SHIVAMOGGA| MALENADUTODAY NEWS | ಮಲೆನಾಡು ಟುಡೆ Mar 19, 2025
ಶಿವಮೊಗ್ಗ ಕೋರ್ಟ್ ಆವರಣದಲ್ಲಿ ಟೂಲ್ಸ್ ಜೊತೆಗೆ ಬಂದಿದ್ದ ನಾಲ್ವರ ವಿರುದ್ಧ ಶಿವಮೊಗ್ಗ ಪೊಲೀಸರು ಸುಮುಟೋ ಕೇಸ್ ದಾಖಲಿಸಿ ಅರೆಸ್ಟ್ ಮಾಡಿದ್ದಾರೆ.
ಏನಿದು ಪ್ರಕರಣ
ಶಿವಮೊಗ್ಗದ ಕೋರ್ಟ್‌ನಲ್ಲಿ ಹಂದಿ ಅಣ್ಣಿ ಕೊಲೆ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಕೋರ್ಟ್ ಆವರಣದಲ್ಲಿ ಇವರ ಮೇಲೆ ಪ್ರತಿಕಾರದ ಹಲ್ಲೆ ನಡೆಯುವ ಸಾಧ್ಯತೆಗಳ ಬಗ್ಗೆ ರೌಡಿ ವಲಯದಲ್ಲಿನ ಪುಕಾರುಗಳನ್ನು ನಂಬಿರುವ ಪೊಲೀಸ್ ಇಲಾಖೆ ಕೊಲೆ ಆರೋಪಿಗಳ ವಿಚಾರಣೆ ವೇಳೆ ಅವರಿಗೆ ರಕ್ಷಣೆ ನೀಡುತ್ತಿದೆ. ಅದೇ ರೀತಿಯಲ್ಲಿ ಸೋಮವಾರವೂ ಆರೋಪಿಗಳಿಗೆ ರಕ್ಷಣೆ ಒದಗಿಸಲಾಗಿತ್ತು. ಈ ವೇಳೆ ಕೋರ್ಟ್ ಆವರಣದಲ್ಲಿ ಹೋಗಿ ಬಂದು ಮಾಡುವ ವಾಹನಗಳನ್ನು ಪೊಲೀಸರು ತಪಾಸಣೆ ಮಾಡುತ್ತಿದ್ದರು.
ಆಗ ಅಲ್ಲಿಗೆ ಬಂದ ಪ್ಲಾಟಿನಂ ವೆಹಿಕಲ್‌ನ್ನು ಪೊಲೀಸರು ತಪಾಸಣೆ ಮಾಡಿದ್ದರು. ಅದರಲ್ಲಿದ್ದ ಮಲ್ಲೇಶ್, ಬಜಾಜ್ ಫೈನಾನ್ಸ್ ನಲ್ಲಿ ಕೆಲಸ, ವಿನೋಬ ನಗರ 60 ಅಡಿ ರಸ್ತೆಯಲ್ಲಿ ವಾಸ, ರಾಕೇಶ್ , ಕಾಶೀಪುರ ವಾಸ, ಗುರುಮೂರ್ತಿ, ಮೇದಾರ ಕೇರಿ ನಿವಾಸ ಹಾಗೂ ವಿನಯ್ ಕಾಶಿಪುರ, ಕಾರ್ಪೆಂಟರ್ ಕೆಲಸ, ಇವರು ಅನುಮಾನಸ್ಪದವಾಗಿ ವರ್ತಿಸಿದ್ದಾರೆ. ಹೀಗಾಗಿ ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಮಲ್ಲೇಶ್ ಬಳಿ ಚಾಕು ಸಿಕ್ಕಿದೆ. ಕೋರ್ಟ್ ಆವರಣದ ಸಮೀಪ ಟೂಲ್ಸ್ ತಂದ ಆರೋಪ ಹಾಗೂ ಅನುಮಾಸ್ಪದವಾಗಿ ವರ್ತಿಸಿದ ಆರೋಪ ಸೇರಿದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಆರೋಪಿಗಳನ್ನ ವಶಕ್ಕೆ ಪಡೆದು ಅವರುಗಳ ವಿರುದ್ದ ಇದೀಗ ಸುಮುಟೋ ಕೇಸ್ ದಾಖಲಿಸಿದ್ದಾರೆ.