SHIVAMOGGA | MALENADUTODAY NEWS | ಮಲೆನಾಡು ಟುಡೆ Nov 20, 2024
ಸುರಕ್ಷತೆಗೆ ಸಂಬಂಧಿಸಿದ ಕೆಲಸದ ಕಾರಣ ನೈಋತ್ಯ ರೈಲ್ವೆ ವಿಭಾಗ, ತನ್ನ ವಿಭಾಗದ ಕೆಲವು ರೈಲುಗಳ ಓಡಾಟದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಕೆಲವು ರೈಲು ಸಂಚಾರ ನಿರ್ದಿಷ್ಟ ದಿನ ರದ್ದುಗೊಳಿಸಿದ್ದರೆ, ಮತ್ತೆ ಕೆಲವೂ ರೈಲು ಸಂಚಾರದ ಅವಧಿಯನ್ನ ರಿ ಷೆಡ್ಯೂಲ್ ಮಾಡಿದೆ.
ಈ ಪೈಕಿ ಶಿವಮೊಗ್ಗದ ರೈಲ್ವೆ ವಿಚಾರದಲ್ಲಿ ರೈಲು ಸಂಖ್ಯೆ 16579 ಯಶವಂತಪುರ-ಶಿವಮೊಗ್ಗ ಟೌನ್ ಇಂಟರ್‌ಸಿಟಿ ಡೈಲಿ ಎಕ್ಸ್‌ಪ್ರೆಸ್, ನವೆಂಬರ್ 24 ರಂದು ಪ್ರಾರಂಭವಾಗುವ ಪ್ರಯಾಣವನ್ನು ಯಶವಂತಪುರದಿಂದ 90 ನಿಮಿಷಗಳ ಕಾಲ ಮರುಹೊಂದಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ರೈಲು ಸಂಖ್ಯೆ 06512 ತುಮಕೂರು-ಬಾನಸವಾಡಿ ಮೆಮು ವಿಶೇಷ ರೈಲು ನವೆಂಬರ್ 23 ರಂದು ರದ್ದುಗೊಳ್ಳುತ್ತದೆ ಎಂದು ತಿಳಿಸಲಾಗಿದ್ದು,
ರೈಲು ಸಂಖ್ಯೆ 16239 ಚಿಕ್ಕಮಗಳೂರು-ಯಶವಂತಪುರ ಡೈಲಿ ಎಕ್ಸ್‌ಪ್ರೆಸ್ ಅನ್ನು ನವೆಂಬರ್ 23 ರಂದು ರದ್ದುಗೊಳಿಸಲಾಗಲಿದೆ ಎಂದು ತಿಳಿಸಿದೆ. ರೈಲು ಸಂಖ್ಯೆ 16240 ಯಶವಂತಪುರ-ಚಿಕ್ಕಮಗಳೂರು ಡೈಲಿ ಎಕ್ಸ್‌ಪ್ರೆಸ್ ಅನ್ನು ನವೆಂಬರ್ 23 ರಂದು ರದ್ದುಗೊಳಿಸಲಾಗಿದೆ. ರೈಲು ಸಂಖ್ಯೆ 06571 ಕೆಎಸ್ಆರ್ ಬೆಂಗಳೂರು-ತುಮಕೂರು ಮೆಮು ವಿಶೇಷ ರೈಲು ನವೆಂಬರ್ 23 ಮತ್ತು 24 ರಂದು ದೊಡ್ಡಬೆಲೆ ಮತ್ತು ತುಮಕೂರು ನಡುವೆ ಭಾಗಶಃ ರದ್ದುಗೊಳ್ಳಲಿದೆ. ರೈಲು ಸಂಖ್ಯೆ 06576 ತುಮಕೂರು-ಕೆಎಸ್ಆರ್ ಬೆಂಗಳೂರು ಮೆಮು ವಿಶೇಷ ರೈಲು ನವೆಂಬರ್ 23 ಮತ್ತು 24 ರಂದು ತುಮಕೂರು ಮತ್ತು ದೊಡ್ಡಬೆಲೆ ನಡುವೆ ಭಾಗಶಃ ರದ್ದುಗೊಳ್ಳಲಿದೆ.
ರೈಲು ಸಂಖ್ಯೆ 06575 ಕೆಎಸ್ಆರ್ ಬೆಂಗಳೂರು-ತುಮಕೂರು ಮೆಮು ವಿಶೇಷ ರೈಲು ನವೆಂಬರ್ 23 ರಂದು ದೊಡ್ಡಬೆಲೆ ಮತ್ತು ತುಮಕೂರು ನಡುವೆ ಭಾಗಶಃ ರದ್ದುಗೊಳ್ಳಲಿದೆ ಎಂದು ತಿಳಿಸಿರುವ ರೈಲ್ವೆ ಇಲಾಖೆ ರೈಲು ಸಂಖ್ಯೆ 06572 ತುಮಕೂರು-ಕೆಎಸ್ಆರ್ ಬೆಂಗಳೂರು ಮೆಮು ವಿಶೇಷ ರೈಲು ನವೆಂಬರ್ 23 ರಂದು ತುಮಕೂರು ಮತ್ತು ದೊಡ್ಡಬೆಲೆ ನಡುವೆ ಭಾಗಶಃ ರದ್ದುಗೊಳ್ಳಲಿದೆ ಎಂದಿದೆ
ರೈಲು ಸಂಖ್ಯೆ 17392 ಎಸ್‌ಎಸ್‌ಎಸ್ ಹುಬ್ಬಳ್ಳಿ-ಕೆಎಸ್‌ಆರ್ ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್, ನವೆಂಬರ್ 22 ರಂದು ಪ್ರಾರಂಭವಾಗುವ ಪ್ರಯಾಣವನ್ನು ಮಾರ್ಗದಲ್ಲಿ 20 ನಿಮಿಷಗಳ ಕಾಲ , ರೈಲು ಸಂಖ್ಯೆ 20652 ತಾಳಗುಪ್ಪ-ಕೆಎಸ್‌ಆರ್ ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್, ನವೆಂಬರ್ 24 ರಂದು ಪ್ರಾರಂಭವಾಗುವ ಪ್ರಯಾಣವನ್ನು ಮಾರ್ಗದಲ್ಲಿ 30 ನಿಮಿಷಗಳ ಕಾಲ, ರೈಲು ಸಂಖ್ಯೆ 17326 ಮೈಸೂರು-ಬೆಳಗಾವಿ ವಿಶ್ವಮಾನವ್ ಡೈಲಿ ಎಕ್ಸ್‌ಪ್ರೆಸ್, ನವೆಂಬರ್ 24 ರಂದು ಪ್ರಾರಂಭವಾಗುವ ಪ್ರಯಾಣ, ಮಾರ್ಗದಲ್ಲಿ 120 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
ರೈಲು ಸಂಖ್ಯೆ 12725 ಕೆಎಸ್ಆರ್ ಬೆಂಗಳೂರು-ಧಾರವಾಡ ಸಿದ್ದಗಂಗಾ ಡೈಲಿ ಎಕ್ಸ್‌ಪ್ರೆಸ್, ನವೆಂಬರ್ 24 ರಂದು ಪ್ರಾರಂಭವಾಗುವ ಪ್ರಯಾಣ, ಕೆಎಸ್‌ಆರ್ ಬೆಂಗಳೂರಿನಿಂದ 30 ನಿಮಿಷಗಳ ಕಾಲ ಮರುಹೊಂದಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
SUMMARY | Several trains of the South Western Railway division cancelled.
KEY WORDS | Several trains, South Western Railway division , Yeshwantpur-Shivamogga Town Intercity Daily Express,