ಕೇಂದ್ರ ಗೃಹಸಚಿವ ಅಮಿತ್‌ ಶಾ ವಿರುದ್ಧ ಕೆರಳಿದ ಕಾಂಗ್ರೆಸ್

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Dec 20, 2024

ಶಿವಮೊಗ್ಗ | ಮಹಾನಗರ ಪಾಲಿಕೆಯ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಮುಂಭಾಗ ಎನ್‌ ಯು ಎಸ್‌ ಐ ಕಾರ್ಯಕರ್ತರು ಡಾ. ಬಿ.ಆರ್.ಅಂಬೇಡ್ಕರ್ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಅಮಿತ್‌ಶಾರನ್ನು ಕೂಡಲೆ ಸಂಪುಟದಿಂದ ವಜಾ ಮಾಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಹಾಗೆಯೇ ಅಮಿತ್‌ ಶಾ ವಿರುದ್ದ ಘೋಷಣೆಯನ್ನು ಕೂಗಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷರಾದ ಆರ್‌ ಪ್ರಸನ್ನ ಕುಮಾರ್‌ ಡಾ. ಬಿ.ಆರ್.ಅಂಬೇಡ್ಕರ್ ಅವರು ಜಗತ್ತು ಕಂಡ ಅಪ್ರತಿಮ ಹೋರಾಟಗಾರರು, ಅವರು ಸಂವಿಧಾನ ರಚಿಸದೇ ಇದ್ದಿದ್ದರೆ ಇಂದು ನಾವೆಲ್ಲಾ ದಾಸ್ಯದ ಸಂಕೋಲೆಯಲ್ಲೇ ಇರಬೇಕಿತ್ತು. ಇದನ್ನು ಅರಿತುಕೊಳ್ಳದ ಅಮಿತ್‌ಶಾರವರಂತಹವರು ಈ ದೇಶದ ಕೇಂದ್ರ ಗೃಹ ಸಚಿವರಾಗಿರುವುದು ನಮ್ಮೆಲ್ಲರ ದುರ್ದೈವ ಎಂದು ಹೇಳಿದರು.

ಈ ದೇಶದ ಇತಿಹಾಸ, ಬಲಿದಾನ ಮಾಡಿದ ನಾಯಕರ ಬಗ್ಗೆ ಅರಿವಿಲ್ಲದೇ ಇರುವಂತಹ ಅಯೋಗ್ಯ ವ್ಯಕ್ತಿ ಅಮಿತ್ ಶಾ |‌ ಹೆಚ್.ಸಿ ಯೋಗೇಶ್ 

ಒಬ್ಬ ಜನಪ್ರತಿನಿಧಿಯಾಗಿ ಅಂಬೇಡ್ಕರ್‌ರವರಂತಹವರ ಮಹಾನ್ ನಾಯಕರ ಹೋರಾಟದ ಫಲವಾಗಿ ಸೃಷ್ಟಿಯಾಗಿರುವ ಸಂಸತ್ತಿನಲ್ಲೇ  ಅಮಿತ್ ಶಾ ಮತಿಕೆಟ್ಟವರಂತೆ ಮಾತನಾಡಿದ್ದಾರೆ ಇದು ಅಕ್ಷಮ್ಯ. ದಾಸ್ಯ, ದೌರ್ಜನ್ಯ, ಶೋಷಣೆಯಲ್ಲೇ ಇದ್ದ ಕೋಟ್ಯಂತರ ಭಾರತೀಯರು ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದಿಂದಾಗಿ ಇಂದು ಸ್ವಾಭಿಮಾನದಿಂದ ಬದುಕುವಂತಾಗಿದೆ. ಈ ದೇಶದ ಇತಿಹಾಸ, ಬಲಿದಾನ ಮಾಡಿದ ನಾಯಕರ ಬಗ್ಗೆ ಅರಿವಿಲ್ಲದೇ ಇರುವಂತಹ ಅಯೋಗ್ಯ ವ್ಯಕ್ತಿ ಅಮಿತ್ ಶಾ ಒಂದು ಕ್ಷಣವೂ ಕೇಂದ್ರ ಸಚಿವ ಸ್ಥಾನದಲ್ಲಿ ಮುಂದುವರೆಯಬಾರದು. ರಾಷ್ಟ್ರಪತಿಗಳು  ಕೂಡಲೇ ಅಮಿತ್ ಶಾ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು‌ ಮಾಜಿ ಕಾರ್ಪೊರೇಟರ್ HC ಯೋಗೇಶ್ ಅವರು ಆಕ್ರೋಶ ವ್ಯಕ್ತಪಡಿಸಿದರು.  

ಅಮಿತ್ ಶಾ ಸಚಿವ ಸ್ಥಾನದಲ್ಲಿ ಮುಂದುವರೆದಲ್ಲಿ ಎನ್.ಎಸ್‌ಯು.ಐ.ದೇಶಾದ್ಯಂತ ತೀವ್ರ ಹೋರಾಟ ಮಾಡಲಿದೆ ಎಂದು ಈ ಮೂಲಕ NSUI ಸಂಘಟನೆ ಜಿಲ್ಲಾಧ್ಯಕ್ಷ  ಎಚ್ಚರಿಸಿದರು.  

SUMMARY |  Metropolitan Municipality  NUSI activists staged a protest in front of the statue of B R Ambedkar. They staged a protest demanding the immediate dismissal of Amit Shah from the cabinet for his derogatory remarks against B R Ambedkar. They also raised slogans against Amit Shah. 


KEYWORDS | NUSI, protest,  b R Ambedkar, Amit Shah,

Share This Article