ಅಯ್ಯೋ | ಚಿರತೆಯ ಬೋನಿಗೆ ಬಿದ್ದ ಯುವಕ | ವಿಡಿಯೋ ಮಾಡಲು ತೆರಳುತ್ತಿದ್ದಾಗ ಯೂಟ್ಯೂಬರ್‌ ಮೇಲೆ ಆನೆ ದಾಳಿ

13

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 17, 2025 ‌‌ 

ವನ್ಯಜೀವಿ ವಿಚಾರದಲ್ಲಿ ನಡೆದ ಎರಡು ಘಟನೆಗಳು ಸದ್ಯ ಕುತೂಹಲ ಹಾಗೂ ಅಚ್ಚರಿ ಮೂಡಿಸುತ್ತಿದೆ. ಚಿಕ್ಕಮಗಳೂರುನಲ್ಲಿ ನಡೆದ ಘಟನೆಯೊಂದರಲ್ಲಿ ವಿಡಿಯೋ ಸ್ಟೋರಿ ಮಾಡಲು ತೆರಳಿದ್ದ ಯೂಟ್ಯೂಬರ್‌ ಒಬ್ಬನ ಮೇಲೆ ಕಾಡಾನೆ ದಾಳಿ ಮಾಡಿದೆ. ಇನ್ನೊಂದೆಡೆ ಚಾಮರಾಜನಗರ ದಲ್ಲಿ ಚಿರತೆ ಸೆರೆಗೆ ಇಟ್ಟಿದ್ದ ಬೋನ್‌ನೊಳಗೆ ಮನುಷ್ಯನೇ ಸೆರೆಯಾಗಿದ್ದಾನೆ. 

ಆನೆ ದಾಳಿಗೆ ಸಿಕ್ಕು ಪರದಾಡಿದ ಯೂಟ್ಯೂಬರ್‌

ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಈ ಘಟನೆ ನಡೆದಿದೆ. ಇಲ್ಲಿ ಬಿದಿರುತಳ ಗ್ರಾಮದ ಸ್ಟೋರಿ ಮಾಡಲು  ಚನ್ನರಾಯಪಟ್ಟಣ ಮೂಲದ ಯೂಟ್ಯೂಬರ್ ಅಭಿಷೇಕ್ ಬಂದಿದ್ದರು. ರಸ್ತೆಯಿಲ್ಲದ ಕಾರಣಕ್ಕೆ ಕಾಡಿನ ಹಾದಿಯಲ್ಲಿ ಅವರು ತೆರಳುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಅವರ ಮೇಲೆ ಕಾಡಾನೆ ದಾಳಿ ಮಾಡಿದೆ. ಇದರಿಂದ ಬೆದರಿದ ಅವರು ತಪ್ಪಿಸಿಕೊಳ್ಳುವಾಗ ಕಂದಕಕ್ಕೆ ಬಿದ್ದಿದ್ದಾರೆ. ಪರಿಣಾಮ ಕಾಡಾನೆಯಿಂದ ಅವರು ಬಚಾವ್‌ ಆದರೂ ಸಹ ಕಂದಕ್ಕೆ ಬಿದ್ದು ಮೈ, ಕೈ, ಮುಖಕ್ಕೆ ಗಾಯಮಾಡಿಕೊಂಡಿದದ್ದಾರೆ. 

ಬೋನಿಗೆ ಬಿದ್ದ ಮಾನವ 

ಇತ್ತ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಪಡಗೂರು ಗ್ರಾಮದಲ್ಲಿ ಚಿರತೆಗಾಗಿ ಇಟ್ಟಿದ್ದ ಬೋನಿನಲ್ಲಿ ಯುವಕನೊಬ್ಬ ಸೆರೆಯಾದ ವಿಚಿತ್ರ ಘಟನೆಯೊಂದು ನಡೆದಿದೆ. ಚಿರತೆಯೊಂದನ್ನ ಸೆರೆ ಹಿಡಿಯುವ ಸಲುವಾಗಿ ಅರಣ್ಯ ಇಲಾಖೆ ಇಲ್ಲಿನ ನಿವಾಸಿಯೊಬ್ಬರ ಹೊಲದಲ್ಲಿ ಬೋನು ಇಟ್ಟಿತ್ತು. ಅಲ್ಲದೆ ಚಿರತೆಯನ್ನು ಹಿಡಿಯುವ ಸಲುವಾಗಿ ಬೇಟೆಯ ರೂಪದಲ್ಲಿ ಕರುವನ್ನು ಬೋನಿನೊಳಗೆ ಇರಿಸಿದ್ದರು. ಆದರೆ ಈ ಬೋನಿನಲ್ಲಿ ಹನುಮಯ್ಯ ಎಂಬಾತ ಸಿಕ್ಕಿಬಿದ್ದಿದ್ದಾನೆ. ಸ್ಥಳೀಯರ ಪ್ರಕಾರ, ಕರುವನ್ನು ನೋಡಲು ಹೋದಾಗ ಯುವಕ ಬೋನಿನೊಳಗೆ ಸೆರೆಯಾಗಿದ್ದಾನೆ ಎನ್ನಲಾಗಿದೆ. ಈತ ಬೋನಿನಲ್ಲಿ ಆರು ಗಂಟೆ ಹೊತ್ತು ಕಳೆದಿದ್ದಾನೆ. ಆ ಬಳಿಕ ಸ್ಥಳೀಯರು ಈತನನ್ನು ಗಮನಿಸಿ ಅರಣ್ಯ ಸಿಬ್ಬಂದಿಯನ್ನು ಕರೆಸಿ ಬೋನಿನಿಂದ ಯುವಕನನ್ನ ಆಚೆ ಕರೆತಂದಿದ್ದದಾರೆ. 

 

SUMMARY |   Chikkamagaluru, Charmadi Ghat, Mudigere, Kottighara, Chamaraja Nagar, Gundlupet, leopard attack, Tumkur model trap, elephant attack, man caught in a trap

KEY WORDS |  Chikkamagaluru, Charmadi Ghat, Mudigere, Kottighara, Chamaraja Nagar, Gundlupet, leopard attack, Tumkur model trap, elephant attack, man caught in a cage

Share This Article