SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 7, 2024
ಶಿವಮೊಗ್ಗ | 20 ವರ್ಷಗಳ ಹಿಂದೆ ಪತ್ರಕರ್ತರೆಲ್ಲರೂ ಸೇರಿ ಒಂದು ವರ್ಗವನ್ನು ಮಾಡಿಕೊಂಡಿದ್ದರು ಆದರೆ ಪ್ರಸ್ತುತ ತಂತ್ರಜ್ಞಾನ ಬೆಳೆದಿದ್ದು, ಮೊಬೈಲ್ ಇರುವವರು ಎಲ್ಲರೂ ಪತ್ರಕರ್ತರಾಗಿದ್ದಾರೆ ಎಂದು ಪ್ರಜಾವಾಣಿಯ ಕಾರ್ಯನಿರ್ವಹಕ ಸಂಪಾದಕರಾದ ರವೀಂದ್ರ ಭಟ್ ಹೇಳಿದರು.
ನಗರದ ಪ್ರತಿಕಾಭವನದಲ್ಲಿ ಎನ್ ಮಂಜುನಾಥ ಅಭಿನಂದನಾ ಸಮಿತಿ ವತಿಯಿಂದ ಕ್ರಾಂತಿದೀಪ ಪ್ರಧಾನ ಸಂಪಾದಕರಾದ ಎನ್ ಮಂಜುನಾಥ್‌ರವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರವೀಂದ್ರ ಭಟ್ ಇಂದು ನಾನು ಅಭಿನಂದನೆ ಸಲ್ಲಿಸಬೇಕಾಗಿರುವುದು ಮುಂಜುನಾಥ್ ರವರಿಗೂ ಅಥವಾ ಶಿವಮೊಗ್ಗದ ಜನತೆಗೂ ತಿಳಿಯುತ್ತಿಲ್ಲ. ಏಕೆಂದರೆ ಅವರ ಕ್ರಾಂತಿದೀಪ ಪತ್ರಿಕೆ ಬೆಳೆಯಲು ಪ್ರಮುಖ ಕಾರಣೀಕರ್ತರು ಶಿವಮೊಗ್ಗದ ಜನತೆ ಆದ್ದರಿಂದ ಶಿವಮೊಗ್ಗದ ಜನತೆಗೆ ಅಭಿನಂದನೆ ತಿಳಿಸುತ್ತೇನೆ ಎಂದರು. ಹಾಗೆಯೇ ಅವರ ಕ್ರಾಂತಿದೀಪ ಪತ್ರಿಕೆ 40 ವರ್ಷಗಳ ಕಾಲ ಸುಧೀರ್ಘವಾಗಿ ನಡೆಸಿಕೊಂಡು ಬಂದಿದ್ದಕ್ಕೆ ಅಭಿನಂದನೆ ತಿಳಿಸಿದರು.
ಇತ್ತೀಚೆಗೆ ಎಷ್ಟೋಜನ ಹಿರಿಯರು ನಮ್ಮ ಮಕ್ಕಳು ಪತ್ರಿಕೆ ಓದುತ್ತಿಲ್ಲ ಎನ್ನುತ್ತಾರೆ. ಅದು ಏಕೆ ಎಂದರೆ ನಾವು ಏನು ಮಾಡುತ್ತಿವೋ ಮಂದೆ ನಮ್ಮ ಮಕ್ಕಳು ಅದನ್ನು ಅನುಸರಿಸುತ್ತಾರೆ. ನಮ್ಮ ಹಿರಿಯರು ಪುಸ್ತಕವನ್ನು ಹೆಚ್ಚಾಗಿ ಓದುತ್ತಿದ್ದರು ಅದನ್ನು ನೋಡಿ ನಾವು ಪುಸ್ತಕ ಓದಲು ಶುರು ಮಾಡಿದೆವು ಆದರೆ ಈಗಿನ ತಂದೆ ತಾಯಿಯರು ಮಕ್ಕಳು ಊಟಮಾಡುತ್ತಿಲ್ಲ ಹಠ ಮಾಡುತ್ತಿದ್ದಾರೆ ಎಂಬ ಸಣ್ಣ ಸಣ್ಣ ಕಾರಣಕ್ಕೆ ಅವರಿಗೆ ಮೊಬೈಲ್ ಕೊಟ್ಟು ಅಭ್ಯಾಸ ಮಾಡುತ್ತಿದ್ದಾರೆ. ಹಾಗೆಯೇ ಎಲ್ಲಾ ವಿಚಾರ ಗಳು ಈಗ ಮೊಬೈಲ್ ನಲ್ಲಿ ತಿಳಿಯುವುದರಿಂದ ಮಕ್ಕಳು ಮೊಬೈಲ್ ಮೇಲೆ ಅವಲಂಬಿತರಾಗಿದ್ದಾರೆ ಎಂದರು. ಹಾಗೆಯೇ 20 ವರ್ಷಗಳ ಹಿಂದೆ ಪತ್ರಕರ್ತರೆಲ್ಲರೂ ಸೇರಿ ಒಂದು ವರ್ಗವನ್ನು ಮಾಡಿಕೊಂಡಿದ್ದರು ಆದರೆ ಪ್ರಸ್ತುತ ತಂತ್ರಜ್ಞಾನ ಬೆಳೆದಿದ್ದು, ಮೊಬೈಲ್ ಇರುವವರು ಎಲ್ಲರೂ ಪತ್ರಕರ್ತರಾಗಿದ್ದಾರೆ. ಪತ್ರಕರ್ತರು ಬರೆಯುವ ಎಲ್ಲಾ ವಿಷಯಗಳನ್ನು ಅವರು ಯುಟ್ಯೂಬ್ ನಲ್ಲಿ ವಿಡಿಯೋ ಮಾಡಿ ಬಿಡುತ್ತಾರೆ ಎಂದರು.
ಪ್ರಸ್ತುತ ಡಿಜಿಟಲ್ ಮಾಧ್ಯಮಗಳು ವಿಶ್ವಾಸರ್ಹವನ್ನು ಉಳಿಸಿಕೊಂಡಿಲ್ಲ
2010 ರ ನಂತರ ಡಿಜಿಟಲ್ ಮಾಧ್ಯಮಗಳು ಹೆಚ್ಚಾಗಿ ಬರಲು ಆರಂಭಿಸಿದವು ಆ ಸಂದರ್ಭದಲ್ಲಿ ಡಿಜಿಟಲ್ ಮಾಧ್ಯಮಗಳು 24 ಗಂಟೆ ಸುದ್ದಿಯನ್ನುಹಾಕುತ್ತಿದ್ದರು. ಆಗ ಎಲ್ಲರೂ ಪೇಪರ್ ಓದುವವರು ಕಡಿಮೆ ಆಗುತ್ತಾರೆ ಎಂದು ಕೊಂಡರು ಆದರೆ ಅದು ಸಾಧ್ಯವಾಗಲಿಲ್ಲ. ಪ್ರಸ್ತುತ ಡಿಜಿಟಲ್ ಮಾಧ್ಯಮಗಳು ವಿಶ್ವಾಸರ್ಹತೆಯನ್ನು ಕಳೆದುಕೊಂಡಿವೆ ಅದಕ್ಕೆ ಕಾರಣ ಡಿಜಿಟಲ್ ಮಾಧ್ಯಮದಲ್ಲಿ ಬರುವ ವಿಷಯಗಳು ಸತ್ಯವೋ ಸುಳ್ಳೋ ಎಂಬುದನ್ನು ಜನರು ಬೆಳಿಗ್ಗೆ ಪೇಪರ್ ನಲ್ಲಿ ನೋಡುತ್ತಾರೆ. ಡಿಜಿಟಲ್ ಮಾಧ್ಯಮಗಳಲ್ಲಿ ಅಂತಹಾ ಪರಿಸ್ಥಿತಿ ಗಳು ನಿರ್ಮಾಣವಾಗಿದೆ ಎಂದರು. ಹಾಗೆಯೇ ಮುಂದಿನ 15 ವರ್ಷದಲ್ಲಿ ಎಲ್ಲರೂ ಪ್ರಿಂಟೆಡ್ ಮಿಡಿಯಾಗೆ ಮರಳುತ್ತಾರೆ ಪ್ರಸ್ತುತ ಯುರೋಪ್ ಕಂಟ್ರಿಯಲ್ಲಿ ಜನರು ಪೇಪರ್ ಅನ್ನೂ ಹೆಚ್ಚಾಗಿ ಓದುತ್ತಿದ್ದಾರೆ. ಮುಂದೆ ಭಾರತದಲ್ಲಿಯೂ ಇದು ಮುಂದುವರೆಯುತ್ತದೆ ಎಂದರು
SUMMARY | Ravindra Bhat, executive editor of Prajavani, said, “20 years ago, journalists had formed a class, but now technology has grown and all those who have mobile phones are journalists.
KEYWORDS | Ravindra Bhat, executive editor of Prajavani, journalists, kannadanews,