SHIVAMOGGA | MALENADUTODAY NEWS | ಮಲೆನಾಡು ಟುಡೆ Jan 27, 2025
ಶಿವಮೊಗ್ಗದಲ್ಲಿಂದು ಮಾತನಾಡಿದ ಸಂಸದ ಬಿವೈ ರಾಘವೇಂದ್ರ ಉಸ್ತುವಾರಿ ಸಚಿವರ ವಿರುದ್ಧ ಗರಂ ಆಗಿದ್ದಾರೆ. ಶಿವಮೊಗ್ಗ ಪ್ರವಾಸದ ವೇಳೆ ಉಸ್ತುವಾರಿ ಸಚಿವರು ಹರತಾಳು ಹಾಲಪ್ಪರ ಕುರಿತಾಗಿ ಹೇಳಿದ ಹೇಳಿಕೆ ಹಾಗೂ ಶಾಸಕ ಎಸ್‌ಎನ್ ಚನ್ನಬಸಪ್ಪರವರ ಬಗ್ಗೆ ಆಡಿದ ಮಾತು ಹಾಗೂ ಶರಾವತಿ ಹಾಗೂ ವಿಐಎಸ್‌ಎಲ್ ವಿಚಾರದಲ್ಲಿ ನೀಡಿರುವ ಸ್ಟೇಟ್‌ಮೆಂಟ್‌ಗಳ ಬಗ್ಗೆ ಸಿಟ್ಟಾಗಿಯೇ ಪ್ರತಿಕ್ರಿಯಿಸಿದ ಸಂಸದ ಬಿವೈ ರಾಘವೇಂದ್ರರವರು ಜನಪ್ರತಿನಿಧಿಯಾಗಿ ನಾನು ಮಾಡುವ ಕೆಲಸ ಮಾಡುತ್ತಿದ್ದೇನೆ. ನಿಮ್ಮ ಕೆಲಸವನ್ನು ನೀವು ಮಾಡಿ ಎಂದಿದ್ದಾರೆ.
ಹಿರಿಯ ಮುಖಂಡ ಹರತಾಳು ಹಾಲಪ್ಪನವರ ಕುರಿತಾಗಿ ಏಕವಚನದಲ್ಲಿ ಸಚಿವರು ನಿಂದರಿಸಿದ್ದಾರೆ. ಶಿಕ್ಷಣ ಸಚಿವರಾಗಿ ಅವರ ಮಾತು ಶೋಭೆ ತರುವಂತದಲ್ಲ. ಉಸ್ತುವಾರಿ ಸಚಿವರಾಗಿ ಅವರಿಗೆ ನಾವು ಗೌರವವನ್ನು ನೀಡುತ್ತಿದ್ದೇವೆ. ಆದರೆ ಅವರು ಗೌರವ ಕೊಡುವ ಮಾತುಗಳನ್ನ ವಿಪಕ್ಷ ನಾಯಕರ ಕುರಿತಾಗಿ ಆಡುತ್ತಿಲ್ಲ ಎಂದ ಬಿವೈಆರ್ ಸಚಿವರು ಕುವೆಂಪು ವಿವಿ ರಚನೆ ಬಗ್ಗೆ ಸುಳ್ಳು ಮಾಹಿತಿಯನ್ನು ನೀಡಿದ್ದಾರೆ. ಶರಾವತಿ ಹಾಗೂ ವಿಐಎಸ್‌ಎಲ್ ಕುರಿತಾಗಿ ಸಚಿವರನ್ನು ಭೇಟಿಯಾಗಿದ್ದನ್ನು ಆಕ್ಷೇಪಿಸಿದ್ದಾರೆ. ನಾನು ಜನಪ್ರತಿನಿಧಿಯಾಗಿ ಹೋಗಿ ಅರಣ್ಯ ಸಚಿವರನ್ನು ಭೇಟಿ ಮಾಡಿದರೆ ಏನು ತಪ್ಪಿದೆ ಎಂದು ಪ್ರಶ್ನಿಸಿದ ಸಂಸದರು, ಶರಾವತಿ ಮತ್ತು ವಿಐಎಸ್‌ಎಲ್‌ನ ಸಮಸ್ಯೆಗಳು ನಿಮ್ಮದೆ ಪಕ್ಷದ ಪಾಪದ ಕೂಸುಗಳು, ಅಷ್ಟೊಂದು ವರ್ಷದ ಅಧಿಕಾರದಲ್ಲಿದ್ದಾಗ ಅವರ ಪಕ್ಷ ಏನು ಮಾಡಿತ್ತು ಎಂದು ಪ್ರಶ್ನಿಸಿದರು.
ಈ ಹಿಂದೆ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ , ಹಾಲಿ ಶಾಸಕ ಎಸ್‌ಎನ್ ಚೆನ್ನಬಸಪ್ಪ ಹಾಗೂ ತಮ್ಮನ್ನು ಒಳಗೊಂಡು ಫ್ರೀಡಂಪಾರ್ಕ್ ಅಭಿವೃದ್ಧಿಗಾಗಿ ಪ್ಲಾನ್ ಮಾಡಲಾಗಿತ್ತು. ಅಂದಿನ ಶ್ರಮದ ಅಡಿಯಲ್ಲಿ ಇದೀಗ ನೀವು ಶಂಕುಸ್ಥಾಪನೆ ಮಾಡೀದ್ದೀರಿ. ಆ ನಿಟ್ಟಿನಲ್ಲಿ ನಿಮಗೆ ನಾವು ಗೌರವ ನೀಡುತ್ತೇವೆ. ಸರ್ಕಾರ ಯಾರ ಸ್ವತ್ತು ಅಲ್ಲ, ಅಧಿಕಾರ ಇದ್ದವರು ಕೆಲಸ ಮಾಡುತ್ತಾರೆ. ಆಶ್ರಯ ಯೋಜನೆಯ ವಿಚಾರದಲ್ಲಿ ಶಾಸಕರ ಪ್ರಯತ್ನಕ್ಕೆ ಬೇಕಂತಲೇ ತಡೆಯೊಡ್ಡಿದ್ದೀರಿ. ಈಗ ಎರಡು ಟ್ಯೂಬ್‌ಲೈಟ್ ಹಾಕಲು ಮೂರು ನಾಲ್ಕು ತಿಂಗಳು ಬೇಕಾಗುತ್ತಿದೆಯೇ? ಎಂದು ಪ್ರಶ್ನಿಸಿದ ಸಂಸದರು ಹಗುರವಾಗಿ ಗೌರವವಿಲ್ಲದೆ ಮಾತನಾಡುವುದನ್ನ ನಿಲ್ಲಿಸುವುದು ಉತ್ತಮ ಎಂದರು. ಜೊತೆಯಲ್ಲಿ ಕುವೆಂಪು ವಿವಿ 1987 ರಲ್ಲಿ ರಾಮಕೃಷ್ಣ ಹೆಗೆಡೆಯವರ ಕಾಲದಲ್ಲಿ ಆರಂಭವಾಗಿತ್ತು, ನಮ್ಮ ತಂದೆ ಬಂಗಾರಪ್ಪನವರ ಸಮಯದಲ್ಲಿ ಕುವೆಂಪು ವಿವಿ ಆರಂಭವಾಗಿತ್ತು ಎನ್ನುವ ಸುಳ್ಳುಗಳನ್ನು ಹೇಳದಿರಿ ಎಂದ ಸಂಸದರು ಬಂಗಾರಪ್ಪನವರ ಬಗ್ಗೆ ನಮಗೆ ಅಪಾರ ಗೌರವ ಇದೆ ಎಂದರು.
SUMMARY | MP BY Raghavendra lashed out minister Madhu Bangarappa
KEY WORDS | MP BY Raghavendra lashed out, minister Madhu Bangarappa