ಆಟೋದಲ್ಲಿ ಸೇಲ್‌ ಆಗ್ತಿತ್ತು ಮಾಲು | ಶಾಕ್‌ ಕೊಟ್ಟ ಪೊಲೀಸರು |ಶಿವಮೊಗ್ಗದ ಇಬ್ಬರು ಅರೆಸ್ಟ್‌

13

SHIVAMOGGA | MALENADUTODAY NEWS | ಮಲೆನಾಡು ಟುಡೆ  Dec 30, 2024 ‌‌ 

ಚಿಕ್ಕಮಗಳೂರು ಜಿಲ್ಲೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಶಿವಮೊಗ್ಗದ ವ್ಯಕ್ತಿಗಳು ಅರೆಸ್ಟ್‌ ಆಗಿದ್ದಾರೆ. ಹೊಸವರ್ಷಾಚರಣೆ ವೇಳೆ ಮಾದಕ ವಸ್ತುಗಳ ಸೇಲ್‌ ಭರ್ಜರಿಯಾಗಿ ನಡೆಯುತ್ತದೆ. ಅದರಲ್ಲಿಯು ಮಲೆನಾಡಲ್ಲಿ ಈ ವಹಿವಾಟು ಮಾರಕವಾಗಿಯೇ ನಡೆಯುತ್ತಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಕೊಟ್ಟಿಗೆಹಾರ ವ್ಯಾಪ್ತಿಯಲ ಬಾಳೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಆಟೋವೊಂದರಲ್ಲಿ ಗಾಂಜಾ ಮಾರುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದಾರೆ. 

ಈ ವೇಳೆ ಶಿವಮೊಗ್ಗ ಪರ್ವೇಜ್‌ ಹಾಗೂ ಶ್ರೀನಿವಾಸ್‌ ಎಂಬವರನ್ನ ಬಂಧಿಸಿದ್ದಾರೆ. ಅಲ್ಲದೆ  195 ಗ್ರಾಂ ತೂಕದ ಗಾಂಜಾ ಸೊಪ್ಪು, ಸುತ್ತಲೂ ಬಳಸುವ ಟಿಪ್ಸ್, ಗಾಂಜಾ ಬಳಸುವ ಚಿಮಣಿ ಯನ್ನ ಜಪ್ತು ಮಾಡಿದ್ದಾರೆ. ಎನ್‌ಡಿಪಿಎಸ್‌ ಆಕ್ಟ್‌ ಅಡಿ ಕೇಸ್‌ ದಾಖಲಿಸಲಾಗಿದೆ.

SUMMARY | Auto attacked near Kottigehara, ganja seized, two arrested from Shivamogga

KEY WORDS |Auto attacked near Kottigehara, ganja seized, two arrested from Shivamogga

Share This Article