ಖಾತೆ ಕ್ಯಾತೆ | ಅಂಗನವಾಡಿಗೆ ಬೀಗ ಹಾಕಿದ ಪ್ರಸಂಗಕ್ಕೆ ಸಿಕ್ತು ಕ್ಲೈಮ್ಯಾಕ್ಸ್‌

13

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 6, 2024 ‌ 

ತಮ್ಮ ಖಾತೆ ಜಾಗದಲ್ಲಿದೆಯಂತೆ ಅಂಗನವಾಡಿ ಕೇಂದ್ರಕ್ಕೆ ಬೀಗ ಹಾಕಿದ ಪ್ರಸಂಗವೊಂದು ಪೊಲೀಸರು ಹಾಗೂ ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಬಗೆಹರಿದಿದೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಹೆದ್ದಾರಿಪುರ ಗ್ರಾಮ ಪಂಚಾಯಿತಿ ಕಾರಗೋಡುವಿನಲ್ಲಿ ಈ ಪ್ರಸಂಗ ನಡೆದಿದೆ. 

ನಡೆದಿದ್ದೇನು?

ಇಲ್ಲಿನ ಅಂಗನವಾಡಿ ಕೇಂದ್ರಕ್ಕೆ ಅಲ್ಲಿಯ ನಿವಾಸಿ ಮಹಿಳೆಯೊಬ್ಬರು ಬೀಗ ಹಾಕಿದ್ದರು. ಇದು ಚರ್ಚೆಗೆ ಗ್ರಾಸವಾಗಿತ್ತು. ಸ್ಥಳೀಯ ವರದಿಗಾರ ರಫಿ ರಿಪ್ಪನ್‌ಪೇಟೆ ಈ ಸಂಬಂಧ ವರದಿ ಮಾಡಿದ್ದರು. ಆ ಬಳಿಕ ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕೃಷ್ಣಪ್ಪ , ಹೆದ್ದಾರಿಪುರ ಗ್ರಾಪಂ ಪಿಡಿಓ ಹಾಗೂ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದರು. ಈ ವೇಳೆ ಬೀಗ ಹಾಕಿದ್ದಕ್ಕೆ ಕಾರಣ ನೀಡಿದ ಮಹಿಳೆ, ಅಂಗನವಾಡಿ ಕೇಂದ್ರ  ಇರುವ ಜಾಗ ತಮ್ಮದು. ತಮ್ಮ ಹೆಸರಲ್ಲಿಯೇ ಜಾಗದ ಖಾತೆ ಇದೆ ಎಂದಿದ್ದಾರೆ. ಅಲ್ಲದೆ ತಮ್ಮ ಸಮಸ್ಯೆಗಳನ್ನ ಪಿಡಿಒ ಕೇಳುತ್ತಿರಲಿಲ್ಲ. ಇದನ್ನ ಗಮನಕ್ಕೆ ತರುವ ಸಲುವಾಗಿ ಅಂಗನವಾಡಿಗೆ ಬೀಗ ಹಾಕಿದ್ದಾಗಿ ಹೇಳಿದ್ದಾರೆ.  ಆ ಬಳಿಕ ಅಧಿಕಾರಿಗಳು ಜಾಗದ ಸರ್ವೆ ನಡೆಸುವುದಾಗಿ ಭರವಸೆ ನೀಡಿ, ಅಂಗನವಾಡಿ ಕೇಂದ್ರಕ್ಕೆ ಹಾಕಿದ್ದ ಬೀಗ ತೆರೆಸಿದ್ದಾರೆ. 

SUMMARY | ‌ An anganwadi centre in Karagodu, Hosanagara taluk, Shivamogga district, was locked by a private person 

KEY WORDS | anganwadi centre , Karagodu, Hosanagara taluk , Shivamogga district, was locked by a private person 

Share This Article