ಗೂಂಡಾ ಆಕ್ಟ್​ ನಡಿ ವರ್ಷಗಟ್ಲೇ ಜೈಲ್​ನಲ್ಲಿದ್ದರೂ ಬುದ್ದಿ ಕಲಿಯದ ಕಡೇಕಲ್​ ಅಬೀದ್ , ಭದ್ರಾವತಿಯಲ್ಲಿ ಐಓ ನಾಗಮ್ಮರಿಂದ ಗುಂಡೇಟು

13

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 25, 2025 ‌‌ ‌‌

ಶಿವಮೊಗ್ಗ ಪೊಲೀಸರು ನಡೆಸ್ತಿದ್ದ ಕಾಲಿಗೆ ಗುಂಡು ಆಪರೇಷನ್​ ಇದೀಗ ಭದ್ರಾವತಿಗೆ ಶಿಫ್ಟ್ ಆಗಿದೆ. ಇತ್ತೀಚೆಗೆ ರೌಡಿಶೀಟರ್ ಖುರೇಶಿ ಕಾಲಿಗೆ ಗುಂಡೇಟು ನೀಡಿದ್ದ ಭದ್ರಾವತಿ ಪೊಲೀಸರು ಇದೀಗ ಮತ್ತೊಬ್ಬ ರೌಡಿಶೀಟರ್ ಕಡೆಕಲ್ ಅಬೀದ್​ ಕಾಲಿಗೆ ಗುಂಡೇಟು ಕೊಟ್ಟಿದ್ದಾರೆ.

ಈತನನ್ನು ಬಂಧಿಸಲು ತೆರಳಿದ್ದ ಪೊಲೀಸರ ಮೇಲೆಯೇ ಈತ ಹಲ್ಲೆಗೆ ಯತ್ನಿಸಿದಾಗ ಪೇಪರ್​ ಟೌನ್​ ಇನ್​ಸ್ಪೆಕ್ಟರ್​ ನಾಗಮ್ಮ ಫೈರ್ ಮಾಡಿದ್ದಾರೆ. ಈ ವೇಳೆ ಅಬೀದ್​ ಕಾಲಿಗ ಗುಂಡು ಬಿದ್ದಿದೆ. ವಿವಿಧ ಪ್ರಕರಣಗಳಲ್ಲಿ ಜೈಲಿನಲ್ಲಿದ್ದ ಕಡೆಕಲ್​ ಅಬೀದ್ ಜೈಲಿಂದ ರಿಲೀಸ್ ಆದ ಬಳಿಕವೂ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದ. ಅಲ್ಲದೆ ತನ್ನದೆ ಆದ ಸ್ಕೆಚ್​ ರೂಪಿಸಿಕೊಳ್ಳತ್ತಿದ್ದ. ಈ ನಡುವೆ ಕೊಲೆ ಯತ್ನ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಆತನನ್ನು ಬಂಧಿಸಲು ಇನ್​ಸ್ಪೆಕ್ಟರ್​ ನಾಗಮ್ಮ ಆಂಡ್​ ಟೀಂ ಕಳೆದೊಂದು ತಿಂಗಳಿನಿಂದ ಪ್ರಯತ್ನಿಸಿತ್ತು. ಇವತ್ತು ಮಾಹಿತಿ ಅನ್ವಯ ಸ್ಥಳವೊಂದಕ್ಕೆ ತೆರಳಿದ್ದ ಪೊಲೀಸ್ ಟೀಂ ಮೇಲೆ ಅಬೀದ್​ ಅಟ್ಯಾಕ್ ಮಾಡಿ, ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಈ ವೇಳೆ ಆತನ ಕಾಲಿಗೆ ಗುಂಡು ಹಾರಿಸಲಾಗಿದೆ. ಈ ಬಗ್ಗೆ ಎಸ್​ಪಿ ಮಿಥುನ್ ಕುಮಾರ್ ಮಾಧ್ಯಮ ಸಂದೇಶ ರವಾನಿಸಿದ್ದಾರೆ.,

 

Share This Article