ಕಾಡಿನಲ್ಲಿ ಸಿಕ್ಕ ಕಾರಿನಲ್ಲಿ ಸಿಕ್ತು ಅರ್ಧ ಕ್ವಿಂಟಾಲ್‌ ಚಿನ್ನ | 11 ಕೋಟಿ ರೂಪಾಯಿ ಕ್ಯಾಶ್‌ | ನೋಡಿದವರಿಗೆ ಶಾಕ್

13

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 21, 2024 ‌‌  

ಕಾಡಿನಲ್ಲಿದ್ದ ಕಾರೊಂದರಲ್ಲಿ ಬರೋಬ್ಬರಿ ಅರ್ಧ ಕ್ವಿಂಟಾಲ್‌ ಚಿನ್ನ ಹಾಗೂ ಬರೋಬ್ಬರಿ 11 ಕೋಟಿ ರೂಪಾಯಿ ಸಿಕ್ಕ ಘಟನೆಯೊಂದು ಇದೀಗ ಇಡೀ ದೇಶದ ಗಮನ ಸೆಳೆಯುತ್ತಿದೆ.  

Malenadu Today

ಮಧ್ಯ ಪ್ರದೇಶದ ಮಂಡೋರಾ ಜಿಲ್ಲೆಯ ಮಿಂದೋರಿ ಕಾಡಿನ ನಿರ್ಜನ ಪ್ರದೇಶದಲ್ಲಿ ನಿಂತಿದ್ದ ಇನ್ನೋವಾ ಕಾರಲ್ಲಿ  ಬರೋಬ್ಬರಿ 40 ಕೋಟಿ ರೂಪಾಯಿ ಮೌಲ್ಯದ 52 ಕೇಜಿ ಚಿನ್ನ ಮತ್ತು 11 ಕೋಟಿ ರೂಪಾಯಿ ಪತ್ತೆಯಾಗಿದೆ. 



Malenadu Today

ಸದ್ಯ ಇದನ್ನ ಆದಾಯತೆರಿಗೆ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಾರಸುದಾರರಿಲ್ಲದ ಕಾರಿನಲ್ಲಿ ಏಳೆಂಟು ಬ್ಯಾಗ್‌ಗಳಿದ್ದವು. ಅದರಲ್ಲಿ ಚಿನ್ನ ಹಾಗೂ ಹಣ ಸಿಕ್ಕಿದೆ. ಆದರೆ ಇದರ ವಾರಸ್ಸುದಾರರು ಯಾರು ಎಂಬುದು ಗೊತ್ತಾಗಿಲ್ಲ. 

Malenadu Today

ಮೂಲಗಳ ಪ್ರಕಾರ ಇದು ರಿಯಲ್ ಎಸ್ಟೇಟ್ ಉದ್ಯಮಿ ಸೌರಭ್ ಶರ್ಮಾ ಎಂಬವರಿಗೆ ಸೇರಿದ್ದು, ಎನ್ನಲಾಗುತ್ತಿದೆಯಾದರೂ ಅಧಿಕಾರಿಗಳು ಈ ಬಗ್ಗೆ ಮಾಹಿತಿ ಬಿಟ್ಟುಕೊಡುತ್ತಿಲ್ಲ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. 

Malenadu Today 

ಇನ್ನೂ ಹಣ ಪತ್ತೆಯಾಗಿರುವ ಇನ್ನೋವಾ ಕಾರು ಚಂದನ್ ಸಿಂಗ್ ಎನ್ನುವ ಬಿಲ್ಡ‌ರ್ ಹೆಸರಿನಲ್ಲಿ ನೋಂದಣಿಯಾಗಿದೆ ಎಂದು ತಿಳಿದು ಬಂದಿದೆ. ಗುರುವಾರವಷ್ಟೇ ಸೌರಭ್ ಶರ್ಮಾ ಹಾಗೂ ಸಹಚರ ಚಂದನ್ ಸಿಂಗ್ ಗೌರ್ ಮೇಲೆ ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಲೋಕಾಯುಕ್ತ ದಾಳಿ ನಡದಿತ್ತು.



ಈ ವೇಳೆ ಶರ್ಮಾ ಮನೆಯಲ್ಲಿ ಈ ವೇಳೆ 2.5 ಕೋಟಿ ರೂಪಾಯಿ ನಗದು, ಚಿನ್ನ, ಬೆಳ್ಳಿ ಆಭ ರಣಗಳು ಮತ್ತು ಆಸ್ತಿ ದಾಖಲೆಗಳು ಪತ್ತೆಯಾಗಿದ್ದವು. ಇದರ ಬೆನ್ನಲ್ಲೆ ಕಾರು ಸಿಕ್ಕಿದ್ದು, ಇಷ್ಟೊಂದು ಚಿನ್ನ ಎಲ್ಲಿಂದ ಬಂದವು ಎಂಬುದೇ ಇದೀಗ ಕುತೂಹಲಕ್ಕೆ ಕಾರಣವಾಗಿದೆ.

Malenadu Today

SUMMARY | Gold worth Rs 40 crore and cash worth Rs 11 crore were found in a car in the forest. Incident in Bhopal, Madhya Pradesh

KEY WORDS | Gold worth Rs 40 crore 11 crore cash  were found in a car ,forest,  Incident , Bhopal, Madhya Pradesh

Share This Article