ಶಿವಮೊಗ್ಗದಿಂದ ಮಹಾಕುಂಭಮೇಳಕ್ಕೆ ವಿಶೇಷ ಟ್ರೈನ್‌ | ದಿನಾಂಕ ಮತ್ತು ಟಿಕೆಟ್‌ ಬುಕ್ಕಿಂಗ್‌ ಯಾವಾಗ ಗೊತ್ತಾ?! ಸಂಸದರು ಹೇಳಿದ್ದೇನು

13

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 15, 2025 ‌‌ 

ಉಡುಪಿಯಿಂದ ಕುಂಭಮೇಳಕ್ಕೆ ವಿಶೇಷ ಟ್ರೈನ್‌ ಸಂಚಾರ ಒದಗಿಸಿದ ಬೆನ್ನಲ್ಲೆ ಇದೀಗ ಶಿವಮೊಗ್ಗದಿಂದಲೂ ವಿಶೇಷ ರೈಲು ಮಹಾಕುಂಬಮೇಳಕ್ಕೆ ತೆರಳಲಿದೆ. ಇದಕ್ಕಾಗಿ ವ್ಯವಸ್ಥೆ ಕೈಗೊಳ್ಳಲಾಗಿದ್ದು, ಈ ಬಗ್ಗೆ ಸಂಸದ ಬಿವೈ ರಾಘವೇಂದ್ರ ಮಾಹಿತಿ ಒದಗಿಸಿದ್ದಾರೆ. 

- Advertisement -

ಶಿವಮೊಗ್ಗ ಟು ಕುಂಭಮೇಳಕ್ಕೆ ವಿಶೇಷ ರೈಲು

ಪ್ರಯಾಗರಾಜ್‌ನಲ್ಲಿ ಮಹಾಕುಂಭ ಮೇಳ ನಡೆಯುತ್ತಿದೆ. ಈಗಾಗಲೇ ಕೋಟ್ಯಾಂತರ ಭಕ್ತರು ಕುಂಭಮೇಳಕ್ಕೆ ಹೋಗಿ ಬಂದಿದ್ದಾರೆ.ಈ ನಿಟ್ಟಿನಲ್ಲಿ ಅಲ್ಲಿಗೆ ತೆರಳಲಿಚ್ಛಿಸುವ ಮಲೆನಾಡಿನ ಭಕ್ತಾದಿಗಳಿಗೆ ವಿಶೇಷ ರೈಲು ಸೇವೆ ಒದಗಿಸಲಾಗಿದೆ. 

ಯಾವಾಗ ಹೊರಡುತ್ತೆ ವಿಶೇಷ ಟ್ರೈನ್‌ 

ಶಿವಮೊಗ್ಗದಿಂದ ಇದೇ ಫೆಬ್ರವರಿ 22 ರ ಶನಿವಾರ ಸಂಜೆ 4:40ಕ್ಕೆ ಶಿವಮೊಗ್ಗದಿಂದ (ರೈಲು ಸಂಖ್ಯೆ. 06223) ರಂದು ಹೊರಟು ಫೆಬ್ರವರಿ 24 ರ ಬೆಳಿಗ್ಗೆ 11:10ಕ್ಕೆ ಪ್ರಯಾಗರಾಜ್‌ ತಲುಪಲಿದೆ 

ಬಳಿಕ ಇದೇ ರೈಲು  ಫೆಬ್ರವರಿ 25ರಂದು ಬೆಳಿಗ್ಗೆ 5.40ಕ್ಕೆ ಪ್ರಯಾಗರಾಜ್‍ನಿಂದ (ರೈಲು ಸಂಖ್ಯೆ 06224) ಫೆಬ್ರವರಿ 27 ರ ಬೆಳಿಗ್ಗೆ 06:45ಕ್ಕೆ ಶಿವಮೊಗ್ಗ ತಲುಪಲಿದೆ 

ಟಿಕೆಟ್‌ ಬುಕ್ಕಿಂಗ್‌ ಯಾವಾಗ ಗೊತ್ತಾ

ಫೆಬ್ರವರಿ 15 ರ ಮಧ್ಯಾಹ್ನದ ನಂತರ ವಿಶೇಷ ರೈಲಿನ ಬುಕಿಂಗ್ ಸೇವೆ ಆರಂಭವಾಗಲಿದೆ ಎಂದು ಸಂಸದ ಬಿವೈಆರ್‌ ತಿಳಿಸಿದ್ದಾರೆ. ಅಲ್ಲದೆ  ಯಾತ್ರಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕಾಗಿ ಕೋರಿದ್ದಾರೆ. 

Malenadu Today

Malenadu Today

#MahaKumbhMela2025

 

SUMMARY |  special train for maha kumbh mela from shivamogga 

KEY WORDS | special train for maha kumbh mela from shivamogga, shivamogga to prayag raj train , shivamogga to kumbh mela train  

Share This Article
Leave a Comment

Leave a Reply

Your email address will not be published. Required fields are marked *