ಕೋಳಿ ಜಗಳದಲ್ಲಿ ನೆರೆಹೊರೆಯ ವಿಷ ಹಾಕಿದರೆ? | ಸಾಗರ, ಭದ್ರಾವತಿ, ಶಿವಮೊಗ್ಗದ ಸಣ್ಣ ಸುದ್ದಿಗಳು

13

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 24, 2024 ‌‌  

ಶಿವಮೊಗ್ಗ ಜಿಲ್ಲೆ ಸಾಗರ ಟೌನ್‌ನಲ್ಲಿ ಪಕ್ಕದಮನೆಯವರು ಕೋಳಿಗಳಿಗೆ ವಿಷ ಹಾಕಿ ಸಾಯಿಸಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ ಪ್ರಕರಣವೊಂದು ವರದಿಯಾಗಿದೆ. ಇಲ್ಲಿನ ನಿವಾಸಿಯೊಬ್ಬರು ತಮ್ಮ ಮನೆಯ ಪಕ್ಕದ ಮನೆಯವರು ಕೋಳಿಗಳಿಗೆ ವಿಷ ಹಾಕಿ ಹಾಯಿಸಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ಕರೆ ಮಾಡಿದ್ದರು. ಈ ಸಂಬಂಧ ಸ್ಥಳಕ್ಕೆ ಬಂದ ಪೊಲೀಸರು ವಿಚಾರಣೆ ನಡೆಸಿ ಠಾಣೆಗೆ ದೂರು ನೀಡುವಂತೆ ಸೂಚಿಸಿದ್ದಾರೆ. 

ಇನ್ನೊಂದು ಘಟನೆಯಲ್ಲಿ ಶಿವಮೊಗ್ಗದ ತುಂಗಾನಗರ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಅಡ್ವಾನ್ಸ್‌ ಪಡೆದುಕೊಂಡು ಕೆಲಸಕ್ಕೆ ಬರದ ಕೆಲಸಗಾರರ ವಿರುದ್ಧ ದುಡ್ಡು ಕೊಟ್ಟ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಸ್ಥಳಕ್ಕೆ ಬಂದ ಪೊಲೀಸರು  ಸಂಬಂಧ ಪಟ್ಟ ಕೆಲಸಗಾರರನ್ನು ವಿಚಾರಣೆ ನಡೆಸಿ ಪಡೆದ ಹಣ ವಾಪಸ್‌ ಕೊಡಿ ಇಲ್ಲವೆ ಅವರ ಕೆಲಸ ಮಾಡಿಕೊಡಿ, ತೊಂದರೆ ಮಾಡಬೇಡಿ ಎಂದು ಬುದ್ದಿವಾದ ಹೇಳಿ ಪ್ರಕರಣ ಇತ್ಯರ್ಥಗೊಳಿಸಿದ್ದಾರೆ. 

ಅತ್ತ ಭದ್ರಾವತಿ ನ್ಯೂಟೌನ್‌ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ  ಡೈರಿಗೆ ಹಾಲು ಹಾಕಲು ಹೋದರೆ ವ್ಯಕ್ತಿಯೊಬ್ಬ ತೊಂದರೆ ಕೊಟ್ಟ ಘಟನೆ ನಡೆದಿದೆ. ಈ ಸಂಬಂಧ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಹಾಲು ಹಾಕುವ ವಿಚಾರದಲ್ಲಿ ಗಲಾಟೆ ಮಾಡಬೇಡಿ ಎಂದು ಎರಡು ಕಡೆಯವರಿಗೂ ಎಚ್ಚರಿಸಿದ್ದಾರೆ. ಹಾಗೊಂದು ವೇಳೆ ಜಟಾಪಟಿ ಮುಂದುವರಿಸಿದರೆ ಠಾಣೆಗೆ ಬಂದು ದೂರು ಕೊಡುವಂತೆ ಸೂಚಿಸಿದ್ದಾರೆ.

SUMMARY | Shivamogga News, Sagar Town, Namma Sagar, Shivamogga Tunganagar Police Station, Bhadravati Newtown Police Station, Shivamogga Short News

KEY WORDS |Shivamogga News, Sagar Town, Namma Sagar, Shivamogga Tunganagar Police Station, Bhadravati Newtown Police Station, Shivamogga Short News

Share This Article