SHIVAMOGGA | MALENADUTODAY NEWS | ಮಲೆನಾಡು ಟುಡೆ Dec 9, 2024
ಎಲ್ಲಾ ಕಡೆಗಳಲ್ಲಿ ಬೇಲಿ, ಜಾಗ, ಆಸ್ತಿ, ಹಣಕ್ಕಾಗಿ ಹೊಡೆದಾಟ ನಡೆದರೇ ಹರಿಹರ ತಾಲ್ಲೂಕುನ ಗ್ರಾಮವೊಂದರಲ್ಲಿ ಕೋಣಕ್ಕಾಗಿ ಎರಡು ಗ್ರಾಮಗಳ ನಡುವೆ ಜೋರು ಗಲಾಟೆಯಾಗಿದೆ. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಇಲ್ಲಿನ ಹರಿಹರ ತಾಲ್ಲೂಕು ಕುಣಿಬೆಳಕೆರೆ ಗ್ರಾಮ ಹಾಗೂ ಹೊನ್ನಾಳಿ ತಾಲ್ಲೂಕು ಕುಳಗಟ್ಟೆ ಗ್ರಾಮದ ನಡುವೆ ಕೋಣವೊಂದಕ್ಕಾಗಿ ಪೈಟ್ ನಡೆದಿದೆ. ಕುಣಿಬೆಳಕೆರೆ ಗ್ರಾಮಸ್ಥರು ಕೋಣ ತಮ್ಮದು ಎಂದು ಮಲೆಬೆನ್ನೂರು ಪೋಲಿಸ್ ಠಾಣೆ ಮೆಟ್ಟಿಲೇರಿದ್ದಾರೆ. ಇದೇ ರೀತಿಯಲ್ಲಿ ಕುಳಗಟ್ಟೆ ಗ್ರಾಮಸ್ಥರು ಕೋಣ ತಮ್ಮದು ಎಂದು ಹೊನ್ನಾಳಿ ಪೋಲಿಸ್ ಠಾಣೆ ಮೆಟ್ಟಿಲೇರಿದ್ದಾರೆ.
ಪ್ರಕರಣ ಎರಡೂ ಠಾಣೆಗಳಲ್ಲಿಯು ದಾಖಲಾಗಿದೆ. ಆದರೆ ಕೋಣ ಮಾತ್ರ ಯಾವ ಊರಿನದ್ದು ಎಂದು ಗೊತ್ತಾಗುತ್ತಿಲ್ಲ. ಹೀಗಾಗಿ ಕೋಣವನ್ನು ಶಿವಮೊಗ್ಗದ ಗೋಶಾಲೆಗೆ ಶಿಫ್ಟ್ ಮಾಡಲಾಗಿದೆ.
ಇನ್ನೊಂದೆಡೆ ಕೋಣದ ವಯಸ್ಸು ತಿಳಿಯುವ ಪ್ರಯತ್ನ ನಡೆಯುತ್ತಿದೆ. ಏಕೆಂದರೆ, ಒಂದು ಗ್ರಾಮದವರು ತಮ್ಮ ಕೋಣಕ್ಕೆ 8 ವಯಸ್ಸು ಎಂದಿದ್ದಾರೆ. ಇನ್ನೊಂದು ಊರಿನವರು ತಮ್ಮ ಕೋಣಕ್ಕೆ 3 ವಯಸ್ಸು ಎಂದಿದ್ದಾರೆ. ಈ ನಿಟ್ಟಿನಲ್ಲಿ ಪೊಲೀಸರು ಕೋಣದ ವಯಸ್ಸು ತಿಳಿದರೇ ಪಂಚಾಯ್ತಿ ಬಗೆಹರಿಯುತ್ತದೆ ಎಂದು ತೀರ್ಮಾನಿಸಿದ್ದು, ಪಶೂ ವೈದ್ಯಾಧಿಕಾರಿಗಳ ಮೊರೆಹೋಗಿದ್ದಾರೆ.
SUMMARY | The fight over a buffalo took place between Kunibelakere village in Harihara taluk and Kulagatte village in Honnali taluk.
KEY WORDS | fight over a buffalo, Kunibelakere village , Harihara taluk , Kulagatte village,Honnali taluk.