ಕೇರಳದವರ ಜೊತೆ, 10 ಕೋಟಿ ಮಾಲ್​ ಸಮೇತ ಸಿಕ್ಕಿಬಿದ್ದ ಶಿವಮೊಗ್ಗ ನಿವಾಸಿ | ದಾವಣಗೆರೆಯಲ್ಲಿ ಅಮ್ಮನ ಕೊಂದ ಮಗ | ಮಡದಿಗೆ ಕಿರುಕುಳ, ಕೋರ್ಟ್ ಶಿಕ್ಷೆ

13

SHIVAMOGGA| MALENADUTODAY NEWS | ಮಲೆನಾಡು ಟುಡೆ  Apr 11, 2025 ‌‌ ‌‌

ಸುದ್ದಿ 1 : ₹10 ಕೋಟಿ ಮೌಲ್ಯದ ಅಂಬರ್‌ಗ್ರೀಸ್‌ ಜಪ್ತಿ : ಕೊಡಗು ಜಿಲ್ಲೆ ವಿರಾಜಪೇಟೆ ಸಮೀಪ ಬೆಟೋಳಿ ಗ್ರಾಮದ ಹೆಗ್ಗಳ ಜಂಕ್ಷನ್ ಬಳಿ ಪೊಲೀಸರು ₹ 10 ಕೋಟಿ ಮೌಲ್ಯದ, 10 ಕೆ.ಜಿ 390 ಗ್ರಾಂ ತಿಮಿಂಗಲದ ವಾಂತಿ ಅಥವಾ ಅಂಬರ್‌ಗ್ರೀಸ್‌ ಜಪ್ತಿ ಮಾಡಿದ್ದಷ್ಟೆ ಅಲ್ಲದೆ, ಈ ಸಂಬಂಧ  10 ಮಂದಿಯನ್ನು ಬಂಧಿಸಿದ್ದಾರೆ. ಈ ಪೈಕಿ ಓರ್ವ ಆರೋಪಿ ಮಾತ್ರ ಶಿವಮೊಗ್ಗ ನಿವಾಸಿ, ಉಳಿದವರೆಲ್ಲ ಕೇರಳದವರು. ಅಂಬರ್​ಗ್ರೀಸ್​ನ್ನು ಬೆಂಗಳೂರಿನಲ್ಲಿ ಮಾರಲು ಮುಂದಾಗಿದ್ದ ಇವರ ಬಳಿಯಲ್ಲಿದ್ದ ನೋಟು ಎಣಿಸುವ 2 ಯಂತ್ರಗಳನ್ನೂ ಸಹ ಪೊಲೀಸರು ಸೀಜ್​ ಮಾಡಿದ್ದಾರೆ. 

ಸುದ್ದಿ 2:  ಹಣ ಕೊಡದ ತಾಯಿಯನ್ನು ಕೊಂದ ಮಗ : ಇತ್ತ ದಾವಣಗೆರೆ ಜಿಲ್ಲೆಯಲ್ಲಿ ಕುಡಿತಕ್ಕಾಗಿ ತಾಯಿ ಬಳಿ ಹಣ ಕೇಳಿದ ಮಗ, ಸಿಟ್ಟಿನಲ್ಲಿ ಆಕೆಯನ್ನು ಕೊಂದ ಘಟನೆ ವರದಿಯಾಗಿದೆ. ದಾವಣಗೆರೆ ತಾಲ್ಲೂಕಿನ ಐಗೂರು ಗೊಲ್ಲರಹಟ್ಟಿಯಲ್ಲಿ ಘಟನೆ ನಡೆದಿದೆ. ರತ್ನಾಬಾಯಿ ಮೃತ ಮಹಿಳೆ. ರಾಘವೇಂದ್ರ ನಾಯ್ಕ  ಕೊಲೆ ಆರೋಪಿ. ಪ್ರಕರಣ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.  

ಸುದ್ದಿ 3: ಕೌಟುಂಬಿಕ ದೌರ್ಜನ್ಯ ಆರೋಪಿಗೆ ಶಿಕ್ಷೆ : ಕೌಟುಂಬಿಕ ದೌರ್ಜನ್ಯದ ಆರೋಪ ಎದುರಿಸುತ್ತಿದ್ದ ಆರೋಪಿಗೆ ಶಿವಮೊಗ್ಗದ 2ನೇ  ಜೆ.ಎಂ.ಎಫ್.ಸಿ ನ್ಯಾಯಾಲಯ ಒಂದುವರೆ ವರ್ಷ ಕಾರಾಗೃಹ ಶಿಕ್ಷೆ ಮತ್ತು 15 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.  2017 ರಲ್ಲಿ ದಾಖಲಾಗಿದ್ದ ಕೇಸ್ ಇದಾಗಿ. ಪತಿ ವಿರುದ್ಧ ಪತ್ನಿಯೊಬ್ಬರು ಕೇಸ್ ದಾಖಲಿಸಿದ್ದರು. ಆರೋಪ ಸಾಬೀತಾ ಹಿನ್ನೆಲೆಯಲ್ಲಿ ಆರೋಪಿಗೆ ಕೋರ್ಟ್ ಶಿಕ್ಷೆ ವಿಧಿಸಿದೆ.   

Share This Article