ಒಡಿಶಾದ ರುಕ್ಸಾನ ದಂಪತಿ ಅರೆಸ್ಟ್‌ | ಭದ್ರಾ ನದಿಯಲ್ಲಿ ಯುವಕ ಮಿಸ್ಸಿಂಗ್‌ | 35 ವರ್ಷದ ನಂತರ ಊಟದ ಬಿಲ್‌ ಕೊಟ್ಟ ಮಂಗಳೂರು ಮೊಹಮದ್‌ | OUT OF STATION

13

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 18, 2025 ‌‌ 

 

ಸುದ್ದಿ 1 | ಮನೆ ದೋಚಿದ್ದ ಒಡಿಶಾ ರುಕ್ಸಾನಾ ಅರೆಸ್ಟ್!‌ 

 

ದಾವಣಗೆರೆ ಜಿಲ್ಲೆ ಹರಿಹರ ಪೊಲೀಸ್‌ ಠಾಣೆಯ ಪೊಲೀಸರು ಭರ್ಜರಿ ಬೇಟೆಯನ್ನೆ ಹಿಡಿದಿದ್ದಾರೆ. ಮನೆಯಲ್ಲಿ ನೆಮ್ಮದಿಯಿಲ್ಲ, ಗೃಹಚಾರ ಸರಿಯಿಲ್ಲ ಅಂತಾ ಏಕಾಂತದ ಪೂಜೆ ಮಾಡಿ, ಚಿನ್ನಾಭರಣ ದೋಚಿದ್ದ ಒಡಿಶಾ ಮೂಲದ ದಂಪತಿಯನ್ನ ಅರೆಸ್ಟ್‌ ಮಾಡಿದ್ದಾರೆ. ಒಡಿಶಾ ಮೂಲದ ಇಸ್ಮಾಯಿಲ್ ಜಬೀವುಲ್ಲಾ (30) ಮತ್ತು ರುಕ್ಸಾನ ಬೇಗಂ (30) ಬಂಧಿತರು. ಹಲವು ವರ್ಷಗಳಿಂದ ದಾವಣಗೆರೆಯಲ್ಲಿ ನೆಲಸಿದ್ದ ಇವರು,  ಹರಿಹರದ ಮಹಿಳೆಯೊಬ್ಬರಿಗೆ ಮನೆಯಲ್ಲಿ ಪೂಜೆ ಮಾಡಿ ಸಮಸ್ಯೆ ಬಗೆಹರಿಸಿಕೊಡುವುದಾಗಿ ನಂಬಿಸಿದ್ದರು. ಆ ಬಳಿಕ ಪೂಜೆ ವೇಳೆ ಸುಮಾರು ಎಂಟು ಲಕ್ಷ ಮೌಲ್ಯದ  ಚಿನ್ನ ಕದ್ದು ಪರಾರಿಯಾಗಿದ್ದರು.  

 

ಸುದ್ದಿ 2  | ಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಯುವಕ ನಾಪತ್ತೆ

ಇತ್ತ ಚಿಕ್ಕಮಗಳೂರು ಜಿಲ್ಲೆಯ ಎನ್‌ಆರ್‌ ಪುರ ತಾಲ್ಲೂಕು ಗಡಿಗೇಶ್ವರದಲ್ಲಿ ಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಯುವಕನೊಬ್ಬ ನಾಪತ್ತೆಯಾಗಿದ್ದಾನೆ. ಕಳೆದ ಭಾನುವಾರವೇ ಈತ ನಾಪತ್ತೆಯಾಗಿದ್ದು, ಇದುವರೆಗೂ ಪತ್ತೆಯಾಗಿಲ್ಲ. ಸ್ನೇಹಿತರ ಜೊತೆ ಈಜಲು ತೆರಳಿದ್ದ 25 ವರ್ಷದ ಜಲಾಲ್‌ ಎಂಬಾತ ನೀರಿನ ಸೆಳೆತಕ್ಕೆ ಮುಳುಗಿದ್ದ. ಆತನಿಗಾಗಿ ಅಗ್ನಿಶಸಮ ಸಿಬ್ಬಂದಿ ಹುಡುಕಾಟ ನಡೆಸ್ತಿದ್ದು, ಇದುವರೆಗೂ ಜಲಾಲ್‌ನ ಸುಳಿವು ಪತ್ತೆಯಾಗಿಲ್ಲ. ಬಾಳೆಹೊನ್ನೂರು ಸಮೀಪ ಭದ್ರಾ ನದಿಯಲ್ಲಿ ಒಟ್ಟು ಮೂವರು ಈಜಲು ತೆರಳಿದ್ದರು. ಇಬ್ಬರು ದಡ ಸೇರಿದರೆ, ಜಲಾಲ್‌ ನಾಪತ್ತೆಯಾಗಿದ್ದ.

 

ಸುದ್ದಿ 3 | 35 ವರ್ಷಗಳ ಬಳಿಕ ಕಡಬು ಮೀನ್‌ ಸಾರ್‌ ಬಿಲ್‌ ಬಾಕಿ ಕೊಟ್ಟರು

ಇಂತಹದ್ದೊಂದು ಅಪರೂಪದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ ನೆಡೆದಿದೆ. ಇಲ್ಲಿನ ಕೊಟ್ಟಿಗೆಹಾರದ ಬಳಿ ಇರುವ ಭಾರತ್‌ ಹೋಟೆಲ್‌ ಹೆಸರಿನ ಹೋಟೆಲ್‌ನಲ್ಲಿ 35 ವರ್ದ ಹಿಂದೆ ಮಂಗಳೂರು ದೇರಲಕಟ್ಟೆ ನಿವಾಸಿ ಮೊಹಮದ್‌ ಎಂಬವರು ಬಂದು, ಕಡಬು ಮೀನು ಸಾರು ಊಟ ಮಾಡಿದ್ದರಂತೆ. ಆದರೆ ಬಿಲ್‌ ಕೊಡದೇ ವಾಪಸ್‌ ಊರಿಗೆ ಹೋಗಿದ್ದರು. ಆನಂತರ, ದುಡ್ಡು ಕೊಡದೇ ತಿಂದಿರುವುದು ನೆನಪಾಗಿ ಸಂಕಟ ಪಟ್ಟುಕೊಂಡಿದ್ದರು. ಮತ್ತೆ ಕೊಟ್ಟಿಗೆಹಾರಕ್ಕೆ ಹೋದಾಗ ನೆನಪು ಮಾಡಿಕೊಂಡು ಕೊಟ್ಟು ಬರೋಣ ಎಂದುಕೊಂಡಿದ್ದರು. ಈ ನಡುವೆ 35 ವರ್ಷ ಅವರಿಗೆ ಕೊಟ್ಟಿಗೆಹಾರಕ್ಕೆ ಬರಲು ಆಗಿರಲಿಲ್ಲ. ಇದೀಗ ಕೊಟ್ಟಿಗೆಹಾರಕ್ಕೆ ಬಂದಿದ್ದ ಅವರು ನೆನಪು ಮಾಡಿಕೊಂಡು ಹೋಟೆಲ್‌ ಹುಡುಕಿ ಹೋಗಿ, ಅವರ ಹಳೆಬಿಲ್‌ ಪಾವತಿ ಮಾಡಿದ್ದಾರೆ.

 

SUMMARY | shivamogga ,davanagere ,  chikkamagaluru,  harihara, bhadra river , kadubu fish sambhar 

 

KEY WORDS | shivamogga ,davanagere ,  chikkamagaluru,  harihara, bhadra river , kadubu fish sambhar 

 

Share This Article