SHIVAMOGGA | MALENADUTODAY NEWS | ಮಲೆನಾಡು ಟುಡೆ Jan 23, 2025
ನಿನ್ನೆ ದಿನ ಶಂಕರಘಟ್ಟದಲ್ಲಿರುವ ಕುವೆಂಪು ವಿವಿ ಹಾಗೂ ಸಾಗರದ ಇರುವಕ್ಕಿಯಲ್ಲಿರುವ ಶಿವಪ್ಪನಾಯಕ ಕೃಷಿ ತೋಟಗಾರಿಕೆ ವಿವಿ ಘಟಿಕೋತ್ಸವ ಯಶಸ್ವಿಯಾಗಿದೆ. ನಡೆದಿದೆ. ಈ ಘಟಿಕೋತ್ಸವದಲ್ಲಿ ಅಪರೂಪದ ಸಾಧನೆ ಮಾಡಿದ ಇಬ್ಬರ ವಿವರ ಹೀಗಿದೆ.
ಕುವೆಂಪುವಿ ಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಕೂಲಿ ಕಾರ್ಮಿಕರ ಮಗ ಒಬ್ಬರು ಅತ್ಯಧಿಕ ಚಿನ್ನದ ಪದಕ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ. ಚಿಕ್ಕಮಗಳೂರು ತಾಲೂಕು ಭೈರನಮಕ್ಕಿ ಎಂಬ ಗ್ರಾಮದ ಜಗದೀಶ್ – ಸುಜಾತ ದಂಪತಿಯ ಪುತ್ರ ಬಿ.ಜೆ.ವಸಂತ ಕುಮಾರ್ ಕುವೆಂಪು ವಿವಿ ವಿಭಾಗದಲ್ಲಿ ಅತ್ಯಧಿಕ ಅಂಕ ಗಳಿಸಿದ್ದರಿಂದ10 ಚಿನ್ನದ ಪದಕಗಳನ್ನು ಪಡೆದಿದ್ದಾರೆ.
ತಮ್ಮ ಒಂದೊಂದು ಅಂಕಗಳಲ್ಲಿಯೂ ಪಾಲಕರ ಬೆರವಿನ ಹನಿ ಇದೆ ಎನ್ನುವ ವಸಂತಕುಮಾರ್, ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂದು ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ ತಂದೆಯ ಶ್ರಮದಿಂದಲೇ ಇಷ್ಟೆಲ್ಲಾ ಸಾಧನೆ ಮಾಡಲು ಸಾಧ್ಯವಾಯಿತು ಎಂದಿದ್ದಾರೆ. ಇದೇ ತಮ್ಮ ಅಜ್ಜನಿಗೆ ಚಿನ್ನದ ಪದಕ ಗೆಲ್ಲುವ ಕನಿಸ್ಸಿತ್ತು. ಆದರೆ ಅದು ಅವರಿಂದ ಸಾಧ್ಯವಾಗಲಿಲ್ಲ. ಎಂಎ ಪೂರೈಸಿದ್ದ ಅವರ ಬಳಿಕ ತಮ್ಮ ತಂದೆ 7 ಕ್ಲಾಸ್ನ ನಂತರ ಓದಲಾಗಲಿಲ್ಲ. ಇದೀಗ ಅಜ್ಜನ ಕನಸ್ಸು ನನಸ್ಸು ಮಾಡಿರುವ ಸಂತೋಷ ವಿದೆ ಎಂದಿದ್ದಾರೆ.
ಇದು ಕುವೆಂಪು ವಿವಿ ವಿದ್ಯಾರ್ಥಿ ಸಾಧನೆಯ ಕಥೆಯಾದರೆ, ಇತ್ತ ಕೃಷಿ ವಿವಿಯಲ್ಲಿ ಅಡುಗೆ ಭಟ್ಟರ ಪುತ್ರಿಗೆ 4 ಚಿನ್ನದ ಪದಕ ಲಭಿಸಿದೆ. ಶಿವಮೊಗ್ಗ ರವೀಂದ್ರ ನಗರದ ಗಣಪತಿ ದೇವಸ್ಥಾನದ ಅಡುಗೆ ಭಟ್ಟರಾದ ಸುರೇಶ್ ಸುಧಾ ದಂಪತಿ ಪುತ್ರಿ ಎನ್.ಎಸ್.ಸಂಜೀತಾ ಅವರು 2022-23ನೇ ಸಾಲಿನ ನಾಲ್ಕು ಪದಕ ಪಡೆದಿದ್ದಾರೆ.
ಕಾಶಿಪುರದ ಸಂಜೀತಾ ಜಿಕೆವಿಕೆಯ ಚಿಂತಾಮಣಿ ಕ್ಯಾಂಪಸ್ನಲ್ಲಿ ಕೃಷಿ ಕೀಟ ಶಾಸ್ತ್ರದಲ್ಲಿ ಎಂಎಸ್ಸಿ ಪದವಿ ಪಡೆದಿದ್ದಾರೆ. ಮುಂದೆ ಪಿ.ಎಚ್ಡಿ ಮಾಡುವ ಗುರಿ ಹೊಂದಿದ್ದಾರೆ. ರೈತರಿಗೆ ಒಳ್ಳೆಯದನ್ನು ಮಾಡುವ ಗುರಿ ಹೊಂದಿದ್ದಾರೆ.
SUMMARY | Kuvempu University Convocation 9th Convocation held at Keladi Shivappanayaka University of Agriculture and Horticulture Sciences
KEY WORDS | Kuvempu University Convocation , Keladi Shivappa Nayaka University of Agriculture and Horticulture Sciences Convocation
