SHIVAMOGGA | MALENADUTODAY NEWS | ಮಲೆನಾಡು ಟುಡೆ
ಹೊಳೆಹೊನ್ನೂರಿನ ಬೈಪಾಸ್ ರಸ್ತೆಯಲ್ಲಿ ಟಿವಿಎಸ್ ಎಕ್ಸ್ ಎಲ್ ಬೈಕ್ ಹಾಗೂ ಅಶೋಕ್ ಲೇಲ್ಯಾಂಡ್ ಪಿಕಪ್ ನಡುವೆ ಇಂದು ಬೆಳಿಗ್ಗೆ ಬೀಕರ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪುಟ್ಟಪ್ಪ (52) ಮೃತ ಪಟ್ಟ ವ್ಯಕ್ತಿಯಾಗಿದ್ದಾರೆ.
ಹೊಳ್ಳೆಹೊನ್ನೂರು ನಿವಾಸಿಯಾದ ಬೈಕ್ ಸವಾರ ತೋಟಕ್ಕೆ ಗೊಬ್ಬರವನ್ನು ತೆಗೆದುಕೊಂಡು ಹೊಳೆಹೊನ್ನೂರಿನಿಂದ ಬಂದು ಬೈಪಾಸ್ ಬಳಿ ರಸ್ತೆ ದಾಟುತ್ತಿದ್ದರು. ಆವೇಳೆ ಶಿವಮೊಗ್ಗದಿಂದ ದುರ್ಗಾಗೆ ತೆರಳುತ್ತಿದ್ದ ಅಶೋಕ್ ಲೇಲ್ಯಾಂಡ್ ಪಿಕಾಪ್ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ತಲೆಯಲ್ಲಿ ತೀವೃ ರಕ್ತಸ್ರಾವ ಉಂಟಾಗಿ ಬೈಕ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹೊಳೆಹೊನ್ನೂರು ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡು ಮೃತ ದೇಹವನ್ನು ಅಂಬುಲೆನ್ಸ್ ಮುಖಾಂತರ ಶವಗಾರಕ್ಕೆ ಕಳುಹಿಸಿಕೊಟ್ಟಿದ್ದಾರೆ.
ಎಮ್ಮೆಹಟ್ಟಿ ಮಾರ್ಗದಲ್ಲಿ ಅಂಡರ್‌ಪಾಸ್ ನಿರ್ಮಾಣಕ್ಕೆ ಸ್ಪಂದಿಸದ ಶಾಸಕರು | ಸ್ಥಳೀಯರ ಆಕ್ರೋಶ
ಹೊಳೆಹೊನ್ನೂರು ಹೊಸ ಸೇತುವೆ ಮೂಲಕ ಬೈಪಾಸ್ ರಸ್ತೆಯನ್ನು ನಿನ್ನೆ ಸಂಜೆಯಿಂದ ವಾಹನ ಸಂಚಾರಕ್ಕೆ ಬಿಡಲಾಗಿತ್ತು. ಆದರೆ ಆ ರಸ್ತೆಯಲ್ಲಿ ಇಂದು ಬೆಳಿಗ್ಗೆ ಈ ದುರ್ಘಟನೆ ಸಂಭವಿಸಿದೆ
ಈ ಅಪಘಾತದ ಹಿನ್ನಲೆ ಎಮ್ಮೆಹಟ್ಟಿ, ಅಗಸನಹಳ್ಳಿಯ ಜನರು ಸೇರಿದಂತೆ ಸ್ಥಳೀಯರು ರಸ್ತೆಯಲ್ಲಿಯೇ ಶವ ಇಟ್ಟು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಅಂಡರ್‌ಪಾಸ್ ನಿರ್ಮಾಣದ ಬೇಡಿಕೆ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣ. ಸ್ಥಳೀಯರು ಸಂಸದ, ಶಾಸಕರಿಗೆ ಹಲವು ಬಾರಿ ಮನವಿ ಸಲ್ಲಿಸಿ ಎಮ್ಮೆಹಟ್ಟಿ ಮಾರ್ಗದಲ್ಲಿ ಅಂಡರ್‌ಪಾಸ್ ನಿರ್ಮಾಣಕ್ಕೆ ಒತ್ತಾಯಿಸಿದ್ದರು. ಆದರೆ ಅದನ್ನು ನಿರ್ಲಕ್ಷಿಸಿ ಪ್ರಾಯೋಗಿಕವಾಗಿ ಬೈಪಾಸ್ ರಸ್ತೆ ಸಂಚಾರಕ್ಕೆ ಅವಕಾಶ ನೀಡಿದ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ಆರೋಪಿಸಿದರು. .
SUMMARY | The accident took place between tvs xl bike and ashok leyland pickup on holehonnur bypass road this morning, killing the bike rider on the spot.
KEYWORDS | holehonnur, accident, tvs xl bike, death,