SHIVAMOGGA | MALENADUTODAY NEWS | ಮಲೆನಾಡು ಟುಡೆ Nov 27, 2024
ಷೇರು ಮಾರುಕಟ್ಟೆಯ ಏರಳಿತಗಳ ನಡುವೆ ಚಿನ್ನದ ದರ ಕಡಿಮೆಯಾಗುತ್ತಿದೆ. ಇದು ಗ್ರಾಹಕರಲ್ಲಿ ಸಂತೋಷ ಮೂಡಿಸುತ್ತಿದೆ. ಎರಡು ದಿನಗಳಿಂದ ಅಗ್ಗವಾಗುತ್ತಿರುವ ಚಿನ್ನದ ದರ ನಿನ್ನೆ ಸಹ 1250 ರೂಪಾಯಿ ಕಡಿಮೆಯಾಗಿದೆ.
ಚಿನಿವಾರ ಪೇಟೆಯಲ್ಲಿ ಸತತ ಎರಡನೇ ದಿನವಾದ ಮಂಗಳವಾರ ಕೂಡ ಚಿನ್ನ ಮತ್ತು ಬೆಳ್ಳಿ ಧಾರಣೆಯಲ್ಲಿ ಇಳಿಕೆ ಕಂಡಿದೆ. ರಾಷ್ಟ್ರೀಯ ಮಾಧ್ಯಮಗಳ ಪ್ರಕಾರ, ನಿನ್ನೆಗೆ ಅಂತ್ಯಗೊಂಡಂತೆ ಮಾರುಕಟ್ಟೆಯ ದರ ಹೀಗಿದೆ. 10 ಗ್ರಾಂ ಚಿನ್ನದ ದರದಲ್ಲಿ ₹1,250 ರಷ್ಟು ಇಳಿಕೆಯಾಗಿದ್ದು, ಸದ್ಯ 10 ಗ್ರಾಂ ಚಿನ್ನಕ್ಕೆ ₹78,150 ನಷ್ಟಿದೆ. ಸ್ಟ್ಯಾಂಡರ್ಡ್ ಚಿನ್ನದ (ಶೇ 99.5 ಶುದ್ಧತೆ) ಬೆಲೆ ₹77,750 ನಷ್ಟಿದೆ. ಇನ್ನೂ ಬೆಳ್ಳಿ ಬೆಲೆಯು ಕೆ.ಜಿಗೆ ₹1,100 ಇಳಿಕೆಯಾಗಿದ್ದು, ₹90,600 ಆಗಿದೆ.
SUMMARY | Gold and silver prices fall in india
KEY WORDS | Gold and silver prices fall in india