SHIVAMOGGA | MALENADUTODAY NEWS | ಮಲೆನಾಡು ಟುಡೆ Dec 28, 2024
ರಾಜ್ಯ ಸರ್ಕಾರಿ ನೌಕರರ ವಲಯದಲ್ಲಿ ಮತ್ತೆ ಸಿ ಷಡಾಕ್ಷರಿಯ ಪವರ್ ಕಾಣ ಸಿಗಲಿದೆ. ಕುತೂಹಲ ಮೂಡಿಸಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರ ಸ್ಥಾನದ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ.
ಹಾಲಿ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಮರುಆಯ್ಕೆಯಾಗಿದ್ದಾರೆ. ತಮ್ಮ ಎದುರಾಳಿ ಅಭ್ಯರ್ಥಿ ಕೃಷ್ಣಗೌಡ ಅವರಿಗಿಂತ 65 ಮತಗಳನ್ನು ಹೆಚ್ಚಾಗಿ ಪಡೆದು, ಷಡಾಕ್ಷರಿ ಅವರು ಪುನರಾಯ್ಕೆಯಾದರು. ರಾಜ್ಯಾಧ್ಯಕ್ಷ ಸ್ಥಾನ ಕಣದಲ್ಲಿ ಸಿ.ಎಸ್. ಷಡಾಕ್ಷರಿ ಹಾಗೂ ಬಿ.ಪಿ. ಕೃಷ್ಣಗೌಡ ಇದ್ದರು. ಇಬ್ಬರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಸಿ.ಎಸ್. ಷಡಾಕ್ಷರಿ ಅವರು 507 ಮತಗಳನ್ನು ಪಡೆದರೆ, ಕೃಷ್ಣಗೌಡ 442 ಮತ ಪಡೆದು ಸೋಲನುಭವಿಸಿದರು. ಇದೇ ವೇಳೆ ರಾಜ್ಯಾಧ್ಯಕ್ಷರ ಸ್ಥಾನದ ಜತೆಗೆ ಖಜಾಂಚಿ ಸ್ನಾನಕ್ಕೂ ನಡೆದ ಚುನಾವಣೆಯಲ್ಲಿ ವಿ.ವಿ. ಶಿವರುದ್ರಯ್ಯ ಆಯ್ಕೆಯಾದರು. ಶಿವರುದ್ರಯ್ಯ ಅವರು 485 ಮತ ಪಡೆದರೆ, ಅವರ ಎದುರಾಳಿ ನಾಗರಾಜ ಜುಮ್ಮನ್ನವರ 467 ಮತ ಪಡೆದರು.
SUMMARY |CS Shadakshari re-elected as the state president of the State Government Employees Association
KEY WORDS | CS Shadakshari re-elected , state president of the State Government Employees Association