SHIVAMOGGA | MALENADUTODAY NEWS | ಮಲೆನಾಡು ಟುಡೆ Feb 4, 2025
ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಿಕ್ಷಣ ಸಚಿವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಈ ಸಲ ಗ್ರೇಡ್ ಮಾರ್ಕ್ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದರ ಬೆನ್ನಲ್ಲೆ ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕು ಕಾಸ್ಪಾಡಿಕೊಪ್ಪದಲ್ಲಿ ನಡೆದ ಕಾರ್ಯಕ್ರಮವೊಂದಲ್ಲಿ ಮಾತನಾಡಿದ ಅವರು ಅತಿಥಿ ಶಿಕ್ಷಕರ ವೇತನ ಪರಿಷ್ಕರಣೆ ಸಂಬಂಧ ಚಿಂತನೆ ಮಾಡಲಾಗುತ್ತಿದೆ ಎಂದಿದ್ದಾರೆ. ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ಹಲವು ಪ್ರಯತ್ನಗಳನ್ನು ಕೈಗೊಳ್ಳಲಾಗುತ್ತಿದ್ದು, 45 ಸಾವಿರ ಕೋಟಿ ರೂಪಾಯಿ ಸಿಎಸ್‌ಆರ್ ಫಂಡ್ ತರುವ ಮೂಲಕ ದೇಶದಲ್ಲಿಯೇ ಮುಂಚೂಣಿಯಲ್ಲಿದ್ದೇವೆ ಎಂದಿದ್ದಾರೆ.
ಹಿಂದಿನ ಸರಕಾರ ಅನುದಾನ ಮೀಸಲಿಡದೆ ರೂಪಿಸಿದ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಲು ಕಾಂಗ್ರೆಸ್ ಸರ್ಕಾರ 47 ಸಾವಿರ ಕೋಟಿ ಅನುದಾನ ಭರಿಸಿದೆ. ಗ್ಯಾರಂಟಿ ಯೋಜನೆಗಳ ಜತೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೂ ಚಾಲನೆ ನೀಡಲಾಗಿದೆ ಎಂದಿದ್ದಾರೆ.
ಇದರ ನಡುವೆ ಸಾರ್ವಜನಿಕ ಶಿಕ್ಷಣ ಇಲಾಖೆ ಅತಿಥಿ ಶಿಕ್ಷಕರಿಗೆ ಸಂಬಂಧಿಸಿದ ಗೌರವ ಧನ ಬಿಡುಗಡೆ ಮಾಡಿದೆ. ಇಲಾಖಾ ವ್ಯಾಪ್ತಿಯ ಸರ್ಕಾರಿ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರುಗಳಿಗೆ ನವೆಂಬರ್-2024, ಡಿಸೆಂಬರ್-2024 ಮತ್ತು ಜನವರಿ -2025ರ ಮಾಹೆಯ ಗೌರವಧನ ಪಾವತಿಗಾಗಿ ಉಲ್ಲೇಖ (01) ಮತ್ತು (02) ರ ಆದೇಶದನ್ವಯ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
SUMMARY | Release of honorarium for guest lecturers, In-charge Minister Madhu Bangarappa, Education Minister Madhu Bangarappa,
KEY WORDS | Release of honorarium for guest lecturers, In-charge Minister Madhu Bangarappa, Education Minister Madhu Bangarappa,