ಅಪಘಾತ ಮಾಡಿ ಮತ್ತೊಂದು ರೌಂಡ್‌ ಎಂದು ಕೂಗಿದ ಯುವಕ | ಮಹಿಳೆ ಸಾವು ವಿಡಿಯೋ ವೈರಲ್

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 15, 2025

ಉತ್ತರ ಪ್ರದೇಶ | ಮದ್ಯಪಾನ ಮಾಡಿದ ಯುವಕನೊಬ್ಬ ವೇಗವಾಗಿ ಕಾರು ಚಲಾಯಿಸಿ ಮಹಿಳೆಗೆ ಡಿಕ್ಕಿ ಹೊಡೆದಿದ್ದು ಅಷ್ಟೇ ಅಲ್ಲದೆ ಇನ್ನೋಂದು ರೌಂಡ್‌ ಎಂದು ಕೂಗಿರುವ ಘಟನೆ ಉತ್ತರ ಪ್ರದೇಶದ ವಡೋದರಾದಲ್ಲಿ ನಡೆದಿದೆ.  ಈ ಅಪಘಾತದಲ್ಲಿ ಮಹಿಳೆ ಸಾವನ್ನಪ್ಪಿದ್ದು ಯುವಕನ ಅತಿರೇಕದ ವರ್ತನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.



ನಗರ ಕರೇಲಿಬಾಗ್‌ ಪ್ರದೇಶದಲ್ಲಿ ಯುವಕನೊಬ್ಬ ಕಂಠಪೂರ್ತಿ ಕುಡಿದು ಸುಮಾರು 100 ಕಿಲೋಮೀಟರ್‌ ಸ್ಪೀಡ್‌ನಲ್ಲಿ ಕಪ್ಪು ಬಣ್ಣದ ಕಾರನ್ನು ಚಲಾಯಿಸಿದ್ದಾನೆ. ಆ ವೇಳೆ ಆತನ ಕಾರು ನಿಯಂತ್ರಣ ತಪ್ಪಿ  ಪಕ್ಕದಲ್ಲಿದ್ದ ಮಹಿಳೆ ಸೇರಿದಂತೆ ಇನ್ನಿತರ ಸಾರ್ವಜನಿಕರಿಗೆ ಡಿಕ್ಕಿ ಹೊಡೆದಿದೆ. ಈ ಅಫಘಾತದಿಂದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಆ ಯುವಕ ಹೊರಬಂದು ಮತ್ತೊಂದು ಮತ್ತೊಂದು ರೌಂಡ್‌,  ಓಂ ನಮಃ ಶಿವಾಯ ಎಂದು ಕೂಗಿದ್ದಾನೆ. ಯುವಕನ ಈ ವರ್ತನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

SUMMARY | In a shocking incident, a drunk youth in Uttar Pradesh’s Vadodara allegedly rammed into a woman and shouted “another round”.

KEYWORDS |  Uttar Pradesh, Vadodara, accident, woman died, 

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು