SHIVAMOGGA | MALENADUTODAY NEWS | ಮಲೆನಾಡು ಟುಡೆ Nov 23, 2024
ಶಿವಮೊಗ್ಗದಲ್ಲಿ ಇವತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಟಿ ನಡೆಸಿ ಮಾತನಾಡುತ್ತಾ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಭವಿಷ್ಯ ಚೆನ್ನಾಗಿ ಹೇಳುತ್ತಾರೆ. ಅವರನ್ನ ಭವಿಷ್ಯ ಹೇಳಲು ಬಸ್ ಸ್ಟ್ಯಾಂಡ್ ನಲ್ಲಿ ಕುರ್ಚಿ ಹಾಕಿಕೊಡಬೇಕಾಗುತ್ತದೆ. ಅಲ್ಲಿ ಅವರು ಭವಿಷ್ಯ ಹೇಳಲಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಮುಡಾ ಹಗರಣ ವಕ್ಫ್ ಕಬಳಿಕೆ ಅಂತೆಲ್ಲಾ ಭಾಷಣ ಮಾಡಿದ್ರು. ಆದರೆ, ಜನರು ಯಾರು ಅವರ ಮಾತಿಗೆ ಸೊಪ್ಪು ಹಾಕಲಿಲ್ಲ, ಅವರು ಪುಕ್ಸಟ್ಟೆ ಯಾಗಿ ರಾಜ್ಯ ಬಿಜೆಪಿ ಅಧ್ಯಕ್ಷರಾದವರು. ಯಾವುದೇ ಹೋರಾಟ ಮಾಡಿ ಬಂದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ಏನೇನೋ ಮಾತಾಡ್ತಾರೆ, ಅವರ ತಂದೆ ಸಹ ಮುಖ್ಯಮಂತ್ರಿಯಾಗಿದ್ದವರು. ಗೌರವದಿಂದ ಮಾತನಾಡುವುದನ್ನ ಅವರು ಕಲಿಯಲಿ ಎಂದರು.
ಗ್ಯಾರಂಟಿ ಯೋಜನೆಯ ಮಾಡಿದ್ದು ಕಮಿಷನ್ ತೆಗೆದುಕೊಳ್ಳೋಕೆ ಎಂದು ಆರೋಪಿಸುತ್ತಾರೆ. ಆದರೆ ಗೃಹಲಕ್ಷ್ಮಿ ಗೃಹಜೋತಿ ಎಲ್ಲ ಯೋಜನೆಗಳಿಗೆ ಅರ್ಜಿ ಹಾಕುವಾಗ ಯಾರಾದರೂ ಕಮಿಷನ್ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದ ಮಧು ಬಂಗಾರಪ್ಪ , ಸುಖಾ ಸುಮ್ಮನೆ ಏನೇನೋ ಆರೋಪ ಮಾಡ್ತಾರೆ ಎಂದು ಟೀಕಿಸಿದರು.
ಬಿಜೆಪಿ ಮೂರು ವರ್ಷ ಆಡಳಿತ ನಡೆಸಿದಾಗ ಒಂದೇ ಒಂದು ಬಸ್ಸುಗಳನ್ನ ಖರೀದಿ ಮಾಡಿಲ್ಲ. ಹಾಗಾಗಿ ನಮ್ಮ ಸರ್ಕಾರದ ಮೇಲೆ ಹೊರಬಿದ್ದಿದೆ. ಶಿವಮೊಗ್ಗಕ್ಕೆ 100 ಬಸ್‌ಗಳನ್ನು ನೀಡುವಂತೆ ಸಚಿವ ರಾಮಲಿಂಗಾರೆಡ್ಡಿಯವರ ಬಳಿ ಮನವಿಮಾಡಿದ್ದೆ. ಪ್ರತಿಫಲವಾಗಿ ಈಗಾಗಲೇ 70 ಬಸ್‌ಗಳನ್ನ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ರಾಜ್ಯದಲ್ಲಿ ಜನರು ಭಯಪಡುವ ಅಗತ್ಯವಿಲ್ಲ ಎಲ್ಲರ ಬಿಪಿಎಲ್ ಕಾರ್ಡ್ ಗಳು ರದ್ದಾಗುವುದಿಲ್ಲ, ಯಾರು ಟ್ಯಾಕ್ಸ್ ಕಟ್ಟುತ್ತಾರೋ ಅಥವಾ ಸರ್ಕಾರಿ ನೌಕರಿಯಲ್ಲಿರುವರೋ ಅವರ ಕಾರ್ಡ್ ಗಳು ಮಾತ್ರ ರದ್ದಾಗುತ್ತದೆ ಎಂದರು, ಏನಾದರೂ ಕಣ್ತಪ್ಪಿ ಫಲಾನುಭವಿಗಳ ಬಿಪಿಎಲ್ ಕಾರ್ಡ್ ರದ್ದಾದರೆ ಅದನ್ನು ನಾನೇ ಸರಿಪಡಿಸಿ ಕೊಡ್ತೇನೆ ಎಂದು ವಿಶ್ವಾಸ ನೀಡಿದ ಸಚಿವರು, ಕಸ್ತೂರಿ ರಂಗನ್ ವರದಿ ಈಗ ಬೂದಿ ಮುಚ್ಚಿದ ಕೆಂಡದಂತಿದೆ. 40 ವರ್ಷದಿಂದಲೂ ಈ ಸಮಸ್ಯೆ ಇದೆ. ಅದನ್ನು ಒಮ್ಮೆಲೆ ಸರಿಪಡಿಸಲು ಹೋದರೆ ಸಾಧ್ಯವಾಗುವುದಿಲ್ಲ. ಇದನ್ನೂ ಹಂತ ಹಂತವಾಗಿ ಸರಿಪಡಿಸುವ ಕೆಲಸ ಮಾಡುತ್ತಿದ್ದೇವೆ. ಈ ಸಂಬಂಧ 15 ದಿನಗಳ ಒಳಗಾಗಿ ಸಿಎಂ ಸಚಿವರು ಹಾಗೂ ಅಧಿಕಾರಿಗಳ ಸಭೆ ನಡೆಸಲಿದ್ದಾರೆ ಎಂದರು.
ರೈತರು ನೋಟಿಸ್ ಬಂದರೆ ಹೆದರುವ ಅಗತ್ಯವಿಲ್ಲ ಎಂದ ಸಚಿವರು, ಇವತ್ತು ನಮಗೆ ವಿಶ್ವಾಸದ ದಿನವಾಗಿದೆ. ರಾಜ್ಯದ ಜನ ನಮ್ಮ ಮೇಲೆ ವಿಶ್ವಾಸವಿಟ್ಟು 136 ಸೀಟು ಗಳನ್ನ ಗೆಲ್ಲಿಸಿದ್ದಾರೆ, ಉಪಚುನಾವಣೆಯಲ್ಲಿ ಮೂರೂ ಕ್ಷೇತ್ರದಲ್ಲಿ ನಾವು ಗೆಲ್ಲುತ್ತಿದ್ದೇವೆ . ಈ ಗೆಲುವಿನ ಹಿಂದೆ ನಮ್ಮ ಕಾರ್ಯಕರ್ತರ ಶ್ರಮವಿದೆ ಎಂದರು. ಗೆಲುವಿಗೆ ಕಾರಣ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ. ನಮ್ಮ ಮೇಲೆ ನಂಬಿಕೆ ಇಟ್ಟಿದಕ್ಕೆ ರಾಜ್ಯದ ಜನರಿಗೆ ಧನ್ಯವಾದಗಳು ಎಂದರು.
SUMMARY| Addressing a press conference in Shivamogga, Education Minister Madhu Bangarappa criticised Vijayendra.
KEY WORDS | press conference in Shivamogga, Education Minister Madhu Bangarappa , Vijayendra