SHIVAMOGGA| MALENADUTODAY NEWS | ಮಲೆನಾಡು ಟುಡೆ Mar 26, 2025
ನಟ ಶಿವರಾಜಕುಮಾರ್ ರವರು ಕ್ಯಾನ್ಸರ್‌ನಿಂದ ಚಿಕಿತ್ಸೆ ಪಡದು ಬಂದ ಬೆನ್ನಲ್ಲೆ ಇದೀಗ ಅವರ ಪತ್ನಿ ಗೀತಾ ಶಿವರಾಜಕುಮಾರ್ ರವರು ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ. ಈ ಬಗ್ಗೆ ನಿನ್ನೆ ದಿನ ಶಿವಮೊಗ್ಗಕ್ಕೆ ಬಂದಿದ್ದ ಸಚಿವ ಮಧು ಬಂಗಾರಪ್ಪರವರು ಕಾರ್ಯಕ್ರಮವೊಂದರಲ್ಲಿ ಮಾಹಿತಿ ನೀಡಿದ್ದರು. ಮೊನ್ನೆ ಹಾಗೂ ನಿನ್ನೆ ಎರಡು ದಿನಗಳ ಕಾಲ ಸರ್ಜರಿ ಇದ್ದ ಕಾರಣಕ್ಕಾಗಿ ಕಾರ್ಯಕ್ರಮಕ್ಕೆ ಬರುವುದು ತಡವಾಯ್ತು, ಈ ನಿಟ್ಟಿನಲ್ಲಿನಲ್ಲಿ ಆಯೋಜಕರ ಅನುಮತಿಯನ್ನು ಪಡೆದಿದ್ದೆ ಎಂದಿದ್ದರು. ಇದರ ಬೆನ್ನಲ್ಲೆ ರಾಜ್ಯ ಮಾದ್ಯಮಗಳು ಗೀತಕ್ಕ ಆರೋಗ್ಯದ ಬಗ್ಗೆ ವರದಿ ಪ್ರಕಟಿಸಲು ಆರಂಭಿಸಿವೆ.
ಸದ್ಯ ರಾಜ್ಯ ಮಾಧ್ಯಮಗಳ ವರದಿ ಪ್ರಕಾರ, ಗೀತಾ ಶಿವರಾಜ್ ಕುಮಾರ್‌ರವರಿಗೆ ಕತ್ತಿನ ಭಾಗದಲ್ಲಿ ಸರ್ಜರಿ ನಡೆಸಲಾಗಿದೆ ಎನ್ನಲಾಗುತ್ತಿದೆ. ಯಾವ ಆಸ್ಪತ್ರೆಯಲ್ಲಿ ಸರ್ಜರಿ ನಡೆದಿದೆ? ಅವರ ನೋವಿನ ಹಿನ್ನೆಲೆಯೇನು ಇತ್ಯಾದಿ ಮಾಹಿತಿಗಳು ಲಭ್ಯವಾಗಿಲ್ಲ.ಈ ಬಗ್ಗೆ ಕುಟುಂಬ ಮೂಲಗಳು ಸಹ ಮಾಹಿತಿ ಸ್ಪಷ್ಟಮಾಡಿಲ್ಲ. ಸಚಿವರು ಹೇಳಿದ್ದರಿಂದ ವಿಚಾರ ಗೊತ್ತಾಗಿದ್ದು, ಸದ್ಯ ಗೀತಾರವರ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸ್ವತಃ ಸಚಿವ ಮಧು ಬಂಗಾರಪ್ಪ ಮತ್ತಷ್ಟು ಮಾಹಿತಿ ನೀಡುವ ಸಾಧ್ಯತೆ ಇದೆ.
View this post on Instagram