SHIVAMOGGA | MALENADUTODAY NEWS | ಮಲೆನಾಡು ಟುಡೆ | Nov 23, 2024
ಶಿವಮೊಗ್ಗ| ಕಲಿತ ಕಾಲೇಜಿನ ಅಭಿವೃದ್ದಿಗೆ ಹಿರಿಯ ವಿದ್ಯಾರ್ಥಿಗಳು ನೆರವು ನೀಡಬೇಕು ಎಂದು ಕುವೆಂಪು ವಿವಿ ಕುಲಪತಿ ಪ್ರೊ.ಶರತ್ ಅನಂತಮೂರ್ತಿ ಅಭಿಪ್ರಾಯಪಟ್ಟರು.
ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಮಾಗಮದಲ್ಲಿ ನಮ್ಮಸಹ್ಯಾದ್ರಿ ನಮ್ಮ ಹೆಮ್ಮೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲವನ್ನೂ ಸರ್ಕಾರವೇ ಮಾಡುತ್ತೆ ಎಂದು ಕಾಯಬಾರದು.ಐಐಟಿಗಳಲ್ಲಿ ಅಲ್ಲಿನ ಹಿರಿಯ ವಿದ್ಯಾರ್ಥಿಗಳ ಕೊಡುಗೆ ಅಪಾರವಾಗಿರುತ್ತೆ. ಸಹ್ಯಾದ್ರಿ ವಿಜ್ಞಾನ ಕಾಲೇಜು ಹೆಸರಾಂತ ಕಾಲೇಜು. ಇದಕ್ಕೆ ಇಲ್ಲಿನ ಹಿರಿಯ ವಿದ್ಯಾರ್ಥಿಗಳೇ ರಾಯಭಾರಿಗಳು. ಕಾಲೇಜಿಗೆ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕು. ಈ ನೆಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘ ಕೆಲಸ ಮಾಡಲಿ ಎಂದರು.
ಕಾಲೇಜಿನ ಅವಶ್ಯಕತೆಗಳು ತುಂಬಾ ಇವೆ. ಎಲ್ಲರೂ ಸೇರಿ ಈ ಬಗ್ಗೆ ಗಮನ ಹರಿಸಬೇಕು| ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ
ಹಿರಿಯ ವಿದ್ಯಾರ್ಥಿಗಳ ಸಂಘದ ಗೌರವ ಅಧ್ಯಕ್ಷರಾದ ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಮಾತನಾಡಿ ,ಕಾಲೇಜಿನ ಅವಶ್ಯಕತೆಗಳು ತುಂಬಾ ಇವೆ. ಎಲ್ಲರೂ ಸೇರಿ ಈ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು. ಕಾಲೇಜಿನ ಹಿರಿಯ ವಿದ್ಯಾರ್ಥಿಯೂ ಆಗಿರುವ ಕುವೆಂಪು ವಿವಿ ಕುಲಸಚಿವ ಡಾ. ಎಸ್ ಎಂ ಗೋಪಿನಾಥ್ ಮಾತನಾಡಿ, ಇಲ್ಲಿನ ಅಧ್ಯಾಪಕ ವೃಂದ ಯಾವತ್ತೂ ಉನ್ನತ ದರ್ಜೆಯಲ್ಲಿತ್ತು. ಈ ಕಾಲೇಜು ಜೀವನ ಕೊಟ್ಟಿದೆ.ಇದರ ಅಭಿವೃದ್ದಿಗೆ ಎಲ್ಲರೂ ಕೂಡಿ ಕೆಲಸ ಮಾಡಬೇಕು ಎಂದರು.
ಹಿರಿಯ ವಿದ್ಯಾರ್ಥಿಗಳ ಸಂಘವನ್ನು ಇನ್ನಷ್ಟು ಬೆಳೆಸಬೇಕು. ಈ ಕಾಲೇಜಿನ ಏಳಿಗೆಗೆ ಎಲ್ಲರೂ ಕೈ ಜೋಡಿಸಬೇಕು |ಪ್ರೊ.ಎನ್.ರಾಜೇಶ್ವರಿ
ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಎನ್.ರಾಜೇಶ್ವರಿ ಪ್ರಾಸ್ತಾವಿಕವಾಗಿ ಮಾತನಾಡಿ, 1941 ರಲ್ಲಿ ಆರಂಭವಾದ ಕಾಲೇಜು ಈ ರಾಜ್ಯ,ದೇಶ ಹಾಗೂ ವಿದೇಶಗಳಲ್ಲಿ ಹಿರಿಯ ವಿದ್ಯಾರ್ಥಿಗಳನ್ನು ಹೊಂದಿದೆ. ಹಿರಿಯ ವಿದ್ಯಾರ್ಥಿಗಳ ಸಂಘವನ್ನು ಇನ್ನಷ್ಟು ಬೆಳೆಸಬೇಕು. ಈ ಕಾಲೇಜಿನ ಏಳಿಗೆಗೆ ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು. ಮಾಜಿ ಶಾಸಕರು ಹಾಗು ಹಿರಿಯ ವಿದ್ಯಾರ್ಥಿಗಳ ಸಂಘದ ಉಪಾಧ್ಯಕ್ಷ ಕೆ.ಬಿ.ಅಶೋಕ್ ನಾಯ್ಕ್ ಮಾತನಾಡಿ, ಹಿರಿಯ ವಿದ್ಯಾರ್ಥಿಗಳ ಸಂಘ ಏನು ಮಾಡಬೇಕೆಂಬ ಬಗ್ಗೆ ಸಂವಾದ ನಡೆಸಿಕೊಟ್ಟರು. ಸಹಕಾರ್ಯದರ್ಶಿ ಉಮೇಶ್ ಶಾಸ್ತ್ರಿ ಸ್ವಾಗತಿಸಿದರು. ಕಾರ್ಯದರ್ಶಿ ಡಾ.ನಾಗರಾಜ್ ಪರಿಸರ ವಂದಿಸಿದರು. ಹಿರಿಯ ವಿದ್ಯಾರ್ಥಿಗಳಾದ ಹರ್ಷ ಮತ್ತು ಕುಸುಮಾ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇಡೀ ದಿನ ಹಿರಿಯ ವಿದ್ಯಾರ್ಥಿಗಳು ಕಾಲೇಜು ಮತ್ತು ಗುರುಗಳ ನೆನಪು ಮೆಲುಕು ಹಾಕಿದರು. ಹಿರಿಯ ವಿದ್ಯಾರ್ಥಿಗಳ ಸಂಘ,ಕಾಲೇಜು ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ಕಾರ್ಯಕ್ರಮ ಅಯೋಜಿಸಲಾಗಿತ್ತು.
ನಂತರ ಕಾಲೇಜಿನಲ್ಲಿ ಒದಿದ ಕೆಲವು ಹಳೆಯ ವಿದ್ಯಾರ್ಥಿಗಳು. ಈ ಕಾಲೇಜು ನಮ್ಮ ಬೆಳವಣಿಗೆಯಲ್ಲಿ ಯಾವರೀತಿ ಪಾತ್ರ ವಹಿಸಿತು ಎಂಬುದರ ಬಗ್ಗೆ ತಿಳಿಸಿದರು.
ಕಾಲೇಜು ನನಗೆ ಇಂದು ಉತ್ತಮ ಜೀವನ ಹೆಸರು ನೀಡಿದೆ. ಇಲ್ಲಿ ಹಾಕಿದ ಬುನಾದಿ ಮುಂದೆ ದೊಡ್ಡ ವ್ಯಕ್ತಿಯಾಗಿ ಬೆಳೆಯಲು ಸಹಕಾರವಾಯಿತು.
ಡಾ.ಪ್ರಸನ್ನ ಸಂತೆಕಡೂರು, ವಿಜ್ಞಾನಿ, ಲೇಖಕರು
ಅಲ್ಯುಮಿನಿ ಸಂಘಟನೆ ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಹುದು. ನಮ್ಮ ಕಾಲೇಜಿನ ಅಭಿವೃದ್ಧಿಗೆ ಎಲ್ಲರೂ ಶ್ರಮಿಸೋಣ
ಸಂಕೇತ್, ಹೆಚ್ಆರ್ ಹೆಡ್,
ಸಾಮಾನ್ಯ ವಿದ್ಯಾರ್ಥಿಯಾಗಿದ್ದ ನಾನು ನನ್ನ ಬದುಕಲ್ಲಿ ಅಸಾಮಾನ್ಯವಾದುದನ್ನು ಸಾಧಿಸಲು ಕಾಲೇಜಿನ ಅಧ್ಯಾಪಕರು ಕಾರಣ. ಕಲಿತ ಕಾಲೇಜಿಗೆ ನಾವು ಏನಾದರು ಮಾಡಲೇಬೇಕು
ಡಾ.ಶ್ರೀಧರ್, ಐಎಂಎ ಶಿವಮೊಗ್ಗ ಅಧ್ಯಕ್ಷರು
ಹಿರಿಯ ವಿದ್ಯಾರ್ಥಿಗಳ ಸಂಘ ಬಲವಾಗಬೇಕು. ಕಾಲೇಜಿನ ಅಭಿವೃದ್ಧಿ ಸಹಪಾಠಿಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಲು ಇದೊಂದು ಅವಕಾಶ.ಈ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಈ ಬಗ್ಗೆ ಶ್ರಮಿಸಬೇಕೆಂದು ಮನವಿ ಮಾಡುವೆ
ಪ್ರೊ.ಎ.ಎಸ್.ಚಂದ್ರಶೇಖರ್, ವಿಶ್ರಾಂತ ಪ್ರಾಚಾರ್ಯರು, ಸಹ್ಯಾದ್ರಿ ವಿಜ್ಞಾನ ಕಾಲೇಜು.
SUMMARY| Kuvempu University Vice-Chancellor Prof. Sharath Ananthamurthy opined that senior students should help in the development of the college.
KEYWORDS| Kuvempu University, vice-Chancellor Prof. Sharath Ananthamurthy, Sahyadri Science College, shivamogga,