ಬಳಸದೇ ಬಿಟ್ಟ ಎಸಿಯಲ್ಲಿ 8 ಮರಿಗಳಿಗೆ ಜನ್ಮ ನೀಡಿದ ಹಾವು | ವಿಡಿಯೋ ವೈರಲ್‌ 

ಹಂಚಿಕೊಳ್ಳಿ
WhatsApp Facebook X Telegram
ಬಳಸದೇ ಬಿಟ್ಟ ಎಸಿಯಲ್ಲಿ 8 ಮರಿಗಳಿಗೆ ಜನ್ಮ ನೀಡಿದ ಹಾವು | ವಿಡಿಯೋ ವೈರಲ್‌ 

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 13, 2025

ಇತ್ತೀಚಿನ ದಿನಗಳಲ್ಲಿ ತಾಪಮಾನ ವಿಪರೀತ ಹೆಚ್ಚಾದ ಹಿನ್ನಲೆ ಸಾಮಾನ್ಯವಾಗಿ ಎಸಿಯನ್ನು ಎಲ್ಲರೂ ಬಳಸುತ್ತಾರೆ. ಆದರೆ  ಅದರ ಅಗತ್ಯತೆ ನಮಗೆ ಚಳಿಗಾಲದಲ್ಲಿ ಹೆಚ್ಚಾಗಿ  ಇರುವುದಿಲ್ಲ.  ಆದ್ದರಿಂದ ಸರಿಸುಮಾರು 3 ರಿಂದ 4 ತಿಂಗಳು ಅಂದರೆ ಚಳಿಗಾಲ ಮುಗಿಯುವವರೆಗೂ ನಾವ್ಯಾರು ಅದನ್ನು ನೋಡುವ ಗೌಜಿಗೆ ನಾವು ಹೋಗುವುದಿಲ್ಲ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಸುಮಾರು ತಿಂಗಳುಗಳ ಕಾಲ ಎಸಿಯನ್ನು ಆನ್‌ ಮಾಡದೆ ಒಮ್ಮೆ ಎಸಿಯನ್ನು ಆನ್‌ ಮಾಡಿದಾಗ ಆತನಿಗೆ ದೊಡ್ಡದೊಂದು ಶಾಕ್‌ ಎದುರಾಗಿದೆ. ಅದೇನೆಂದರೆ ಬಳಸದೇ ಹಾಗೆ ಬಿಟ್ಟ ಎಸಿಯ ಒಳಗೆ ಹಾವೊಂದು 7 ರಿಂದ 8 ಮರಿಗಳಿಗೆ ಜನ್ಮ ನೀಡಿದೆ. ಆ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಎಸಿಯೊಳಗೆ ಹಾವನ್ನು ನೋಡಿ ಬೆಚ್ಚಿಬಿದ್ದ ಮಾಲೀಕ ತಕ್ಷಣ ಹಾವು ಹಿಡಿಯುವವರಿಗೆ  ಮಾಹಿತಿ ನೀಡಿದ್ದಾರೆ. ನಂತರ ಹಾವು ಹಿಡಿಯುವವರು ಬಂದು ಎಚ್ಚರಿಕೆಯಿಂದ ಹಾವು ಹಾಗು ಅದರ ಮರಿಗಳನ್ನು ಹೊರ ತೆಗೆದಿದ್ದಾರೆ. 



 

SUMMARY | A snake gave birth to 7 to 8 cubs inside the ac which was left unused. The video has now gone viral on social media.

KEYWORDS |  social media, snake, viral video,

ಹಂಚಿಕೊಳ್ಳಿ
WhatsApp Facebook X Telegram
131
ಲೇಖಕರ ಬಗ್ಗೆ

131

Malenadu Today Contributor