ಕೊಟ್ಟ ಆಶ್ವಾಸನೆ ಈಡೇರಿಸಿದ‌ SP ಉಮಾಪ್ರಶಾಂತ್ | ಕಾಡಿಗೆ ಕಿಡಿಗೇಡಿಗಳ ಬೆಂಕಿ | ಕರುವಿಗೆ ಮೆಚ್ಚಿನೇಟು | OUT OF STATION

13

SHIVAMOGGA| MALENADUTODAY NEWS | ಮಲೆನಾಡು ಟುಡೆ  Feb 18, 2025 ‌‌ 

ಸುದ್ದಿ 1 : ದಾವಣಗೆರೆ ಜಿಲ್ಲಾ ಮಲೆಬೆನ್ನೂರು ಪೊಲೀಸರು ಇಲ್ಲಿನ ಕೊಕ್ಕನೂರು ಗ್ರಾಮದಲ್ಲಿ ನಡೆದಿದ್ದ ಸರಗಳ್ಳತನ ಪ್ರಕರಣವನ್ನು ಭೇದಿಸಿದ್ದಾರೆ. ಇಲ್ಲಿನ ನಿವಾಸಿಯೊಬ್ಬರ ಕೊರಳಿಗೆ ಕೈ ಹಾಕಿದ್ದ ಆರೋಪಿ 2 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಎಗರಿಸಿದ್ದ. ಈ ಬಗ್ಗೆ ಆಕ್ರೋಶ ವ್ಯಕ್ತವಾಗಿದ್ದ ಹಿನ್ನೆಲೆ ಎಸ್‌ಪಿ ಉಮಾಪ್ರಶಾಂತ್‌ ಸ್ಥಳೀಯರಿಗೆ ಆರೋಪಿಯನ್ನ ತಕ್ಷಣವೆ ಬಂಧಿಸುವ ಭರವಸೆ ನೀಡಿದ್ದರು. ಇದೀಗ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಸ್ಥಳೀಯರಿಗೆ ನೀಡಿದ್ದ ಆಶ್ವಾಸನೆಯಂತೆ ನಡೆದುಕೊಂಡಿದ್ದಾರೆ.  

ಸುದ್ದಿ  2 : ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡ್ಗಿಚ್ಚಿನ ಆರ್ಭಟ ಜಾಸ್ತಿಯಾಗಿದೆ. ಇಲ್ಲಿನ  ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಭಾಗದಲ್ಲಿ ನಿನ್ನೆ ಸಂಜೆ ಬೆಂಕಿ ಕಾಣಿಸಿಕೊಂಡಿದೆ. ಈ ಬೆಂಕಿ ನಂದಿಸಲು ಅರ‍ಣ್ಯ ಇಲಾಖೆ ಹರಸಾಹಸ ಪಡುತ್ತಿದೆ. ಕೌಂಟರ್‌ ಫೈರ್‌ ಮಾಡುತ್ತಿರುವುದರ ಜೊತೆಗೆ ಸ್ಥಳೀಯರ ಸಹಾಯದಿಂದ ಅರ‍ಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಲು ಹೋರಾಡುತ್ತಿದೆ. ಆದರೆ ಬೆಂಕಿ ಗಾಳಿಯ ವೇಗಕ್ಕೆ ಇನ್ನಷ್ಟು  ಕಡೆ ವ್ಯಾಪಿಸುತ್ತಿದೆ. ಇನ್ನೂ ಕಿಡಿಗೇಡಿಗಳೇ ಬೆಂಕಿ ಹಾಕಿರುವ ಸಾಧ್ಯತೆ ಇದ್ದು, ಈ ಸಂಬಂಧ ಪ್ರಕರಣ ದಾಖಲಿಸಿ ಕೆಲವರನ್ನು ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿ ಇದೆ. 

Malenadu Today

ಸುದ್ದಿ  3 : ಹಸುಗಳ ಮೇಲಿನ ವಿಕೃತದಾಳಿ ಮುಂದುವರಿದಿದೆ. ಇದಕ್ಕೆ ಸಾಕ್ಷಿ ಎಂಬಂತೆ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕು ಅರಕೆರೆಯಲ್ಲಿ ಕೊಟ್ಟಿಗೆಯಲ್ಲಿ ಕರುವಿನ ಮೇಲೆ ವಿಕೃತರು ದಾಳಿ ನಡೆಸಿದ್ದಾರೆ. ಕರುವಿನ ಮೇಲೆ ಮಚ್ಚಿನಿಂದ ದಾಳಿ ಮಾಡಲಾಗಿದ್ದು, ಕರುವು ಗಂಭೀರವಾಗಿ ಗಾಯಗೊಂಡಿದೆ. ಸದ್ಯ ವಿಷಯ ತಿಳಿದು ಪಶುವೈದ್ಯರು ಚಿಕಿತ್ಸೆ ನೀಡಿದ್ದು, ಕರುವು ಚೇತರಿಸಿಕೊಳ್ಳುತ್ತಿದೆ. 

SUMMARY | today news davanagere chikkamagalur shivamogga hassan 

KEY WORDS | today news ,davanagere, chikmagalur, shivamogga, hassan

Share This Article