SHIVAMOGGA | MALENADUTODAY NEWS | ಮಲೆನಾಡು ಟುಡೆ Feb 1, 2025
ರಾಜ್ಯ ನಕ್ಸಲ್ ಕಥಾನಕದ ಮೊದಲ ಅಧ್ಯಾಯ ಬಹುತೇಕ ಕೊನೆಯಪುಟವನ್ನು ತಲುಪಿದೆ. ಕಾನೂನು ಇಲಾಖೆಗಳಿಂದ ಗುರುತಿಸಲ್ಪಟ್ಟಿದ್ದ ನಕ್ಸಲರ ಪಟ್ಟಿಯಲ್ಲಿ ಉಳಿದಿದ್ದ ಕೊನೆಯ ವ್ಯಕ್ತಿಗಳು ಸಹ ಶರಣಾಗುತ್ತಿದ್ದಾರೆ. ಈ ಪೈಕಿ ಇವತ್ತು ಕೋಟೆ ಹೊಂಡ ರವೀಂದ್ರ ಚಿಕ್ಕಮಗಳೂರು ಎಸ್‌ಪಿ ವಿಕ್ರಮ್ ಅಮಟೆ ಎದುರು ಶರಣಾದರು. ಇನ್ನೊಬ್ಬಕ್ಕೆ ತೊಂಬಟ್ಟು ಲಕ್ಷ್ಮಿ ನಾಳೆ ಚಿಕ್ಕಮಗಳೂರು ಅಥವಾ ಉಡುಪಿಯಲ್ಲಿ ಶರಣಾಗುವ ಸಾದ್ಯತೆ ಇದೆ. ಮಾದ್ಯಮಗಳಲ್ಲಿ ಹರಿದಾಡುತ್ತಿರುವ ನಕ್ಸಲ್ ಶರಣಾಗತಿಯ ಪ್ರಕಟಣೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕೋಟೆ ಹೊಂಡ ರವೀಂದ್ರ ಶರಣಾಗತಿ
ಚಿಕ್ಕಮಗಳೂರು ಎಸ್‌ಪಿ ಎದುರು ಶರಣಾದ ನಕ್ಸಲ್ ಕೋಟೆಹೊಂಡ ರವೀಂದ್ರ ಚಿಕ್ಕಮಗಳೂರು ಡಿಸಿ ಮೀನಾ ನಾಗರಾಜ್ ಮುಂದೆ ಹಾಜರುಪಡಿಸಲಾಗಿದೆ. ಅಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಮೀನಾ ನಾಗರಾಜ್, ಕೋಟೆ ಹೊಂಡ ರವೀಂದ್ರ ಎ ಕ್ಯಾಟಗರಿ ನಕ್ಸಲ್ ಆಗಿದ್ದು, ನಕ್ಸಲ್ ಪ್ಯಾಕೆಜ್‌ನಲ್ಲಿ ಅವರಿಗೆ 7.50 ಲಕ್ಷ ರೂಪಾಯಿ ಸಿಗಲಿದೆ ಎಂದರು. ಈ ಪೈಕಿ ಮೊದಲ ಹಂತದಲ್ಲಿ ಮೂರು ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದ ಅವರು ಬಯಸಿದರೆ, ಕೋಟೆ ಹೊಂಡ ರವೀಂದ್ರರಿಗೆ ಕೌಶಲ್ಯ ತರಭೇತಿ ನೀಡಲಾಗುವುದೆಂದು ತಿಳಿಸಿದ್ದಾರೆ.
ಇನ್ನೂ ಕೊನೆಹಂತದ ನಕ್ಸಲ್‌ರನ್ನ ತಮ್ಮ ಅವಧಿಯಲ್ಲಿ ಸರೆಂಡರ್ ಮಾಡಿಸಿದ ಕೀರ್ತಿಯನ್ನು ತಮ್ಮದಾಗಿಸಿಕೊಂಡಿರುವ ಎಸ್‌ಪಿ ವಿಕ್ರಮ್ ಅಮಟೆ ಮಾತನಾಡ್ತಾ, ಕೋಟೆ ಹೊಂಡ ರವೀಂದ್ರ ವಿರುದ್ದ ಒಟ್ಟು 27 ಕೇಸ್ ಇದೆ ಎಂದಿದ್ದಾರೆ. ಅಲ್ಲದೆ ಕರ್ನಾಟಕ ನಕ್ಸಲ್ ಮುಕ್ತವಾಗಿದೆ ಎಂದರು. ಉಳಿದಂತೆ ಕೋಟೆ ಹೊಂಡ ರವೀಂದ್ರ ಮಾತನಾಡುತ್ತಾ ತಮ್ಮೂರಿಗೆ ರಸ್ತೆ ಆಗಬೇಕು, ಕಾಡಿನ ಉತ್ಪನ ತರಲು ಅಡ್ಡ ಬರಬಾರದು, ಜಮೀನಿಗೆ ಹಕ್ಕುಪತ್ರ ನೀಡಬೇಕು ಎಂದು ಷರತ್ತು ಹಾಕಿರುವುದಾಗಿ ತಿಳಿಸಿದರಷ್ಟೆ ಅಲ್ಲದೆ ತಮ್ಮಿಚ್ಚೆಯಂತೆ ಶರಣಾಗಿದ್ದು, ಇದರಲ್ಲಿ ಯಾರ ಬಲವಂತವಿಲ್ಲ ಎಂದಿದ್ದಾರೆ.
ತೊಂಬಟ್ಟು ಲಕ್ಷ್ಮೀ ಯಾರು?
ಈ ನಡುವೆ ನಕ್ಸಲ್ ಶರಣಾಗತಿಯ ಪ್ರಕಟಣೆಯಲ್ಲಿ ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕು ಮಚ್ಚಟ್ಟು ತೊಂಬಟ್ಟು ಗ್ರಾಮದ ಲಕ್ಷ್ಮೀ ಪೂಜಾರಿ ನಾಳೆ ಚಿಕ್ಕಮಗಳೂರು ಅಥವಾ ಉಡುಪಿ ಜಿಲ್ಲೆಯಲ್ಲಿ ಶರಣಾಗಲಿದ್ದಾಳೆ ಎಂಬ ಮಾಹಿತಿಯನ್ನು ನೀಡಲಾಗಿದೆ. ಈ ಬಗ್ಗೆ ವಿಚಾರ ಮಾಡಿದಾಗ ಲಕ್ಷ್ಮೀ ಅನೇಕವರ್ಷಗಳಿಂದಲೂ ಭೂಗತವಾಗಿದ್ದ ನಕ್ಸಲ್ ಆಗಿದ್ದಾಳೆ. ಆದರೆ ಮಂಡಗಾರು ಲತಾ, ವಿಕ್ರಂ ಗೌಡ ಟೀಂನ ರೀತಿಯಲ್ಲಿ ಹಾರ್ಡ್‌ಕೋರ್ ನಕ್ಸಲ್ ಆಗಿ ಲಕ್ಷ್ಮೀ ಹೆಸರು ಕೇಳಿಬಂದಿರಲಿಲ್ಲ. ಆಕೆ ಭೂಗತವಾಗಿದ್ದಳು ಎಂಬ ಮಾಹಿತಿ ಹೊರತುಪಡಿಸಿ ಹೆಚ್ಚಿನ ಮಾಹಿತಿ ಲ‍್ಯವಾಗಿಲ್ಲ
ನಕ್ಸಲರ ಆರೋಗ್ಯ ಪ್ರಶ್ನೆ
ಈ ನಡುವೆ ಶರಣಾಗಿರುವ ನಕ್ಸಲರನ್ನು ನಾನಾ ಆನಾರೋಗ್ಯ ಕಾಡುತ್ತಿರುವುದು ವೈದ್ಯಕೀಯ ತಪಾಸಣೆ ವೇಳೆ ಗೊತ್ತಾಗುತ್ತಿದೆ. ಮಂಡಗಾರು ಲತಾ ಮತ್ತವರ ತಂಡ ಶರಣಾದಾಗ ಅವರುಗಳ ಆರೋಗ್ಯವರದಿಯಲ್ಲಿ ಆರು ಮಂದಿ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವುದು ಗೊತ್ತಾಗಿದೆ. ಇನ್ನೂ ಲತಾ ಟೀಂ ನಿಂದ ತಪ್ಪಿಸಿಕೊಂಡಿದ್ದ ಕೋಟೆ ಹೊಂಡ ರವೀಂದ್ರ ಕೂಡ ಏಕಾಂಗಿಯಾಗಿ ಅಲೆಯುತ್ತಿದ್ದರಿಂದ ಶಾಂತಿಗಾಗಿ ನಾಗರಿಕರ ವೇದಿಕೆ ಆತನನ್ನು ಸಂಪರ್ಕಿಸುವುದು ತಡವಾಗಿದೆ. ಇದೀಗ ಶರಣಾಗಿರುವ ಆತನ ಆರೋಗ್ಯವು ಹದಗೆಟ್ಟಿರುವ ಬಗ್ಗೆ ಮಾಹಿತಿ ಇದೆ.
SUMMARY | Naxal Kote Honda Ravindra surrenders, thombattu lakshmi naxal
KEY WORDS | Naxal Kote Honda Ravindra, thombattu lakshmi naxal