SHIVAMOGGA | MALENADUTODAY NEWS | ಮಲೆನಾಡು ಟುಡೆ Dec 8, 2024
ಸೋಶಿಯಲ್ ಮೀಡಿಯಾದಿಂದ ಆರಂಭವಾಗುವ ಅನೈತಿಕ ಸಂಬಂಧಗಳು ಸಾವಿಗೆ ದಾರಿ ಮಾಡಿಕೊಡುತ್ತವೆ ಎನ್ನುವುದಕ್ಕೆ ಮತ್ತೊಂದು ಪ್ರಕರಣ ಸಾಕ್ಷಿಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ನಲ್ಲಿ ನಡೆದ ಘಟನೆಯೊಂದರಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿ ಪ್ರೀತಿಯಿಸಿ ವಿವಾಹಿತ ಮಹಿಳೆಯನ್ನು ಯುವಕನೊಬ್ಬ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಏನಿದು ಘಟನ
ಇಲ್ಲಿನ ಗ್ರಾಮವೊಂದಲ್ಲಿನ ನಿವಾಸಿ ತೃಪ್ತಿ ಎಂಬ 26 ವರ್ಷದ ಮಹಿಳೆಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದರು. ಈ ನಡುವೆ ಇನ್‌ಸ್ಟಾಗ್ರಾಮ್‌ನಲ್ಲಿ ಚನ್ನಗಿರಿಯ ಚಿರಂಜೀವಿ ಎಂಬಾತ ಪರಿಚಯವಾಗಿದ್ದ. ಇಬ್ಬರ ನಡುವೆ ಪ್ರೀತಿ ಬೆಳೆದು ಮನೆಯಿಂದ ಓಡಿ ಹೋಗಿದ್ದರು. ಆನಂತರ ತೃಪ್ತಿಯ ಪತಿ ನೀಡಿದ ಕಂಪ್ಲೆಂಟ್ ಆದರಿಸಿ ಪೊಲೀಸರು ತೃಪ್ತಿ ಹಾಗೂ ಚಿರಂಜೀವಿಯನ್ನ ವಿಜಯಪುರದಲ್ಲಿ ಪತ್ತೆ ಮಾಡಿ ಠಾಣೆಗೆ ಕರೆತಂದಿದ್ದರು. ಅಲ್ಲಿಂಧ ತೃಪ್ತಿ ಪುನಃ ತನ್ನ ಪತಿಯ ಜೊತೆಗೆ ತೆರಳಿದ್ದರು. ಮಕ್ಕಳನ್ನು ಬಿಟ್ಟು ಚಿರಂಜೀವಿ ಜೊತೆಗೆ ಹೋಗಿದ್ದ ತೃಪ್ತಿ ಆನಂತರ ಪುನಃ ಪತಿಯ ಜೊತೆಗೆ ಹೋಗಿ, ಚಿರಂಜೀವಿಯ ಸಂಪರ್ಕವನ್ನ ಸಂಪೂರ್ಣವಾಗಿ ಬಿಟ್ಟಿದ್ದಳು.
ಇತ್ತ ತನ್ನ ಸಂಪರ್ಕಕ್ಕೆ ತೃಪ್ತಿ ಬರುತ್ತಿಲ್ಲ ಎಂದು ಸಿಟ್ಟಿಗೆದ್ದ ಚಿರಂಜೀವಿ ಆಕೆಯ ಮನೆಗೆ ನುಗ್ಗಿ ಮಕ್ಕಳೆದುರೇ ಚಾಕುವಿನಿಂದ ಇರಿದು, ಆಕೆಯನ್ನ ಕೆರೆಗೆ ಎಸೆದು ಪರಾರಿಯಾಗಿದ್ದ. ಬಳಿಕ ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿಯನ್ನ ಅರೆಸ್ಟ್ ಮಾಡಿದ್ದು, ತನಿಖೆ ಮುಂದುವರಿಸಿದ್ದಾರೆ.
SUMMARY | Married woman met through Instagram murdered in Balehonnur, Chikkamagaluru district
KEY WORDS | Married woman murdered, Instagram, in Balehonnur, Chikkamagaluru district