರಲಿದೆ. 

ಹಾಲಿನ ಖರೀದಿ ದರ ಹೆಚ್ಚಳ

ಪ್ರಸ್ತುತ ಒಕ್ಕೂಟದಿಂದ ಸಂಘಗಳಿಗೆ ಹಾಲಿ ನೀಡುತ್ತಿರುವ ದರ  FAT 4.0% SNF 8.50% ಪ್ರತಿ ಕೆ.ಜಿ ಹಾಲಿಗೆ ಇರುವ ದರ ₹32.09

ಒಕ್ಕೂಟದಿಂದ ಸಂಘಗಳಿಗೆ ಪರಿಷ್ಕೃತ ನೀಡುವ ದರ FAT 4.0% SNF 8.50% ಪ್ರತಿ ಕೆ.ಜಿ ಹಾಲಿಗೆ ನೀಡಲಿರುವ ದರ ₹34.18

ಇನ್ನೂ ಸಂಘದಿಂದ ಉತ್ಪಾದಕರಿಗೆ ಹಾಲಿ ನೀಡುತ್ತಿರುವ ದರ FAT 4.0% SNF 8.50% ಪ್ರತಿ ಕೆ.ಜಿ ಹಾಲಿಗೆ ನೀಡುತ್ತಿರುವ ದರ ₹30.13

ಸಂಘದಿಂದ ಉತ್ಪಾದಕರಿಗೆ ಪರಿಷ್ಕೃತ ನೀಡುವ ದರ FAT 4.0% SNF 8.50%  ಪ್ರತಿ ಕೆ.ಜಿ ಹಾಲಿಗೆ ನೀಡಲಿರುವ ದರ ₹32.22

ಪರಿಷ್ಕೃತ ದರವು ದಿನಾಂಕ 01.02.2025 ರಿಂದ 31.03.2025 ರವರೆಗೆ ಜಾರಿಯಲ್ಲಿರುತ್ತದೆ.

Malenadu Today

SUMMARY  | Shimul has given big good news to the milk producers of Shivamogga, Davangere and Chitradurga. It has increased the price of milk purchased from milk producers.

KEY WORDS | Shimul has given big good news to the milk producers,  Shivamogga, Davangere , Chitradurga, Shimul increased the price of milk purchased from milk producers,

Share This Article