SHIVAMOGGA | MALENADUTODAY NEWS | ಮಲೆನಾಡು ಟುಡೆ Nov 30, 2024
ಶಿವಮೊಗ್ಗ ನಗರದ ಹಳೆಬೊಮ್ಮನ ಕಟ್ಟೆಯ ಮಾರಮ್ಮಗುಡಿ ಸಮೀಪದ ಗ್ಯಾರೇಜ್ ಒಂದರ ಬಳಿಯಲ್ಲಿ ಕಪಡ ರಾಜೇಶ್ ಶೆಟ್ಟಿ ಎಂಬಾತನನ್ನ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಲಾಗಿದೆ.
ಇವತ್ತು ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ನಡೆದ ಕೊಲೆ ಘಟನೆಗೆ ಇತ್ತೀಚೆಗೆ ನಡೆದ ಹಲ್ಲೆಯ ಪ್ರತೀಕಾರ ಎನ್ನಲಾಗುತ್ತಿದೆ. ಬೊಮ್ಮನ ಕಟ್ಟೆಯ ಕರಿಯಾ ಮತ್ತವನ ಗ್ಯಾಂಗ್ ಮೇಲೆ ರಾಜೇಶ್ ಶೆಟ್ಟಿ ಮುಗಿಬಿದ್ದಿದ್ದ. ಕೆಲವು ದಿನಗಳ ಹಿಂದೆ ಕರಿಯನ ಮೇಲೆ ಹಲ್ಲೆ ಮಾಡಿದ್ದ ರಾಜೇಶ್ ಶೆಟ್ಟಿ ಇವತ್ತು ವಿರೋಧಿ ಗ್ಯಾಂಗ್‌ನಿಂದಲೇ ಕೊಲೆಯಾಗಿದ್ದಾನೆ. ಇದು ಪ್ರತೀಕಾರಕ್ಕಾಗಿ ನಡೆದ ಕೊಲೆ ಎಂಬುದು ಈಗಾಗಲೇ ಸ್ಪಷ್ಟವಾಗಿದ್ದು ಕೊಲೆಯಲ್ಲಿ ಭಾಗಿಯಾದವರ ಹೆಸರುಗಳು ಸ್ಥಳೀಯವಾಗಿ ಹರಿದಾಡುತ್ತಿದೆ.
ರಾಜೇಶ್ ಶೆಟ್ಟಿ ಈ ಹಿಂದೆ ಬಸವನಗುಡಿಯಲ್ಲಿ ನಡೆದಿದ್ದ ರಾಘುಶೆಟ್ಟಿಯ ಕೊಲೆಯ ಪ್ರಮುಖ ಆರೋಪಿ, ಸುಮಾರು 38 ವರ್ಷದ ರಾಜೇಶ್‌ಶೆಟ್ಟಿ ಇತ್ತಿಚೆಗೆ ಕಾರಣವೊಂದಕ್ಕೆ ಕರಿಯಾ ಮತ್ತವನ ಟೀಂ ಮೇಲೆ ಹಲ್ಲೆ ಮಾಡಿದ್ದ ಎನ್ನಲಾಗಿದೆ. ಅದೇ ದ್ವೇಷಕ್ಕೆ ಕರಿಯನ ಗ್ಯಾಂಗ್ ಈತನನ್ನ ಹಳೆಬೊಮ್ಮನ ಕಟ್ಟೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದೆ ಎಂದು ಪ್ರಾಥಮಿಕ ಮೂಲಗಳಿಂದ ತಿಳಿದು ಬಂದಿದೆ.
ಇನ್ನೂ ಈ ಬಗ್ಗೆ ವಾಟ್ಸಾಪ್ ಮೂಲಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಎಸ್‌ಪಿ ಮಿಥುನ್ ಕುಮಾರ್ ಬೊಮ್ಮನ ಕಟ್ಟೆಯಲ್ಲಿ ರಾಜೇಶ್ ಎಂಬಾತನ ಕೊಲೆಯಾಗಿದೆ. ಆರೋಪಿಗಳ ಬಗ್ಗೆ ಕೆಲವು ಮಾಹಿತಿಗಳು ಲಭ್ಯವಾಗಿದೆ. ಪ್ರಾಥಮಿಕ ಹಂತದಲ್ಲಿ ಇದೊಂದು ವೈಯಕ್ತಿಕ ಕಾರಣಕ್ಕೆ ನಡೆದ ಹತ್ಯೆ ಎಂದು ತಿಳಿದುಬಂದಿದ್ದು, ಈ ಸಂಬಂಧ ಮೂರು ತಂಡಗಳನ್ನ ತನಿಖೆ ಹಾಗೂ ಆರೋಪಿಗಳ ಪತ್ತೆಗಾಗಿ ರಚಿಸಲಾಗಿದೆ ಎಂದು ತಿಳಿಸಿದ್ದಾರೆ.
SUMMARY | Rajesh Shetty dead near Halebommana katte in Shivamogga
KEY WORDS |Rajesh Shetty dead near Halebommana katte in Shivamogga