SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 21, 2025
ವಿಜಯಪುರ | ಇಟ್ಟಿಗೆ ಭಟ್ಟಿಯ ಮಲೀಕ ಮೂವರು ಕಾರ್ಮಿಕರರಿಗೆ ಮನಸೋಇಚ್ಚೆ ಥಳಿಸಿರುವ ಘಟನೆ ಇಲ್ಲಿನ ಗಾಂಧಿನಗರದ ಸ್ಟಾರ್ ಚೌಕ್ ಬಳಿ ನಡೆದಿದೆ. ಘಟನೆಗೆ ಸಂಬಂಧಪಟ್ಟ ವಿಡಿಯೋ ವೈರಲ್ ಆಗಿದ್ದು, ತಡವಾಗಿಯಾದರೂ ಪೊಲೀಸರು ಆರೋಪಿಗಳನ್ನ ಅರೆಸ್ಟ್ ಮಾಡಿದ್ದಾರೆ.
ಏನಿದು ಘಟನೆ
ಬಾಗಲಕೋಟೆಯ ಜಮಖಂಡಿ ತಾಲೂಕಿನ ಚಿಕ್ಕಲಿಕಿ ಗ್ರಾಮದವರಾದ ಉಮೇಶ್, ಸದಾಶಿವ ಮಾದರ ಹಾಗೂ ಸದಾಶಿವ ಬಬಲಾದಿ ಎಂಬ ಮೂವರು ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಕಳೆದ ಸಂಕ್ರಾಂತಿ ಹಬ್ಬದಂದು ಇಟ್ಟಿಗೆ ಭಟ್ಟಿ ಮಾಲೀಕ ಖೇಮು ರಾಥೋಡ್ ಬಳಿ ಅಡ್ವಾನ್ಸ್ ಹಣ ಪಡೆದು ಊರಿಗೆ ತೆರಳಿದ್ದರು. ಆದರೆ ಮಲೀಕ ಹೇಳಿದ ಸಮಯಕ್ಕೆ ಕಾರ್ಮಿಕರು ಕೆಲಸಕ್ಕೆ ಬಂದಿರಲಿಲ್ಲ. ಇದರಿಂದ ಕುಪಿತಗೊಂಡ ಮಾಲೀಕ ಪೈಪ್‌ನಿಂದ ಕಾರ್ಮಿಕರ ಮೇಲೆ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಈ ಹಿನ್ನಲೆ ವಿಜಯಪುರ ಗ್ರಾಮೀಣ ಭಾಗದ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.
इसे रिपोस्ट करें जिससे ऐसा करने वालों में डर पैदा हो !!
घटना बागलकोट जिला के जामखंडी तालुक के चिक्लिकी गांव की बताई जा रही है !!ईंट भट्टे पर काम करने वाले तीन प्रवासी मजदुर मैंनेजर से एडवांस लेकर त्यौहार मानाने चले गए, पास के शहर में कुछ खरीददारी की और लौटने में देरी कर दी, इस… pic.twitter.com/mmB9apHCKe
— MANOJ SHARMA LUCKNOW UP???????????????????????? (@ManojSh28986262) January 20, 2025
SUMMARY | Three labourers of a brick kiln were allegedly beaten up by a brick kiln owner near Star Chowk in Gandhinagar.
KEYWORDS | labourers, Gandhinagar, kiln,










