SHIVAMOGGA| MALENADUTODAY NEWS | ಮಲೆನಾಡು ಟುಡೆ Apr 5, 2025
ಕಾರ್ಯಕ್ರಮಕ್ಕೆ ಪಾತ್ರೆಗಳನ್ನು ಕೊಟ್ಟಿದ್ದಕ್ಕೆ ಊರಿನವರು ಬಹಿಷ್ಕಾರ ಹಾಕಿ ಮಾತುಕತೆ ನಡೆಸ್ತಿಲ್ಲ ಎಂಬ ಆರೋಪವೊಂದು ತೀವ್ರು ಕುತೂಹಲ ಹಾಗೂ ಚರ್ಚೆ ಹುಟ್ಟುಹಾಕಿದೆ.
ಚಿಕ್ಕಮಗಳೂರು ತಾಲ್ಲೂಕು ಮುಳ್ಳುವಾರೆಯಲ್ಲಿ ಇಂತಹದ್ದೊಂದು ಘಟನೆ ನಡೆದಿದೆ ಅಂತಾ ರಾಜ್ಯದ ಟಿವಿಗಳು ವರದಿ ಮಾಡಿವೆ. ಟಿವಿ ವರದಿಗಳ ಪ್ರಕಾರ, ಇಲ್ಲಿನ ಮುಳ್ಳುವಾರೆ ಗ್ರಾಮದ ನಿವಾಸಿ ಬೈರಪ್ಪ ಎಂಬವರು ಊರಿನ ಮುಖಂಡರಾಗಿದ್ದರು. ಊರು ಉಸಾಬರಿ ಹೊತ್ತಿದ್ದ ಇವರು ಮಾಡಿದ ತಪ್ಪು ಅಂದರೆ, ಪಕ್ಕದ ಊರಿನ ಮದುವೆ ಕಾರ್ಯಕ್ರಮಕ್ಕೆ ಅಡಿಗೆ ಪಾತ್ರೆಗಳನ್ನು ನೀಡಿದ್ದು.
ನೆರೆಯೂರು ಕೇಸರಿಕೆ ಗ್ರಾಮದಲ್ಲಿ ಒಂದು ದಿನ ಮೂರು ಮೂರು ಮದುವೆ ನಿಶ್ಚಯವಾಗಿತ್ತು. ಈ ಗಡಿಬಿಡಿಯಲ್ಲಿ ಅಡುಗೆ ಪಾತ್ರೆಗಳು ಕಡಿಮೆ ಬಿದ್ದು ಒಂದು ಮನೆಯವರು ಮುಳ್ಳುವಾರೆ ಊರಿನ ಮುಖಂಡ ಬೈರಪ್ಪನ ಬಳಿ ಅಡುಗೆ ಪಾತ್ರೆಗಳನ್ನು ನೀಡುವಂತೆ ಕೇಳಿದ್ದರು. ಅದರಂತೆ ಬೈರಪ್ಪ ಅವರಿಗೆ ಪಾತ್ರೆಗಳನ್ನು ಕೊಟ್ಟು ಬಳಿಕ ಲೆಕ್ಕ ತೆಗೆದುಕೊಂಡು ವಾಪಸ್ ಪಡೆದಿದ್ದರು. ಆದರೆ ಹಳ್ಳಿಯವರು ದುಡ್ಡು ಹಾಕಿ ತಂದ ಅಡುಗೆ ಪಾತ್ರೆಗಳನ್ನು ಪರವೂರಿನವರಿಗೆ ಏಕೆ ಕೊಟ್ರು ಎಂದು ಊರಿನವರು ಬೈರಪ್ಪರಿಗೆ 6 ಸಾವಿರ ರೂಪಾಯಿ ದಂಡ ಹಾಕಿದರಂತೆ. ಅಲ್ಲದೆ ಬೈರಪ್ಪನ ಮನೆಗೆ ಯಾರು ಹೋಗಬಾರದು, ಅವರ ಕುಟುಂಬವನ್ನು ಯಾರು ಮಾತನಾಡಿಸಬಾರದು ಎಂದು ಬಹಿಷ್ಕಾರ ಹಾಕಿದ್ದಾರೆ ಎಂಬುದು ಬೈರಪ್ಪರ ಆರೋಪ. ಸದ್ಯ ಈ ಸಂಬಂಧ ಅಧಿಕಾರಿಗಳು ಪರಿಶೀಲನೆ ನಡೆಸಿ ವಿಚಾರಣೆ ನಡೆಸ್ತಿದ್ದಾರೆ.