SHIVAMOGGA | MALENADUTODAY NEWS | ಮಲೆನಾಡು ಟುಡೆ Jan 14, 2025
ಶಿವಮೊಗ್ಗದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಚುನಾವಣೆ ಸಾಕಷ್ಟು ಚರ್ಚೆ ಹಾಗೂ ಕುತೂಹಲವನ್ನು ಮೂಡಿಸುತ್ತಿದೆ. ಪ್ರತಿಷ್ಟೆಯ ಕ್ಷೇತ್ರಗಳಂತೆ ನಡೆಯುತ್ತಿರುವ ಚನಾವಣೆಗಳಲ್ಲಿ ಪದವೀಧರರ ಸಹಕಾರ ಸಂಘ ನಿಯಮಿತದ ಚುನಾವಣೆಯು ಸಹ ಹೆಚ್ಚು ಕುತೂಹಲ ಮೂಡಿಸ್ತಿದೆ. ಈ ಚುನಾವಣೆಯಲ್ಲಿ ಈಗಾಗಲೇ ಹಲವರು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದು ವಿವಿಧ ತಂಡವಾಗಿ ಮತದಾರರ ಮನವೊಲಿಕೆಗೆ ಮುಂದಾಗಿದ್ದಾರೆ.
ಇದರ ನಡುವೆ ಪದವಿ ಕಾಲೇಜುಗಳಲ್ಲಿ ವಸ್ತ್ರ ಸಂಹಿತೆ ವಿಚಾರವಾಗಿ ಹೋರಾಟ ಮಾಡಿದ್ದ ಹಾಗೂ ವಿದ್ಯಾರ್ಥಿ ಸಂಘಟನೆಯಲ್ಲಿ ವಿವಿಧ ಹೋರಾಟಗಳಲ್ಲಿ ಪಾಲ್ಗೊಂಡಿದ್ದ ಅಭಿಷೇಕ್ ಎನ್ ಸ್ಪರ್ಧೆ ಚರ್ಚೆಗೂ ಗ್ರಾಸವಾಗಿದೆ. ಯುವ ಸಮುದಾಯವನ್ನು ಪ್ರತಿನಿದಿಸ್ತಿರುವ ಅಭಿಷೇಕ್ ಪದವೀಧರರ ಸಹಕಾರ ಸಂಘ ನಿರ್ದೇಶಕರ ಚುನಾವಣೆಯಲ್ಲಿ ಪರಿಶಿಷ್ಠ ಪಂಗಡ (ಎಸ್.ಟಿ.) ಮೀಸಲಾತಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಇವರ ಪರವಾಗಿ ಸಾಕಷ್ಟು ಪ್ರಚಾರವೂ ಸಿಗುತ್ತಿದ್ದು, ಗೆಲುವಿನ ವಿಶ್ವಾಸದಲ್ಲಿದ್ದಾರೆ.


SUMMARY | Abhishek N has contested the elections for the post of Director of Graduate Cooperative Society as a Scheduled Tribe (ST) reservation candidate.
KEY WORDS | Abhishek N , elections for Director, Graduate Cooperative Society ̧ Scheduled Tribe (ST) reservation candidate