ಹಾರ್ನ್‌ ಮಾಡಿದ್ದನ್ನ ಪ್ರಶ್ನಿಸಿದ್ದಕ್ಕೆ ಕಿರಿಕ್‌ | ಕಿವಿಗೆ ಚಾಕುವಿನಿಂದ ಹಲ್ಲೆ | ಆರೋಪಿ ಅರೆಸ್ಟ್‌!

13

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 16, 2025 ‌‌ ‌‌

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಮಾಸೂರು ಸರ್ಕಲ್‌ ಬಳಿ ಅತಿಯಾಗಿ ಹಾರ್ನ್‌ ಮಾಡುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ ಕಲ್ಲಂಗಡಿ ಕೊಯ್ಯಲು ಬಳಸುವ ಚಾಕುವಿನಿಂದ ಯುವಕನ ಮೇಲೆ ಹಲ್ಲೆ ಮಾಡಲಾಗಿದೆ. ಈ ಸಂಬಂಧ ತಕ್ಷಣವೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿದ್ದಾರೆ. 

ಶಿಕಾರಿಪುರ ಪೇಟೆ ಮಾಸೂರು ಸರ್ಕಲ್‌ ಬೈಕ್‌ನಲ್ಲಿ ಬರುತ್ತಿದ್ದ ಯುವಕನೊಬ್ಬ ಪದೇ ಪದೇ ಹಾರ್ನ್‌ ಮಾಡುತ್ತಿದ್ದ, ಇದನ್ನ ಇನ್ನೊಬ್ಬ ಯುವಕ ಪ್ರಶ್ನೆ ಮಾಡಿ ಹಾರ್ನ್‌ ಮಾಡಬೇಡ ಎಂದಿದ್ದಾನೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಕಿರಿಕ್‌ ಆಗಿದೆ. ಈ ವೇಳೆ ಹಾರ್ನ್‌ ಮಾಡುತ್ತಿದ್ದ ಯುವಕ ಅಲ್ಲಿಯೇ ಕಲ್ಲಂಗಡಿಯ ಹಣ್ಣು ಮಾರುತ್ತಿದ್ದ ಸ್ಥಳದಲ್ಲಿ ಇದ್ದ ಚಾಕು ಎತ್ತಿಕೊಂಡು ಪ್ರಶ್ನೆ ಮಾಡಿದ ಯುವಕನ ಮೇಲೆ ಹಲ್ಲೆ ಮಾಡಿದ್ದಾನೆ. ಘಟನೆಯಲ್ಲಿ ಸಂತ್ರಸ್ತನ ಕಿವಿಗೆ ಗಾಯವಾಗಿದ್ದು, ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಶಿಕಾರಿಪುರ ಪೊಲೀಸರು ತನಿಖೆ ಆರಂಭಿಸಿದ್ದಾರೆ. 

Share This Article