SHIVAMOGGA | MALENADUTODAY NEWS | ಮಲೆನಾಡು ಟುಡೆ Dec 6, 2024
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕುನಲ್ಲಿ ಬುದ್ದಿವಾದ ಹೇಳಿದ್ದಕ್ಕೆ ನಗರಸಭೆ ಮಾಜಿ ಸದಸ್ಯನ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಲಾಗಿದೆ.
ಭದ್ರಾವತಿಯ ಹೊಸ ಸಿದ್ದಾಪುರದಲ್ಲಿ ಈ ಘಟನೆ ನಡೆದಿದ್ದು, ಘಟನೆ ಕುರಿತಾಗಿ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಇಲ್ಲಿನ ನಿವಾಸಿ ನಗರಸಭೆ ಮಾಜಿ ಸದಸ್ಯರೊಬ್ಬರು, ತಮ್ಮ ಏರಿಯಾದ ನಿವಾಸಿ ಅನಿ ಎಂಬಾತನಿಗೆ ಬುದ್ದಿವಾದ ಹೇಳಿದ್ದರು.
ಅನಿ ಏರಿಯಾದಲ್ಲಿ ಕುಡಿದು ದಾಂಧಲೆ ನಡೆಸ್ತಿದ್ದ ಎನ್ನಲಾಗಿದೆ. ಇದೇ ವಿಚಾರಕ್ಕೆ ಆತನಿಗೆ ಬುದ್ದಿವಾದ ಹೇಳಿದ್ದಾರೆ. ಮರುದಿನ ಇದೇ ವಿಚಾರಕ್ಕೆ ಕಿರಿಕ್ ಮಾಡಿದ ಅನಿ ನನಗೆ ಬುದ್ದಿವಾದ ಹೇಳುತ್ತೀಯಾ ಎಂದು ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ ಎಂದು ದೂರಲಾಗಿದೆ. ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
SUMMARY | Bhadravathi taluk of Shivamogga district, a former municipal councillor was attacked with a deadly weapon for giving advice.
KEY WORDS |Bhadravathi taluk of Shivamogga district, former municipal councillor was attacked