SHIVAMOGGA | MALENADUTODAY NEWS | ಮಲೆನಾಡು ಟುಡೆ Dec 14, 2024
ದಾವಣಗೆರೆ ಪೊಲೀಸರು NDPS act ಪ್ರಕರಣಗಳಲ್ಲಿ ವಶಪಡಿಸಿಕೊಂಡ ಸುಮಾರು 22 ಕೆಜಿಗೂ ಹೆಚ್ಚು ಗಾಂಜಾವನ್ನು ಬೆಂಕಿಗೆ ಹಾಕಿ ನಾಶಪಡಿಸಿದ್ದಾರೆ. ನ್ಯಾಯಾಲಯದ ಅನುಮತಿ ಮೇರೆಗೆ, ದಾವಣಗೆರೆ ಹೊರವಲಯದ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ನಾಶಪಡಿಸಲಾಗಿದೆ.
ಈ ವೇಳೆ ಎಸ್‌ಪಿ ಉಮಾಪ್ರಶಾಂತ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ್ ಎಂ ಸಂತೋಷ ರವರು, ಜಿ ಮಂಜುನಾಥ ರವರು , ಡಿವೈಎಸ್ಪಿ ರವರಾದ ಮಲ್ಲೇಶ್ ದೊಡ್ಮನಿ, ಪಿ.ಬಿ ಪ್ರಕಾಶ್ ರವರು, ಪಿಎಸ್ ಐ ರೂಪ ತೆಂಬದ್ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
‘Drug-free Karnataka’ app ಅನ್ನು ಜಾರಿಗೆ ತಂದಿದ್ದು ಸಾರ್ವಜನಿಕರು ಈ ಆಫ್ ಅನ್ನು ಮೊಬೈಲ್ ಇನಸ್ಟಾಲ್ ಮಾಡಿಕೊಂಡು ತಮ್ಮ ಸುತ್ತ ಮುತ್ತ ಹಾಗೂ ಇತರೆಡೆ ಮಾದಕವಸ್ತುಗಳ ಬಳಕೆ ಹಾಗೂ ಮಾರಾಟ ಮಾಡುತ್ತಿರುವ ಬಗ್ಗೆ ಕಂಡುಬಂದರೆ ಕೂಡಲೇ app ಮೂಲಕ ಮಾಹಿತಿ ನೀಡಬಹುದು ಎಂದು ಪೊಲೀಸ್ ಅಧೀಕ್ಷಕರಾದ ಉಮಾಪ್ರಶಾಂತ್ ತಿಳಿಸಿದ್ದಾರೆ.
ಗಾಂಜಾಮಾರಾಟ ಆರೋಪಿ ಅರೆಸ್ಟ್
ಗಾಂಜಾ ಮಾರಾಟ ಮಾಡುತ್ತಿದ್ದ ಅಸ್ಸಾಂ ಮೂಲದ ವ್ಯಕ್ತಿಯೋರ್ವನನ್ನು ವಶಕ್ಕೆ ಪಡೆದಿರುವ ಚಿಕ್ಕಮಗಳೂರು ಜಿಲ್ಲಾ ಸಿಇಎನ್ ಠಾಣೆ ಪೋಲಿಸರು ಆತನಿಂದ 5 ಕೆ.ಜಿಗೂ ಹೆಚ್ಚು ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ಚಿಕ್ಕಮಗಳೂರು ನಗರದ ಹೊರವಲಯದಲ್ಲಿರುವ ಗೌಡನಹಳ್ಳಿ ಗ್ರಾಮದಲ್ಲಿ ಬಾಡಿಗೆಗೆ ಇದ್ದ ಅಸ್ಸಾಂ ಮೂಲದ ವ್ಯಕ್ತಿ ಮಹಮ್ಮದ್ ರಬೂಲ್ ಇಸ್ಲಾಂ ಅಕ್ರಮವಾಗಿ ಗಾಂಜಾವನ್ನು ಸಾರ್ವಜನಿಕರಿಗೆ, ಕಾರ್ಮಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.
SUMMARY | Davangere police have destroyed over 22 kg of ganja seized in NDPS act cases by setting it on fire. With the permission of the court, it was destroyed at a solid waste disposal unit on the outskirts of Davangere.
KEY WORDS | Davangere police, destroyed of ganja, NDPS act, Davangere,