SHIVAMOGGA | MALENADUTODAY NEWS | ಮಲೆನಾಡು ಟುಡೆ Dec 7, 2024
ಕೆಲದಿನ ತಣ್ಣಗಾಗಿದ್ದ ಸಾಗರ ತಾಲ್ಲೂಕಿನ ಹಾಲಿ ಮಾಜಿ ಶಾಸಕರ ನಡುವಿನ ಶೀತಲ ಸಮರ ಮತ್ತೆ ಆರಂಭವಾದಂತಿದೆ.ಈ ನಡುವೆ ಮಾಜಿ ಸಚಿವ ಹಾಲಪ್ಪ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದವರಿಗೆ ಒಂದು ನ್ಯಾಯ, ಇತರರಿಗೆ ಒಂದು ನ್ಯಾಯ ಇದೆ ಎಂದು ಆರೋಪಿಸಿ ಎಸ್‌ಪಿ ಮಿಥುನ್ ಕುಮಾರ್ ರವರ ಬಳಿ ದೂರು ಹೇಳಿಕೊಂಡಿದ್ದಾರೆ.
ಸಾಗರ ತಾಲ್ಲೂಕಿನಲ್ಲಿ ಮರುಳು ಮಾಫಿಯಾ ಮಿತಿ ಮೀರಿದ್ದು, ಕಾಂಗ್ರೆಸ್ ಕಾರ್ಯಕರ್ತರಿಗೆ ಮತ್ತು ಶಾಸಕರ ಬೆಂಬಲಿಗರಿಗೆ ಏನಾದರೂ ವಿನಾಯಿತಿ ಇದೆಯಾ ಎಂದು ಪ್ರಶ್ನಿಸಿದ ಅವರು ಪೊಲೀಸರು ಶಾಸಕರ ಅಣತಿಯಂತೆ ಕಾನೂನು ಬಾಹಿರವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು. ಶರಾವತಿ ನದಿ ತಟದಲ್ಲಿ ಮೂರು ವರ್ಷದಿಂದ ಆಯ್ದಜನರು ಮಾತ್ರಸಾಗಾಟ ಮಾಡುತ್ತಿದ್ದಾರೆ. ಇತರರಿಗೆ ಅರಣ್ಯ ಇಲಾಖಾ ಸಿಬ್ಬಂದಿ ಮತ್ತು ತಹಶಿಲ್ದಾರರ ಮೂಲಕ ತಡೆಯೊಡ್ಡುತ್ತಿದ್ದು, ಇಂತಹವರು ತಗಂಡು ಹೋಗಬಾರದು ಎಂದು ಕಟ್ಟಪ್ಪಣೆ ಮಾಡಿದ್ದಾರೆ. ಮರಳು ಮಾಫಿಯಾದಲ್ಲೂ ಕೂಡ ಪಾರ್ಟಿ ಹಾಗೂ ಒಳ ಪಾರ್ಟಿ ಆಗಿದ್ದು, ಪೊಲೀಸ್ ಕೆಳ ಹಂತದ ಸಿಬ್ಬಂದಿ ಬಳಕೆ ಮಾಡಿ ಸ್ಥಳೀಯ ಪುಡಾರಿಗಳಿಂದ ಮರಳು ಅನಧಿಕೃತವಾಗಿ ಎಗ್ಗಿಲ್ಲದೆ ಸಾಗಾಟ ಮಾಡಲಾಗುತ್ತಿದೆ. ಇನ್ನೂ ಜಂಬಿಟ್ಟಿಗೆ ಕ್ವಾರಿ ವಿಚಾರದಲ್ಲಿ ಕೆಲವರು ರಾಯಲ್ಟಿ ಕಟ್ಟುತ್ತಿಲ್ಲ ಎಂದ ಹಾಲ್ಲಪ್ಪನವರು ಆನಂದಪುರ, ರಿಪ್ಪನ್ ಪೇಟೆ, ನಗರ ಪೊಲೀಸ್‌ರು ತಮಗೆ ಪ್ರಿಯರಾದವರಿಗೆ ಮಾತ್ರ ಈ ವಿಚಾರದಲ್ಲಿ ಬಿಡುತ್ತಿದ್ದು, ಬೇರೆಯವರಿಗೆ ತಡೆಯೊಡ್ಡುತ್ತಿದ್ದಾರೆ ಎಂದು ದೂರಿದರು.
ಜಿಲ್ಲಾರಕ್ಷಣಾಧಿಕಾರಿಗಳಿಗೆ ಮರಳು ಮತ್ತು ಜಂಬಿಟ್ಟಿಗೆ ಸಾಗಾಟದ ಬಗ್ಗೆ ಪೊಲೀಸ್ ತಾರತಮ್ಯದ ಬಗ್ಗೆ ಮಾಹಿತಿ ನೀಡಿದ್ದೇನೆ ಎಂದ ಹರತಾಳು ಹಾಲಪ್ಪ ಸಾಗರದಲ್ಲಿ ಬಡ್ಡಿ ಮಾಫೀಯಕ್ಕೆ ಒಬ್ಬ ಬಲಿಯಾಗಿದ್ದಾರೆ. ಪೊಲೀಸರು ಮೌನಕ್ಕೆ ಶರಣಾಗಿದ್ದಾರೆ ಎಂದರು. ಎಂದರು. ಸಾಗರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಮೀಟರ್ ಬಡ್ಡಿ ಪ್ರಕರಣ. ದೂರು ಕೊಟ್ಟರೆ ಪೊಲೀಸರು ಬೈದು ಕಳಿಸಿದ್ದಾರೆ. ಮೀಟರ್ ಬಡ್ಡಿ ಕೊಟ್ಟವರ ಪರವಾಗಿ ಬಡ್ಡಿಗೆ ಹಣ ಪಡೆದವನ ಹತ್ತಿರ ಎಪ್ಪತ್ತು ಲಕ್ಷಕ್ಕೆ ಆತನ ಜಮೀನು ಮಾರಾಟ ಮಾಡಿಸಿದ್ದಾರೆ. ಆತ ಜಮೀನು ಕಳೆದುಕೊಂಡು ವಿಷ ಸೇವನೆ ಮಾಡಿ ಮೃತಪಟ್ಟಿದ್ದಾನೆ. ಇದುವರೆಗೂ ಯಾರನ್ನು ಬಂಧಿಸಿಲ್ಲ. ಎಫ್‌ಐಆರ್ ಹಾಕಿಲ್ಲ, ಈಗ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಮೇಲೆ ಪೊಲೀಸರು ಆರೋಪಿಗಳನ್ನು ಹುಡುಕುತ್ತಿದ್ದಾರೆ ಎಂದು ದೂರಿದರು
SUMMARY |Haratalu Halappa complains to SP about sand quarrying, jambitige quarry and meter interest in Sagar taluk
KEY WORDS | Haratalu Halappa complains to SP about sand quarrying, jambitige quarry and meter interest in Sagar taluk