ಅ‍ಣ್ಣನಿಗೆ ಸಾಥ್‌ ಕೊಟ್ಟಿದ್ದರು , ತಮ್ಮನಿಗೆ ಸವಾಲ್‌ ಹಾಕಿದರು | ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಖಚಿತವೆಂದ ಕುಮಾರ್‌ ಬಂಗಾರಪ್ಪ

13

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 22, 2025 ‌‌ 

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರರಿಗೆ ಇದೀಗ ಶಿವಮೊಗ್ಗದಿಂದಲೆ ಬಲವಾದ ಪೈಫೋಟಿ ಎದುರಾಗುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷದ ಸ್ಥಾನದ ಚುನಾವಣೆಗೆ ತಮ್ಮ ಕಡೆಯಿಂದ ನಾಮಪತ್ರ ಸಲ್ಲಿಸುವುದು ನಿಕ್ಕಿ ಎಂದು ಕುಮಾರ್‌ ಬಂಗಾರಪ್ಪ ಹೇಳಿದ್ದಾರೆ. ಬಸನ ಗೌಡ ಪಾಟೀಲ್‌ ಯತ್ನಾಳ್‌ರವರ ಬಣದಲ್ಲಿ ಗುರುತಿಸಿಕೊಂಡಿರುವ ಅವರು ಇವತ್ತು ಈ ಬಗ್ಗೆ ಬೆಂಗಳೂರಿನಲ್ಲಿ ಸ್ಟೇಟ್‌ ಮೀಡಿಯಾಗಳ ಜೊತೆ ಮಾತನಾಡಿದ್ದಾರೆ. 

ಈ ಸಲ ರಾಜ್ಯಾಧ್ಯಕ್ಷರ ಬದಲಾವಣೆ ನೂರಕ್ಕೆ ನೂರು ಆಗುತ್ತದೆ ಎಂದಿರುವ ಅವರು, ರಾಜ್ಯದ ಬೆಳವಣಿಗೆಗಳ ಬಗ್ಗೆ ಹೈಕಮಾಂಡ್‌ಗೆ ಮಾಹಿತಿಯನ್ನು ನೀಡಲಾಗಿದೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದು ಖಚಿತ ಎಂದಿರುವ ಅವರು, ಚುನಾವಣಾ ಉಸ್ತುವಾರಿ ಶಿವರಾಜ್‌ ಸಿಂಗ್‌ ಚೌಹಾಣ್‌ ರಾಜ್ಯಕ್ಕೆ ಬರಬೇಕು, ಚುನಾವಣೆ ವೇಳಾಪಟ್ಟಿ ನಿಗದಿಯಾಗಬೇಕು, ತದನಂತರ ಮುಂದಿನ ವಿಚಾರ ತಿಳಿಯುವುದು ಎಂದಿದ್ದಾರೆ. 

ಚುನಾವಣೆ ನಡೆಯತ್ತದೆ ಎನ್ನುವದಾದರೆ, ನಾಮಪತ್ರೆ ಸಲ್ಲಿಕೆ ಮಾಡುತ್ತೇವೆ. ತಮಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದರೆ ಹುದ್ದೆಯನ್ನು ನಿಭಾಯಿಸುತ್ತೇನೆ ಎಂದಿದ್ದಾರೆ. ಮೇಲಾಗಿ ತಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ಚುನಾವಣೆ ನಡೆಯುವರೆಗೂ ನಮ್ಮ ವಾದ ಇದೇ ರೀತಿಯಿರುತ್ತದೆ. ಯತ್ನಾಳ್‌ರವರ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದು ಕುಮಾರ್‌ ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.

SUMMARY | kumar bangarappa reacts by vijayendra politics

KEY WORDS |‌  kumar bangarappa, by vijayendra , politics

 

Share This Article