ಇವತ್ತು ಬಿಗ್​ ಡೇ | ಸೆಕೆಂಡ್​ ಪಿಯುಸಿ ಪರೀಕ್ಷೆ ರಿಸಲ್ಟ್​ನ ಕ್ರಮ ಹೇಗೆ ಓದಿ

SHIVAMOGGA| MALENADUTODAY NEWS | ಮಲೆನಾಡು ಟುಡೆ  Apr 8, 2025 ‌‌ 

ಇವತ್ತು ಪೋಷಕರು ಹಾಗೂ ಸೆಕೆಂಡ್ ಪಿಯುಸಿ ಮಕ್ಕಳಿಗೆ ಸಾಧನೆ ಹೇಳಿಕೊಳ್ಳುವ ದಿನ. ಏಕೆಂದರೆ, ಇತ್ತೀಚೆಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ಇವತ್ತು ಪ್ರಕಟವಾಗಲಿದೆ. ಈ ಬಗ್ಗೆ ಕರ್ನಾಟಕ ಪದವಿ ಪೂರ್ವ-ವಿಶ್ವವಿದ್ಯಾಲಯ ಶಿಕ್ಷಣ ಇಲಾಖೆಯು  ಪ್ರಕಟಣೆಯಲ್ಲಿ ತಿಳಿಸಿದೆ. 

ಇಲಾಖೆಯ ಪ್ರಕಟಣೆಯ ಪ್ರಕಾರ, ಕಳೆದ ಮಾರ್ಚ್‌ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆ-1ಯ ಫಲಿತಾಶವೂ ಇವತ್ತು ಹೊರಬೀಳಲಿದೆ.

ಇವತ್ತು ಮಧ್ಯಾಹ್ನ 12.30ಕ್ಕೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪನವರು ಫಲಿತಾಂಶವನ್ನು ಪ್ರಕಟಿಸಲಿದ್ದಾರೆ. 

ಇನ್ನೂ ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಇತರ ಅಗತ್ಯ ವಿವರಗಳನ್ನು ಬಳಸಿಕೊಂಡು ತಮ್ಮ ಫಲಿತಾಂಶವನ್ನು ಆನ್​ಲೈನ್​ನಲ್ಲಿಯು ಸಹ ನೋಡಿಕೊಳ್ಳಬಹುದು. 

ಈ ರೀತಿಯಲ್ಲಿ ಫಲಿತಾಂಶವನ್ನು  ಪಡೆಯಲು ಅಧಿಕೃತ ವೆಬ್‌ಸೈಟ್‌ಗಳಾದ kseab.karnataka.gov.inkseab.karnataka.gov.i ಮತ್ತು karresults.nic.in ಗೆ ಬೇಟಿಕೊಟ್ಟು ಕ್ಲಿಕ್ ಮಾಡಿ ವಿವರ ಪಡೆದುಕೊಳ್ಳಿ, 

ರಿಸಲ್ಟ್​ ನೋಡುವ ಕ್ರಮ

ವಿದ್ಯಾರ್ಥಿಗಳು ತಮ್ಮ ಪಿಯುಸಿ ಫಲಿತಾಂಶವನ್ನು ಕರ್ನಾಟಕದಲ್ಲಿ ಪರಿಶೀಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಬಹುದು:

ಅಧಿಕೃತ ವೆಬ್‌ಸೈಟ್ ಅನ್ನು https://karresults.nic.in/ ನಲ್ಲಿ ತೆರೆಯಿರಿ.

ಪಿಯುಸಿ ಫಲಿತಾಂಶಗಳ ಕುರಿತು ಅಧಿಸೂಚನೆಯನ್ನು ಪರಿಶೀಲಿಸಿ (ಹೊಸ ವಿಂಡೋ ತೆರೆಯುತ್ತದೆ)

ನಿಮ್ಮ ನೋಂದಣಿ ಸಂಖ್ಯೆಯನ್ನು ಭರ್ತಿ ಮಾಡಿ

ನಿಮ್ಮ ರೋಲ್ ಸಂಖ್ಯೆ ,  ನೋಂದಣಿ ಸಂಖ್ಯೆ ಮತ್ತು  ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ 

ನಿಮ್ಮ ಸ್ಟ್ರೀಮ್ ಅನ್ನು ಆಯ್ಕೆಮಾಡಿ:  ವಾಣಿಜ್ಯ, ಕಲೆ ಅಥವಾ ವಿಜ್ಞಾನ .

‘ಸಲ್ಲಿಸು’ ಮೇಲೆ ಕ್ಲಿಕ್ ಮಾಡಿ 

ನಿಮ್ಮ ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2025 ಅನ್ನು ಸಲ್ಲಿಸಿ ಮತ್ತು ಡೌನ್‌ಲೋಡ್ ಮಾಡಿ/ಮುದ್ರಿಸಿ

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು