ಎಪ್ಪತ್ತುವರ್ಷ ಮೇಲ್ಪಟ್ಟ ನೊಂದಾಯಿತರಿಗೆ ಉಚಿತ ಆಯುಷ್ಮಾನ್‌ ಕಾರ್ಡ್ | ಯಾವಾಗ

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 13, 2025

ಶಿವಮೊಗ್ಗ | ಸೀನಿಯರ್ ಛೇಂಬರ್ ನ್ಯಾಷನಲ್ ಶಿವಮೊಗ್ಗ ಲೆಜಿನ್ ಇವರ ಸಹಯೋಗದಲ್ಲಿ ಎಪ್ಪತ್ತು ವರ್ಷ ಮೇಲ್ಪಟ್ಟ ಹಿರಿಯರಿಗೆ ಜನವರಿ 16ರಂದು  ಬೆಳಿಗ್ಗೆ 10ಗಂಟೆಗೆ ಶಿವಮೊಗ್ಗದ ಸರ್ಕಾರಿ ನೌಕರರ ಭವನದಲ್ಲಿ  ಉಚಿತ ಆಯುಷ್ಮಾನ್ ಕಾರ್ಡನ್ನು ವಿತರಿಸಲಾಗುವುದು ಎಂದು ಮೈಸೂರು ಬ್ಯಾಂಕ್ ನಿವೃತ್ತ ಸಂಘದ ಅಧ್ಯಕ್ಷರಾದ ಕೆ ಟಿ ಶ್ರೀನಿವಾಸ್ ತಿಳಿಸಿದರು.

ಇಂದು ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಈ ಹಿಂದೆ ಡಿಸೆಂಬರ್ 24, 2024 ರಂದು ಸೀನಿಯರ್ ಚೇಂಬರ್ ನ್ಯಾಷನಲ್ ಶಿವಮೊಗ್ಗ ಲೇಜಿನ್ ಸಯೋಗದಲ್ಲಿ 70 ವರ್ಷ ಮೇಲ್ಪಟ್ಟ ಹಿರಿಯರಿಗೆ ಆಯುಷ್ಮಾನ್ ಕಾರ್ಡ್‌ಗೆ ನೊಂದಣಿ ಮಾಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೆವು. ಆ ಕಾರ್ಯಕ್ರಮಕ್ಕೆ ಸಂಸದರದ ಬಿ ವೈ ರಾಘವೇಂದ್ರ ಅವರು ಚಾಲನೆ ನೀಡಿದ್ದರು. ಆ ಸಂದರ್ಭದಲ್ಲಿ ಸುಮಾರು 200ಕ್ಕೂ ಹೆಚ್ಚು ಹಿರಿಯರು ಆಯುಷ್ಮಾನ್ ಕಾರ್ಡ್‌ಬೇಕೆಂದು ನೋಂದಾಯಿಸಿಕೊಂಡಿದ್ದರು. ಹಾಗೆಯೇ ಕೆಲವು ವೃದ್ದಾಶ್ರಮಗಳಿಗೂ ತೆರಳಿ ಅಲ್ಲಿರುವ ಹಿರಿಯರಿಗೆ ಇದರ ಬಗ್ಗೆ ಮಾಹಿತಿ ನೀಡಿದ್ದೆವು. ಸುಮಾರು 40 ಜನ ವೃದ್ದಾಶ್ರಮದಲ್ಲಿರುವ ವೃದ್ದರೂ ಸಹ ಉಚಿತ ಆಯುಷ್ಮಾನ್ ಕಾರ್ಡ್‌ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ.  ಆದ್ದರಿಂದ ಆ ಕಾರ್ಡ್‌ನ್ನು ಉಚಿತವಾಗಿ ಜನವರಿ 16ರಂದು ವಿತರಿಸುತಿದ್ದೇವೆ. ಹಾಗೆಯೇ ಅಂದು ನಡೆಯುವ ಕಾರ್ಯಕ್ರಮವನ್ನು ಸಂಸದರಾದ ಬಿವೈ ರಾಘವೇಂದ್ರ ಅವರು ಉದ್ಘಾಟಿಸಲಿದ್ದಾರೆ ಎಂದರು.

SUMMARY |  The free Ayushman card will be distributed on Jan. 16 at 10 am at Government Employees’ Bhavan in Shivamogga, said K.T. Srinivas, President, Mysore Bank Retired Association.


KEYWORDS |  Ayushman card, K.T. Srinivas,  Mysore Bank, 

Share This Article