ಶಿವಮೊಗ್ಗದಲ್ಲಿ ಥಟ್ ಅಂತ ಹೇಳಿ | ವೈಕುಂಠ ಏಕಾದಶಿ ಸೇರಿದಂತೆ ಶಿವಮೊಗ್ಗದಲ್ಲಿ ಏನೇನು ಕಾರ್ಯಕ್ರಮವಿದೆ
Thatt Antha Heli , ಥಟ್ ಅಂತ ಹೇಳಿ, Thats what the program is in Shivamogga, what , programs are there in Shivamogga
SHIVAMOGGA | MALENADUTODAY NEWS | ಮಲೆನಾಡು ಟುಡೆ Jan 10, 2025
ಶಿವಮೊಗ್ಗದಲ್ಲಿರುವ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯ Subbaiah Medical College ಹಾಗೂ ಭಾರತೀಯ ವೈದ್ಯಕೀಯ ಸಂಘದ IndianMedicalAssociation ಸಹಯೋಗದಲ್ಲಿ ಥಟ್ ಅಂತ ಹೇಳಿ’ ಖ್ಯಾತಿಯ ಡಾ.ನಾ.ಸೋಮೇಶ್ವರ ಅವರಿಂದ ನಗರದಲ್ಲಿ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಲಾಗಿದೆ. ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಇದೇ ಜನವರಿ 18ರಂದು ಬೆಳಗ್ಗೆ 10 ಗಂಟೆಗೆ ರಸಪ್ರಶ್ನೆ ಕಾರ್ಯಕ್ರಮ ನಡೆಯಲಿದೆ.
ಸುದ್ದಿ 2
ಶಿವಮೊಗ್ಗ ವೆಂಕಟೇಶ್ವರ ನಗರದ ಜೈಲ್ ರಸ್ತೆಯಲ್ಲಿರುವ ವೆಂಕಟೇಶ್ವರ ದೇವಾಲಯದಲ್ಲಿ ವೈಕುಂಠ ಏಕಾದಶಿ ಮಹೋತ್ಸವ ನಡೆಯುತ್ತಿದೆ. ನಿನ್ನೆ ಇವತ್ತು ಹಾಗೂ ನಾಳೆ ಕಾರ್ಯಕ್ರಮಗಳು ನಡೆಯಲಿದೆ. ಬೆಳಿಗ್ಗೆ 6 ರಿಂದ 9:30 ರವರೆಗೆ ನಡೆಯಲಿಯದೆ. ಮಧ್ಯಾಹ್ನ 2: 30 ರಿಂದ ರಾತ್ರಿ 9:30 ರವರೆಗೆ ದೇವರಿಗೆ ಮಹಾ ಮಂಗಳಾರತಿ ಹಾಗೂ ಪ್ರಸಾದ ಇರುತ್ತದೆ. ಜ.11 ರ ಶನಿವಾರದಂದು ಶ್ರೀ ಭೂವರಹಾ ಸ್ವಾಮಿ ಹೋಮ ಹಾಗೂ ಜ 12 ರಂದು ಶ್ರೀ ಹಯಗ್ರೀಯ ಸ್ವಾಮಿ ಹೋಮ ಕಾರ್ಯಕ್ರಮಗಳ ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ದೇವಾಲಯ ಅರ್ಚಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿ 3
ಕರ್ನಾಟಕ ರಾಜ್ಯ ಪಶುವೈದ್ಯಕೀಯ ಪರೀಕ್ಷಕರ ಸಂಘ ವತಿಯಿಂದ ಜನವರಿ 13 ರ ಬೆಳಿಗ್ಗೆ 10:30ಕ್ಕೆ ರಾಜ್ಯ ಸರ್ಕಾರಿ ನೌಕಕರ ಭವನದಲ್ಲಿ ಜಿಲ್ಲಾ ಪಶುವೈದ್ಯಕೀಯ ಪರೀಕ್ಷಕರಿಗೆ ತಾಂತ್ರಿಕ ಕಾರ್ಯಾಗಾರ ಹಾಗೂ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ನಿವೃತ್ತರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಟಿ.ನಾಗೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿ 4
ರಾಷ್ಟೋತ್ಥಾನ ಸಾಹಿತ್ಯ ಬೆಂಗಳೂರು, ರಾಜ್ಯೋತ್ಥಾನ ಬಳಗ ಶಿವಮೊಗ್ಗ ಇವರ ಸಹಯೋಗದಲ್ಲಿ ಶಿವಮೊಗ್ಗ ನಗರದಲ್ಲಿ ಪುಸ್ತಕ ಸಂಸ್ಕೃತಿ ಜಾಗೃತಿಗಾಗಿ ಕನ್ನಡ ಪುಸ್ತಕ ಹಬ್ಬ -2025 ಪುಸ್ತಕ ಪ್ರದರ್ಶನ ಮತ್ತು ಮಾರಾಟವನ್ನು ಜನವರಿ 10,11,12 ರಂದು ಮೂರು ದಿನಗಳ ಕಾಲ ನಗರದ ಕೋಟೆ ರಸ್ತೆಯಲ್ಲಿರುವ ಚಿಗುರು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಚಾಲಕರಾದ ಸುರೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇನ್ನು ಈ ಪ್ರದರ್ಶನದಲ್ಲಿ ರಾಷ್ಟ್ರೀಯ ಸಾಹಿತ್ಯ, ಇತಿಹಾಸ, ವ್ಯಕ್ತಿ ಪರಿಚಯ, ರಾಷ್ಟ್ರಪುರುಷರು, ಹೋರಾಟಗಾರರು ಹಾಗೂ ಮಕ್ಕಳಿಗೆ ಸಂಬಂಧಿಸಿದ ಎಲ್ಲಾ ಬಗೆಯ ಪುಸ್ತಕಗಳ ಮಾರಾಟ ಮತ್ತು ಪ್ರದರ್ಶನ ಇರುತ್ತದೆ ಎಂದು ತಿಳಿಸಿದರು.
ಸುದ್ದಿ 5
ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಪ್ರಯುಕ್ತ ನಗರದ ಕುವೆಂಪು ರಂಗಮಂದಿಒಲ್ಲಿ ರಾಷ್ಟ್ರೀಯ ಯುವ ದಿನ ಹಾಗೂ ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮವನ್ನು ಜ.12 ರ ಬೆಳಿಗ್ಗೆ ಏರ್ಪಡಿಸಲಾಗಿದೆ, ಈ ಕಾರ್ಯಕ್ರಮದ ಅಂಗವಾಗಿ ಅಂದು 10 ರಿಂದ 29 ವರ್ಷದೊಳಗಿನವರಿಗೆ ಸ್ವಾಮಿ ವಿವೇಕಾನಂದರ ಕುರಿತಾದ ವೇಷಭೂಷಣ ಸ್ಪರ್ಧೆ ಮತ್ತು 15 ರಿಂದ 29 ವರ್ಷದೊಳಗಿನವರಿಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಆಸಕ್ತರು ಅಂದು ಬೆಳಿಗ್ಗೆ 9.30 ಕ್ಕೆ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಪ್ರಬಂಧ ಸ್ಪರ್ಧೆಗೆ ಸ್ಥಳದಲ್ಲಿ ವಿಷಯ ನೀಡಲಾಗುವುದು. ಕಾರ್ಡ್ಬೋರ್ಡ್ ಮತ್ತು ಪೆನ್ ಸ್ಪರ್ಧಿಗಳೇ ತರಬೇಕು. ವೇಷಭೂಷಣ ಸ್ಪರ್ಧೆಯಲ್ಲಿ ಆಕರ್ಷಣೆ ಮತ್ತು ಸಂಪ್ರದಾಯಕ್ಕೆ ಆದ್ಯತೆ ನೀಡಲಾಗುವುದು. ವಿಜೇತರಿಗೆ ನಗದು ಬಹುಮಾನ, ಪ್ರಶಸ್ತಿ ಪತ್ರ, ಸ್ಮರಣಿಕೆ, ಭಾಗವಹಿಸುವವರಿಗೆ ಅಭಿನಂದನಾ ಪತ್ರ ನೀಡಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
SUMMARY | Thats what the program is in Shivamogga, what programs are there in Shivamogga
KEY WORDS | Thatt Antha Heli , ಥಟ್ ಅಂತ ಹೇಳಿ, Thats what the program is in Shivamogga, what programs are there in Shivamogga