SHIVAMOGGA | MALENADUTODAY NEWS | ಮಲೆನಾಡು ಟುಡೆ Feb 12, 2025
ಶಿವಮೊಗ್ಗ ನಗರದಲ್ಲಿ ಇದೆ ಫೆಬ್ರವರಿ 14 ರಂದು ಮೀನು ಮಾರುಕಟ್ಟೆ ಸುತ್ತಮುತ್ತ ಕರೆಂಟ್ ಇರಲ್ಲ ಎಂದು ಮೆಸ್ಕಾಂ ತಿಳಿಸಿದೆ. ವಿದ್ಯುತ್ ಕಂಬಗಳನನ್ನು ಬದಲಾಯಿಸುವ ನಿಟ್ಟಿನಲ್ಲಿ ಕಳೆದ ಕೆಲವು ದಿನಗಳಿಂದ ಮೆಸ್ಕಾಂ ಸಿಬ್ಬಂದಿ ಗಾಂಧಿ ಬಜಾರ್ ಸುತ್ತಮುತ್ತ ಕೆಲಸ ಮಾಡುತ್ತಿದ್ದಾರೆ. ಇದಕ್ಕಾಗಿ ನಿರ್ದಿಷ್ಟ ದಿನ ಆಯ್ದ ಏರಿಯಾಗಳಲ್ಲಿ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಅದರಂತೆ ಇದೀಗ ಫೆಬ್ರವರಿ 14 ರಂದು ಮೀನು ಮಾರುಕಟ್ಟೆ ಸುತ್ತಮುತ್ತ ಪವರ್ ಕಟ್ ಮಾಡಲಾಗುತ್ತಿದೆ. ಈ ಬಗ್ಗೆ ಮೆಸ್ಕಾಂ ಶಿವಮೊಗ್ಗದ ಪ್ರಕಟಣೆ ಹೀಗಿದೆ.
ಫೆ. 14ರಂದು ವಿದ್ಯುತ್ ವ್ಯತ್ಯಯ
ಶಿವಮೊಗ್ಗ ನಗರದ ಮೀನು ಮಾರುಕಟ್ಟೆ ಹತ್ತಿರದ ಶಿವಾಜಿ ರಸ್ತೆಯಲ್ಲಿ ವಿದ್ಯುತ್ ಕಂಬಗಳನ್ನು ಬದಲಿಸುವ ಕಾಮಗಾರಿ ಇರುವುದರಿಂದ ಫೆ.14 ರಂದು ಬೆಳಗ್ಗೆ 9.00 ರಿಂದ ಸಂಜೆ 6.00ರವರೆಗೆ ಗಾಂಧಿಬಜಾರ್, ಎಲೆರೇವಣ್ಣ ಕೇರಿ, ಯಾಲಕಪ್ಪಕೇರಿ, ಬೇಡರಕೇರಿ, ಅಶೋಕರಸ್ತೆ, ಅನವೇರಪ್ಪ ಕೇರಿ, ರಾಮಣ್ಣಶ್ರೇಷ್ಠಿ ಪಾರ್ಕ್, ಎಸ್‌ಪಿಎಂ ರಸ್ತೆ, ಮೀನು ಮಾರುಕಟ್ಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಫೆ. 14ರಂದು ವಿದ್ಯುತ್ ವ್ಯತ್ಯಯ
ಶಿವಮೊಗ್ಗ ನಗರದ ಆಲ್ಕೋಳ ವಿ.ವಿ.ಕೇಂದ್ರದಿಂದ ತುರ್ತು ಕಾಮಗಾರಿ ಇರುವುದರಿಂದ ಫೆ.14 ರಂದು ಬೆಳಗ್ಗೆ 10.00 ರಿಂದ ಸಂಜೆ 5.00ರವರೆಗೆ ಸಾಗರ ರಸ್ತೆ, ಎ.ಪಿ.ಎಂ.ಸಿ. ಮತ್ತು ಆರ್.ಎಂ.ಸಿ. 100 ಅಡಿ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
————-
SUMMARY | Gandhibazar, Elrevanna Keri, Yalakappakeri, Bedarakeri, Agandhibazar, Elrevanna Keri, Yalakappakeri, Bedarakeri, Ashoka Road, Anaverappa Keri, Ramanna Shresthi Park, SPM Road, Fish Market Shoka Road, Anaverappa Keri, Ramanna Shresthi Park, SPM Road, Fish Market …
KEY WORDS | Gandhibazar, Elrevanna Keri, Yalakappakeri, Bedarakeri, Agandhibazar, Elrevanna Keri, Yalakappakeri, Bedarakeri, Ashoka Road, Anaverappa Keri, Ramanna Shresthi Park, SPM Road, Fish Market Shoka Road, Anaverappa Keri, Ramanna Shresthi Park, SPM Road, Fish Market