ಶಿವಮೊಗ್ಗ ಜೈಲಿಗೂ ತಟ್ಟಿದ ಪ್ರತಿಭಟನೆಯ ಬಿಸಿ | ಬೀಡಿಗಾಗಿ ಉಪವಾಸ ಸತ್ಯಾಗ್ರಹ ಆರಂಭ! ಏನಿದು
protest in Shivamogga jail, ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಬೀಡಿಗಾಗಿ ಕೈದಿಗಳು ಪ್ರತಿಭಟನೆ ನಡೆಸ್ತಿದ್ದಾರೆ ಎಂದು ತಿಳಿದು ಬಂದಿದೆ.
SHIVAMOGGA | MALENADUTODAY NEWS | Sep 2, 2024 ಮಲೆನಾಡು ಟುಡೆ
ನಟ ದರ್ಶನ್‌ರಿಗೆ ಸಿಕ್ಕ ರಾಜಾತಿಥ್ಯದ ಪ್ರಕರಣದ ಪರಿಣಾಮ ಇದೀಗ ರಾಜ್ಯದ ಎಲ್ಲಾ ಜೈಲುಗಳ ಮೇಲೆ ಬಿದ್ದಿದೆ. ಬೆಂಗಳೂರು ಪರಪ್ಪನ ಅಗ್ರಹಾರದಿಂದ ಹೊರಬಿದ್ದ ವೈರಲ್ ಚಿತ್ರಗಳು ಕಾರಾಗೃಹ ಇಲಾಖೆಯಲ್ಲಿ ಅತಿದೊಡ್ಡ ಅಮಾನತ್ತು ಶಿಕ್ಷೆಗೆ ಕಾರಣವಾಗಿತ್ತು.
ದರ್ಶನ್ ಪ್ರಕರಣದ ಪರಿಣಾಮ
ಅಲ್ಲದೆ ಈ ಘಟನೆ ಬಳಿಕ ದರ್ಶನ್ ಸೇರಿದಂತೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳನ್ನ ರಾಜ್ಯದ ವಿವಿದೆಡೆ ಶಿಫ್ಟ್ ಮಾಡಲಾಗಿತ್ತು. ಮೇಲಾಗಿ ಈ ಆರೋಪಿಗಳನ್ನ ಇಟ್ಟಿರುವ ಎಲ್ಲಾ ಜೈಲುಗಳಲ್ಲಿ ಬಿಗಿ ಕ್ರಮಗಳನ್ನ ಕೈಗೊಳ್ಳಲಾಗಿದೆ. ಇದರ ಪರಿಣಾಮವಾಗಿ ಉಳಿದ ಕೈದಿಗಳು ಇನ್ನಿಲ್ಲದ ಸಂಕಟ ಪಡುವಂತಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕಾರವಾರ ಜೈಲಿನಲ್ಲಿ ತಂಬಾಕಿಗಾಗಿ ರಾದ್ದಾಂತ ನಡೆದಂತೆ, ಇವತ್ತು ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಬೀಡಿಗಾಗಿ ಪ್ರತಿಭಟನೆ ನಡೆಸಿದ್ದಾರೆ.
ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಪ್ರತಿಭಟನೆ
778 ಕೈದಿಗಳು ಇವತ್ತು ಬೆಳಗ್ಗಿನ ಉಪಹಾರವನ್ನು ಸೇವಿಸಿದೇ ಪ್ರತಿಭಟನೆ ಯನ್ನ ನಡೆಸಿದ್ದಾರೆ. ಕಾರಾಗೃಹ ಇಲಾಖೆಯ ಬಿಗಿ ಕ್ರಮದಿಂದ ಜೈಲಿನಲ್ಲಿ ಬಿಡಿಯು ಸಹ ಸಿಗುತ್ತಿಲ್ಲ. ಆದರೆ ಬೀಡಿ ಸಿಗರೇಟಿನ ಚಟಕ್ಕೆ ಅಡಿಕ್ಟ್ ಆಗಿರುವ ಕೈದಿಗಳು ಅದರಿಂದ ಬಿಡಿಸಿಕೊಳ್ಳಲಾಗದೇ ಒದ್ದಾಡುತ್ತಿದ್ದಾರೆ.
ಇದೆ ಕಾರಣಕ್ಕೆ ಇವತ್ತು ಒಗ್ಗಟ್ಟಿನ ಪ್ರತಿಭಟನೆ ನಡೆಸುತ್ತಿದ್ದಾರೆ. ಜೈಲಿನಲ್ಲಿ ಇವತ್ತು ಬೆಳಗಿನ ಉಪಾಹಾರವನ್ನು ತ್ಯಜಿಸಿರುವ ಕೈದಿಗಳು ಉಪವಾಸ ಸತ್ಯಾಗ್ರಹ ಮಾಡುವುದಾಗಿ ಹೇಳುತ್ತಿದ್ದಾರೆ. ಅವರ ಮನವೊಲಿಸುವ ಸಲುವಾಗಿ ಕಾರಾಗೃಹ ಇಲಾಖೆಯ ಅಧಿಕಾರಿಗಳ ತಂಡ ಪ್ರಯತ್ನ ನಡೆಸುತ್ತಿದೆ. ಆದಾಗ್ಯು ಅಧಿಕಾರಿಗಳ ಮಾತಿಗೆ ಕೈದಿಗಳು ಸುಮ್ಮನಾಗುತ್ತಿಲ್ಲ. ಬೇಕೆಬೇಕು ಬೀಡಿಯಾದರೂ ಬೇಕು ಎಂದು ಪ್ರತಿಭಟನೆ ಮುಂದುವರಿಸಿದ್ದಾರೆ ಎಂದು ಹೇಳಲಾಗಿದೆ.
ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ ಇತ್ತೀಚೆಗೆಷ್ಟೆ ಶಿವಮೊಗ್ಗ ಎಸ್‌ಪಿ ಮಿಥುನ್ ಕುಮಾರ್ ನೇತೃತ್ವದ 100 ಕ್ಕೂ ಹೆಚ್ಚು ಪೊಲೀಸರ ತಂಡ ರೇಡ್ ನಡೆಸಿತ್ತು. ಈ ವೇಳೆ ಮ್ಯಾಚ್ ಬಾಕ್ಸ್ ಹಾಗೂ ಬಿಡಿಯ ಬಂಡಲ್ ಮತ್ತು ಚಾರ್ಜರ್ ವಯರ್ ಸಿಕ್ಕಿತ್ತು. ಈ ಬಗ್ಗೆ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಸಹ ದಾಖಲಾಗಿತ್ತು. ಇದರ ಬೆನ್ನಲ್ಲೆ ಶಿವಮೊಗ್ಗ ಜೈಲಿಗೆ ದರ್ಶನ್ ಗ್ಯಾಂಗ್‌ನ ಇಬ್ಬರು ಆರೋಪಿಗಳು ಇನ್ ಆಗಿದ್ದರು. ಆನಂತರ ಜೈಲಿನಲ್ಲಿ ಇನ್ನಷ್ಟು ಬಂದೋಬಸ್ತ್ ಮಾಡಲಾಗಿತ್ತು. ಇವೆಲ್ಲದರ ಪರಿಣಾಮವಾಗಿ ಕೈದಿಗಳಿಗೆ ಬೀಡಿಯು ಸಿಗಂದತಾಗಿದೆ. ಇದರಿಂದ ಸಿಟ್ಟಿಗೆದ್ದಿರುವ ಕೈದಿಗಳು ಪ್ರತಿಭಟನೆಗೆ ಇಳಿದಿದ್ದಾರೆ.
ಜೂನ್, ಜುಲೈ, ಆಗಸ್ಟ್ | ಮೂರು ತಿಂಗಳಿನಲ್ಲಿ ರಾಜ್ಯದಲ್ಲಿ ಎಷ್ಟು ಮಳೆಯಾಗಿದೆ? | ಗುಡ್ ನ್ಯೂಸ್ ಇಲ್ಲಿದೆ
ಇನ್ನಷ್ಟು ಸುದ್ದಿಗಳು
ಆನ್ ಲೈನ್ ಮನಿ ಟ್ರೇಡಿಂಗ್ ದಂಧೆಗೆ ಸಿಲುಕಿ ಆತ್ಮಹತ್ಯೆಗೆ ಶರಣಾದನೇ ತೀರ್ಥಹಳ್ಳಿಯ ರ್ಯಾಂಕ್ ವಿದ್ಯಾರ್ಥಿ,ಕಿಚ್ಚ ?
ಅಗ್ನಿವೀರ್ | ಒಂದೇ ಕಾರಣಕ್ಕೆ ನೂರಾರು ವಿದ್ಯಾರ್ಥಿಗಳು ಕೆಲಸ ಕಳೆದುಕೊಳ್ಳಬೇಕಾಯಿತು | ನಡೆದಿದ್ದೇನು?
Bhadra dam | ಮತ್ತೆ ಬರುತ್ತಿದೆ ಮಳೆ | ತುಂಗಾ ಡ್ಯಾಂ ಭರ್ತಿ, ಭದ್ರಾ ಡ್ಯಾಂನಲ್ಲಿ ಎಷ್ಟಿದೆ ನೀರಿನ ಮಟ್ಟ!?