SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 13, 2025
ಕರಿದ ಎಣ್ಣೆಯನ್ನು ಬಳಸಿಕೊಂಡು ಜೆಎನ್‌ಎನ್‌ಸಿಇ ಕಾಲೇಜಿನ ಡಾ. ಚೇತನ್.ಎಸ್.ಜಿ ಎನ್ನುವವರು ಕರ್ನಾಟಕ ರಾಜ್ಯ ಅಭಿವೃದ್ಧಿ ಜೈವಿಕ ಇಂಧನ ಕೇಂದ್ರದಲ್ಲಿ ಬಯೋಡೀಸೆಲ್ ತಯಾರಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಅಡಿಗೆ ಎಣ್ಣೆಯ ಬೆಲೆ ದಿನದಿಂದ ದಿನಕ್ಕೆ ತುಟ್ಟಿಯಾಗುತ್ತಿದೆ. ಅಷ್ಟೇ ಅಲ್ಲದೆ ಸಂಶೋಧನೆಗಳ ಪ್ರಕಾರ ಬಳಸಿದ ಎಣ್ಣೆಯನ್ನು ಮರು ಬಳಸುವುದರಿಂದ ಕ್ಯಾಸ್ಸರ್ ಕಾರಕ ಆಂಶಗಳು ದೇಹಕ್ಕೆ ಸೇರಿ ಆರೋಗ್ಯ ಸಮಸ್ಯೆ ಕಾಡಬಹುದು. ಈ ಹಿನ್ನಲೆ ಡಾ. ಚೇತನ್.ಎಸ್.ಜಿ ರವರು ಶಿವಮೊಗ್ಗದ ನಗರದ ಪ್ರಮುಖ ಹೋಟೆಲ್‌ಗಳಲ್ಲಿ 35 ರಿಂದ 40 ರೂಪಾಯಿಯಂತೆ ಖರೀದಿಸಿ, ಬಯೋಡಿಸೆಲ್ ಅನ್ನು ತಯಾರಿಸಿದ್ದಾರೆ. ಇದರಿಂದಾಗಿ ಇತ್ತೀಚಿನ ದಿನಗಳಲ್ಲಿ ಬರಿದಾಗುತ್ತಿರುವ ಇಂದನಕ್ಕೆ ಪರ್ಯಾಯವಾಗಿ ಈ ಡೀಸೆಲ್‌ನ್ನು ಬಳಸಬಹುದು.
ಸುದ್ದಿ : 02 ಸರ್ಕಾರಕ್ಕೆ ಹಾಲಿನ ದರ ಏರಿಕೆ ಮಾಡದಿರಲು ಹೋಟೆಲ್ ಮಾಲೀಕರ ಮನವಿ
ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ ನಂದಿನಿ ಹಾಲಿನ ಬೆಲೆ ಅಂದಾಜು 5 ರೂಪಾಯಿ ದರ ಏರಿಕೆ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದೆ.
ಈ ಸಂಬಂಧ ರಾಜ್ಯ ಸರಕಾರ ಹಾಗು ಕರ್ನಾಟಕ ಹಾಲು ಮಹಾಮಂಡಳಿಗೆ ಪತ್ರ ಬರೆದಿರುವ ಸಂಘದ ಅಧ್ಯಕ್ಷ ಜಿ.ಕೆ ಶೆಟ್ಟಿ, ಒಂದೊಮ್ಮೆ ದರ ಹೆಚ್ಚಳ ಮಾಡಿದರೆ ಹೋಟೆಲ್ ಉದ್ಯಮದ ಮೇಲೆ ಅದು ದೊಡ್ಡ ಮಟ್ಟದ ನಕಾರಾತ್ಮಕ ಪರಿಣಾಮ ಬೀರಲಿದೆ ಎಂಬ ಕಳವಳ ವ್ಯಕ್ತಪಡಿಸಿದ್ದಾರೆ.
ಸುದ್ದಿ: 03 ಮಾರ್ಚ್ 14 ರಂದು ದುರ್ಗಮ್ಮ, ಮರಿಯಮ್ಮ ದೇವಿ ರಥೋತ್ಸವ
ನಗರದ ದುರ್ಗಿಗುಡಿ ಶ್ರೀ ದುರ್ಗಾ ಪರಮೇಶ್ವರಿ ದೇವಾಸ್ಥಾನ ಸಮಿತಿ ವತಿಯಿಂದ ಮಾರ್ಚ್ 14 ರ ಮಧ್ಯಾಹ್ನ 12:15 ಕ್ಕೆ ಶ್ರೀ ದುರ್ಗಮ್ಮ ಮತ್ತು ಶ್ರೀ ಮರಿಯಮ್ಮ ದೇವಿ ರಥೋತ್ಸವ ನಡೆಯಲಿದೆ ಎಂದು ದೇವಾಲಯ ಆಡಳಿತ ಮಂಡಳಿ ಸದಸ್ಯರು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
ಸುದ್ದಿ : 04 ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಕಚೇರಿ ಉದ್ಘಾಟನೆ
ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಜಿಲ್ಲಾ ಶಾಖೆಯನ್ನ ನಗರದ ಇಂದಿರಾ ಗಾಂಧಿ ಬಡಾವಣೆಯಲ್ಲಿ ವೇದಿಕೆ ರಾಜ್ಯ ಕಾರ್ಯಾಧ್ಯಕ್ಷ ಓಂಕಾರಪ್ಪ ಉದ್ಘಾಟಿಸಿದರು. ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ವೇದಿಕೆ ಜಿಲ್ಲಾಧ್ಯಕ್ಷೆ ಮೀನಾ ಎಂ.ಎಸ್ ಮಾತನಾಡಿ ವೇದಿಕೆ ಕಾರ್ಯಕರ್ತರು ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡಬೇಕು, ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ನಾಗರಿಕರಿಗೆ ಅರಿವುಂಟು ಮಾಡುವುದು, ಸ್ವಚ್ಛತೆ ಕಾಪಾಡುವಂತೆ ಜಾಗೃತಿ ಮೂಡಿಸುವುದು. ಧೂಮ ಪಾನ, ಮಧ್ಯಪಾನಗಳಿಂದ ಆಗುವ ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು. ಇದೇ ವೇಳೆ ನೂತನ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು.
ಸುದ್ದಿ : 05 ಜೆ.ಎನ್.ಎನ್.ಸಿ.ಇ ಕಾಲೇಜಿನ ಆವರಣದಲ್ಲಿ 26 ನೇ ರಾಜ್ಯ ಮಟ್ಟದ ಅಂತರ ಮಹಾವಿದ್ಯಾಲಯ ಅಥ್ಲೆಟಿಕ್ ಕ್ರೀಡಾ ಕೂಟ
ವಿಶ್ವೇಶ್ವರಾಯ ತಾಂತ್ರಿಕ ವಿಶ್ವವಿದ್ಯಾಲಯವು ಜವಾಹರಲಾಲ್ ನೆಹರು ನ್ಯೂ ತಾಂತ್ರಿಕ ಮಹಾವಿದ್ಯಾಲಯ, ಶಿವಮೊಗ್ಗ ಇದರ ಸಹಯೋಗದೊಂದಿಗೆ ದಿನಾಂಕ 15 ಮಾರ್ಚ್ 2025 ರಿಂದ 18 ಮಾರ್ಚ್ 2025 ರ ವರೆಗೆ ಜೆ.ಎನ್.ಎನ್.ಸಿ.ಇ ಕಾಲೇಜಿನ ಆವರಣದಲ್ಲಿ 26 ನೇ ರಾಜ್ಯ ಮಟ್ಟದ ಅಂತರ ಮಹಾವಿದ್ಯಾಲಯ ಅಥ್ಲೆಟಿಕ್ ಕ್ರೀಡಾ ಕೂಟ ” ಸದೃಡ” 2.0 ವನ್ನು ಆಯೋಜಿಸಿದೆ.
ಮಾರ್ಚ್ 15 ರ ಶನಿವಾರ ಬೆಳಗ್ಗೆ 9 ಗಂಟೆಗೆ ಈ ಕ್ರೀಡಾ ಕೂಟದ ಉದ್ಘಾಟನಾ ಕಾರ್ಯಕ್ರಮವನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ, ಉಪಕುಲಪತಿ ಪ್ರೊ. ವಿದ್ಯಾಶಂಕರ್. ಎಸ್ ನೆರೆವೇರಿಸಲಿದ್ದಾರೆ. ಏಷಿಯನ್ ಗೇಮ್ಸ್ನ ಪದಕ ವಿಜೇತರು, ಅಂತರರಾಷ್ಟ್ರೀಯ ತರಬೇತುದಾರರು, ಅರ್ಜುನ ಪ್ರಶಸ್ತಿ ಪುರಸ್ಕೃತ ಎಸ್.ಡಿ. ಈಶನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
SUMMARY | Dr. Chetan SG has manufactured biodiesel at the Karnataka State Development Biofuel Centre.
KEYWORDS | Fried Oil, biodiesel, shivamogga, chatpat news,